More

    ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಪ್ರಧಾನಿ ಮೋದಿ!

    ಚನ್ನೈ: ಸೋಮವಾರ ಉದ್ಘಾಟನೆ ಆಗಲಿರುವ ಅಯೋಧ್ಯಾ ಶ್ರೀರಾಮ ಮಂದಿರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ.

    ಇದನ್ನೂ ಓದಿ:ಕರ್ನಾಟಕ ಇನಿಂಗ್ಸ್​ ಮುನ್ನಡೆ ಸನಿಹ: ನಾಯಕ ಮಯಾಂಕ್​, ಪಡಿಕ್ಕಲ್​ ಭರ್ಜರಿ ಶತಕ

    ಪ್ರಾಣ ಪ್ರತಿಷ್ಠಾಪನೆಯಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು ತಮ್ಮೊಳಗಿನ ದೈವಿಕ ಶಕ್ತಿಯನ್ನು ಸ್ವಯಂ ಆವಾಹನೆ ಮಾಡಿಕೊಳ್ಳಬೇಕು ಎಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು 11 ದಿನದ ಅನುಷ್ಠಾನ ಕೈಗೊಳ್ಳುವ ಮೂಲಕ ತಮ್ಮನ್ನು ತಾವು ದೇವರ ಸೇವೆಗೆ ಸಮರ್ಪಿಸಿಕೊಂಡರು.

    ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಪ್ರಧಾನಿ ಮೋದಿ!

    ಇತ್ತ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಗೂ ಒಂದು ದಿನ ಮುಂಚಿತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಮೇಶ್ವರಂಗೆ ಭೇಟಿ ನೀಡಿದ್ದಾರೆ.

    ರಾಮಸೇತುವನ್ನು ನಿರ್ಮಿಸಿದ ಸ್ಥಳವೆಂದು ಹೇಳಲಾದ ಧನುಷ್ಕೋಡಿಯ ಅರಿಚಲ್ ಮುನೈ ಪಾಯಿಂಟ್‌ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಕಡಲತೀರದಲ್ಲಿ ಕೆಲ ಕಾಲ ಮೋದಿ ಪ್ರಾಣಾಯಾಮ ಮಾಡಿದರು. ದುರ್ಬೀನಿನ ಮೂಲಕ ಸಮುದ್ರವನ್ನು ವೀಕ್ಷಿಸಿದರು.

    ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಪ್ರಧಾನಿ ಮೋದಿ!

    ಇಂದು ಬೆಳಗ್ಗೆ 9.30ರ ಸುಮಾರಿಗೆ ಪ್ರಧಾನಿ ಮೋದಿ ಅವರು ಅರಿಚಲ್ ಮುನೈ ಪಾಯಿಂಟ್‌ಗೆ ಭೇಟಿ ನೀಡಿದರು. ಇದಾದ ಬಳಿಕ ಅಲ್ಲಿನ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಮೋದಿ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ‘ಅಗ್ನಿತೀರ್ಥ’ ಕಡಲತೀರದಲ್ಲಿ ಪುಣ್ಯಸ್ನಾನ ಮಾಡಿದ ಮೋದಿ, ನಂತರ ರಾಮೇಶ್ವರಂನ ರಾಮನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

    ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಪ್ರಧಾನಿ ಮೋದಿ!

    ರಾಮಮಂದಿರದ ಪ್ರಾಣ-ಪ್ರತಿಷ್ಠಾ ಸಮಾರಂಭ : ರಾಮಮಂದಿರದ ಪ್ರಾಣ-ಪ್ರತಿಷ್ಠೆಗಾಗಿ ಮೋದಿ ಸೋಮವಾರ ಅಯೋಧ್ಯೆಗೆ ಭೇಟಿ ನೀಡಲಿರುವ ಕಾರಣ ಈ ಭೇಟಿಗಳಿಗೆ ಹೆಚ್ಚಿನ ಮಹತ್ವವಿದೆ. ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಪಂಚವಟಿಯಿಂದ ಪ್ರಧಾನಿ ಮೋದಿ ಅವರ ರಾಮಾಯಾಣ ಯಾತ್ರೆ ಆರಂಭವಾಯಿತು.

    ‘ಕಾಟೇರಾ’ ಕಥೆ ಬರೆಸಿದ್ದು ನಾನೇ: ಶಾಕಿಂಗ್​ ಹೇಳಿಕೆ ನೀಡಿದ ಉಮಾಪತಿ ಶ್ರೀನಿವಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts