More

    ಕ್ಷಮೆಯ ಮಾತುಗಳನ್ನಾಡಿದ ಪ್ರಧಾನಿ ನರೇಂದ್ರ ಮೋದಿ ; ಯಾಕೆ ಗೊತ್ತೇ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯ ಮಾತುಗಳನ್ನಾಡಿದ್ದಾರೆ. ಹೃದಯವಂತರಷ್ಟೇ ಕ್ಷಮಿಸುತ್ತಾರೆ. ದಯಾಶೀಲರಾಗಿರುವುದು ಹಾಗೂ ಕ್ಷಮಿಸುವುದು ನಮ್ಮ ಸಂಸ್ಕೃತಿಯ ಭಾಗ. ಯಾರೂ ಪರಸ್ಪರ ಕೆಟ್ಟ ಭಾವನೆಗಳನ್ನು ಇರಿಸಿಕೊಳ್ಳಬಾರದು ಎಂಬುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

    ಪ್ರಧಾನಿ ಮೋದಿ ಅವರು ಇದ್ದಕ್ಕಿದ್ದಂತೆ ಹೀಗೆ ಕ್ಷಮೆಯ ಕುರಿತ ಮಾತುಗಳನ್ನು ಆಡಲು ಮುಖ್ಯ ಕಾರಣ ಸಂವತ್ಸರಿ ಪರ್ವ. ಜೈನರಲ್ಲಿ ಆಚರಿಸಲಾಗುವ ಪರ್ಯುಷನ್‌ ಪರ್ವದ ಕುರಿತು ಮಾತನಾಡಿರುವ ಅವರು, ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ.

    ಪರ್ಯುಷನ್‌ ಪರ್ವದ ಕೊನೆಯ ದಿನ ಸಂವತ್ಸರಿ ಪರ್ವ. ಇದು ಕ್ಷಮೆ, ಅಹಿಂಸೆ ಹಾಗೂ ಮೈತ್ರಿಯ ಪ್ರತೀಕ ಎನ್ನುತ್ತ ಕ್ಷಮೆಯ ಮಹತ್ವದ ಕುರಿತು ಮಾತನಾಡಿದ ಮೋದಿ, ಕ್ಷಮಿಸುವುದು ಶಕ್ತಿವಂತನ ಗುಣ ಎಂದು ಗಾಂಧಿ ಆಗಾಗ ಹೇಳುತ್ತಿದ್ದರು. ಷೇಕ್ಸ್‌ಪಿಯರ್‌ ಕೂಡ ತನ್ನ ನಾಟಕ ʼಮರ್ಚೆಂಟ್‌ ಆಫ್‌ ವೆನಿಸ್‌ʼನಲ್ಲಿ ಕ್ಷಮೆಯಿಂದ ಎರಡು ರೀತಿಯ ಪ್ರಯೋಜನ ಇದೆ ಎಂದು ಹೇಳಿದ್ದಾರೆ. ಅಂದರೆ ಕ್ಷಮಿಸುವವನಿಗೂ, ಕ್ಷಮಿಸಲ್ಪಡುವವನಿಗೂ ದೇವರ ಆಶೀರ್ವಾದ ಲಭಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

    ಕಾಣೆಯಾದ ಅಪ್ಪನ ಹುಡುಕಲು ಹೋದ ಮಗನೂ ವಾಪಸ್‌ ಬರಲಿಲ್ಲ!; ಪವಾಡಸದೃಶವಾಗಿ ಬದುಕುಳಿದರೂ ಆಕೆಯ ಬಾಳೀಗ ಗೋಳು..

    ಮನೆಮನೆಗೂ ಬರಲಿದೆ ರವಿ ಬೆಳಗೆರೆಯ ‘ಹೇಳಿ ಹೋಗು ಕಾರಣ’; ಶೀಘ್ರದಲ್ಲೇ ದೃಶ್ಯರೂಪದಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts