More

    ಮೋದಿ ಮತ್ತೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ; ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯಲ್ಲಿ ಪ್ರಧಾನಿಗೆ ಶೇಕಡಾ 76ರಷ್ಟು ಅನುಮೋದನೆ

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಜನಪ್ರಿಯರಾಗಿದ್ದಾರೆ ಎಂಬ ಸಂಗತಿಯು ಈಗಾಗಲೇ ಅನೇಕ ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ. ಈಗ ಮತ್ತೊಮ್ಮೆ ಈ ಸಂಗತಿ ಖಚಿತಪಟ್ಟಿದೆ.

    ಅಮೆರಿಕಾ ಮೂಲದ ಸಲಹಾ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಶೇಕಡಾ 76ರಷ್ಟು ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಸ್ಥಾನ ಪಡೆದಿದ್ದಾರೆ. ಈ ರೇಟಿಂಗ್ ಪಟ್ಟಿಯಲ್ಲಿ ನಂತರ ಸ್ಥಾನದಲ್ಲಿರುವ ಅಗ್ರ ನಾಯಕರಿಗಿಂತ ಶೇಕಡಾ 10 ಕ್ಕಿಂತ ಹೆಚ್ಚು ಅಂಕಗಳನ್ನು ಭಾರತದ ಪ್ರಧಾನ ಮಂತ್ರಿಯವರ ಅನುಮೋದನೆ ಹೊಂದಿದೆ.

    ‘ಮಾರ್ನಿಂಗ್ ಕನ್ಸಲ್ಟ್‌ನ ಸೆಪ್ಟೆಂಬರ್ ಸಮೀಕ್ಷೆಯಲ್ಲಿ ಶೇ. 76 ರ ಅನುಮೋದನೆಯೊಂದಿಗೆ ಪ್ರಧಾನಿ ಮೋದಿ ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ತಮ್ಮ ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹಿಂದಿನ ರೇಟಿಂಗ್‌ಗಳಲ್ಲೂ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದರು. ಏಪ್ರಿಲ್ ಸಮೀಕ್ಷೆಯಲ್ಲಿ ಶೇಕಡಾ 76 ರ ಅನುಮೋದನೆಯೊಂದಿಗೆ ಬಿಜೆಪಿ ನಾಯಕನನ್ನು ‘ಅತ್ಯಂತ ಜನಪ್ರಿಯ’ ನಾಯಕ ಎಂದು ಪ್ರಕಟಿಸಲಾಗಿತ್ತು,

    ಪ್ರಧಾನಿ ಮೋದಿ ನಂತರದಲ್ಲಿ ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (66%), ಸ್ವಿಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ (58%) ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ (49%) ಇದ್ದಾರೆ.

    ಗಮನಾರ್ಹವಾಗಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು 40% ಅನುಮೋದನೆಯ ರೇಟಿಂಗ್‌ನೊಂದಿಗೆ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ, ಈ ಸಂಸ್ಥೆಯು ಸಂಗ್ರಹಿಸಿದ ದತ್ತಾಂಶವು 22 ಜಾಗತಿಕ ನಾಯಕರ ಸಮೀಕ್ಷೆಯನ್ನು ಆಧರಿಸಿದೆ.

    ಕಳೆದ ಸೆಪ್ಟೆಂಬರ್ 6ರಿಂದ 12ರ ಅವಧಿಯಲ್ಲಿ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಮೋದಿ ಅವರು ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಸಮ್ಮತಿ ರೇಟಿಂಗ್ ಹೊಂದಿದ್ದಾರೆ. ಈ ಅಸಮ್ಮತಿ ರೇಟಿಂಗ್​ ಕೇವಲ ಶೇಕಡಾ 18ರಷ್ಟಿದೆ.

    ಅಸಮ್ಮತಿ ದರಗಳಿಗೆ ಸಂಬಂಧಿಸಿದಂತೆ, ಪಟ್ಟಿಯಲ್ಲಿರುವ ಅಗ್ರ 10 ನಾಯಕರ ಪೈಕಿ ಕೆನಡಾದ ಜಸ್ಟಿನ್ ಟ್ರುಡೊ ಅವರು ಶೇಕಡಾ 58ರ ಅತ್ಯಧಿಕ ಅಸಮ್ಮತಿ ರೇಟಿಂಗ್ ಹೊಂದಿದ್ದಾರೆ.

    ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಸಿಎಂ ಯಾರು? ಕೇಂದ್ರ ವೀಕ್ಷಕರನ್ನು ನೇಮಿಸಿದ ಬಿಜೆಪಿ

    ಇಸ್ರೋದಿಂದ ಮತ್ತೊಂದು ಸಾಧನೆ; ಸೂರ್ಯನ ಪೂರ್ಣ ಚಿತ್ರ ಸೆರೆಹಿಡಿದ ಆದಿತ್ಯ ಎಲ್​ 1

    ಬಿಯರ್​ ಪ್ರಿಯರಿಗೊಂದು ಕಹಿ ಸುದ್ದಿ… ಕರ್ನಾಟಕದಲ್ಲಿ ನ್ಯೂ ಇಯರ್​ ಸಂದರ್ಭ ಪಾನೀಯದ ಕೊರತೆ!

    po

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts