More

    ಥ್ಯಾಂಕ್ಯೂ ಟ್ರಂಪ್ ಎಂದು ಮೋದಿ ಹೇಳಿದ್ದೇಕೆ?

    ನವದೆಹಲಿ: ಕೋವಿಡ್- 19 ನಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡಲು ಭಾರತಕ್ಕೆ ವೆಂಟಿಲೇಟರ್​ಗಳನ್ನು ನೀಡುವುದಾಗಿ ಘೋಷಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಧನ್ಯವಾದ ಅರ್ಪಿಸಿದ್ದಾರೆ.
    ಭಾರತಕ್ಕೆ ವೆಂಟಿಲೇಟರ್​​​ಗಳನ್ನು ನೀಡುವ ಕುರಿತು ಟ್ರಂಪ್​ ಮಾಡಿರುವ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಅವರು, ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳು. ನಾವೆಲ್ಲರೂ ಈ ಸಾಂಕ್ರಾಮಿಕ ರೋಗದ ವಿರುದ್ಧ ಒಟ್ಟಾಗಿ ಹೋರಾಡಬೇಕಿದೆ’ ಎಂದು ಹೇಳಿದ್ದಾರೆ.
    ಈ ಸಂದಿಗ್ಧ ಸಮಯದಲ್ಲಿ ಕರೊನಾ ವಿರುದ್ಧ ಹೋರಾಡಲು ಎಲ್ಲ ರಾಷ್ಟ್ರಗಳನ್ನು ಸಶಕ್ತಗೊಳಿಸುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
    ಭಾರತಕ್ಕೆ ವೆಂಟಿಲೇಟರ್​​ಗಳನ್ನು ಪೂರೈಸುವುದಾಗಿ ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತಿದೆ. ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡಲು ನಾವು ಭಾರತಕ್ಕೆ ಮತ್ತು ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡುತ್ತೇವೆ ಮತ್ತು ಲಸಿಕೆ ಅಭಿವೃದ್ಧಿಗೂ ನಾವು ಸಹಕಾರ ನೀಡುತ್ತೇವೆ, ಅಗೋಚರ ಶತ್ರುವಿನ ದಮನಕ್ಕಾಗಿ ಒಟ್ಟಾಗಿ ಹೋರಾಡಿ ಗೆಲ್ಲುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ.

    ಎಲ್ಲಿದ್ದಾರೆ ಪಂಚೇನ್​ ಲಾಮಾ? ಚೀನಾಗೆ ತಿವಿದ ಅಮೆರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts