More

    ಪ್ರಧಾನಮಂತ್ರಿಯಿಂದ 15 ಶಿಕ್ಷಕರಿಗೆ, 51 ವಿದ್ಯಾಥಿರ್ಗಳಿಗೆ ಅಭಿನಂದನೆ ಪತ್ರ

    ವಿಜಯವಾಣಿ ಸುದ್ದಿಜಾಲ ಗದಗ
    ಸಿದ್ಧಲಿಂಗ ನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯನ್ನು ಬಸವರಾಜ ಹೊರಟ್ಟಿ ದಂಪತಿಗಳು ದತ್ತುಪಡೆದ ಮೇಲೆ ಜಿಲ್ಲೆಯಲ್ಲಿಯೇ ಒಂದು ಮಾದರಿ ಶಾಲೆಯಾಗಿ ರೂಪಗೊಂಡಿದೆ. ಪ್ರಸ್ತುತ ಪ್ರಧಾನ ಮಂತ್ರಿಗಳ ನೆಚ್ಚಿನ ಕಾರ್ಯಕ್ರಮ “ಪರೀಾಪೇ ಚರ್ಚಾ’ ಕಾರ್ಯಕ್ರಮದಲ್ಲಿ 15 ಜನ ಶಿಕ ಶಿಕಿಯರು ಹಾಗೂ 51 ವಿದ್ಯಾಥಿರ್ ವಿದ್ಯಾಥಿರ್ನಿಯರು ಭಾಗವಹಿಸಿ ಪ್ರಧಾನಮಂತ್ರಿಗಳಿಂದ ಅಭಿನಂದನಾ ಪತ್ರ ಪಡೆದಿದ್ದು, ಶಿಣ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು BEO ಆರ್​.ಎಸ್​.ಬುರಡಿ ಹೇಳಿದರು.
    ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಜರುಗಿದ ಪ್ರಧಾನಮಂತ್ರಿಗಳ “ಪರೀಾಪೇ ಚರ್ಚಾ’ ಕಾರ್ಯಕ್ರಮದಲ್ಲಿ ವಿಕಸಿತ ಭಾರತಕಟ್ಟುವ ದೃಢ ಸಂಕಲ್ಪ, ಗುಲಾಮಗಿರಿಯ ಮಾನಸಿಕತೆಯಿಂದ ಮುಕ್ತಿ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ, ಒಗ್ಗಟ್ಟಿನ ಬಲವರ್ಧನೆ, ಕರ್ತವ್ಯಗಳತ್ತ ಗಮನ, ಮುಂತಾದ ವಿಷಯಗಳ ಕುರಿತು ಪ್ರಧಾನ ಮಂತ್ರಿಗಳೊಂದಿಗೆ ಚಚಿರ್ಸಿದ ಶಿಕ್ಷಕರಿಗೆ ಮತ್ತು ವಿದ್ಯಾಥಿರ್ಗಳಿಗೆ ಪ್ರಧಾನಮಂತ್ರಿಗಳಿಂದ ದೊರೆತ ಅಭಿನಂದ ಪತ್ರ ವಿತರಿಸಿ ಅವರು ಮಾತನಾಡಿದರು.
    ಶಾಲೆಯು ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದುವುದರ ಜೊತೆಗೆ ಸಾಕಷ್ಟು ಕಳೆಗಟ್ಟಿದೆ. ಇದರ ಸದುಪಯೋಗವನ್ನು ವಿದ್ಯಾಥಿರ್ಗಳು ಮಾಡಿಕೊಳ್ಳಬೇಕು. ಇಲ್ಲಿ ಸಾಕಷ್ಟು ಪ್ರತಿಭಾವಂತ ಶಿಕ ಸಮೂಹ ಇದೆ. ಯಾವುದೇ ಪ್ರಚಾರ ಬಯಸದೇ ಕೆಲಸ ಮಾಡುವಂತಹ ಈ ಸಿಬ್ಬಂದಿಯ ಶ್ರಮ ಸಾರ್ಥಕವಾಗಿದೆ. ಇವರೆಲ್ಲರಿಗೂ ಶಿಣ ಇಲಾಖೆಯ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
    ಜಯಲಕ್ಷಿ$್ಮ ಅಣ್ಣಿಗೇರಿ, ಎಸ್​. ಆರ್​. ಹನಮಗೌಡ್ರ, ಎಸ್​. ಜಿ. ಕುಲಗುಡಿ, ಎಂ. ಐ. ಶಿವನಗೌಡ್ರ, ಎಂ. ಪಿ. ಸಾಂಬ್ರಾಣಿ, ಎಸ್​. ಬಿ. ಗುಳೇದವರ, ಎಸ್​. ಎಂ. ಪತ್ತಾರ, ಎಸ್​. ಎಸ್​. ಗಾಳಿ, ಆರ್​.ಐ. ಬಸರಿ, ಎಸ್​. ಎ. ಬಾಣದ, ಎಸ್​. ಎ. ಗದ್ದನಕೇರಿ ಹಾಗೂ ವಿದ್ಯಾಥಿರ್ಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts