More

    ಕೆಲವು ಪಕ್ಷಗಳಿಂದ ನಡೆಯುತ್ತಿದೆ ಭ್ರಷ್ಟರನ್ನು ರಕ್ಷಿಸುವ ಅಭಿಯಾನ: ವಿಪಕ್ಷಗಳ ವಿರುದ್ಧ ಕಿಡಿಕಾರಿದ ಮೋದಿ

    ನವದೆಹಲಿ: ಕೆಲವು ಪಕ್ಷಗಳು ಭ್ರಷ್ಟರನ್ನು ರಕ್ಷಿಸುವ ಅಭಿಯಾನ ಮಾಡುತ್ತಿವೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲ ಭ್ರಷ್ಟರೂ ಒಂದೇ ವೇದಿಕೆಯಲ್ಲಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.

    ದೆಹಲಿಯಲ್ಲಿ ಇಂದು ಬಿಜೆಪಿಯ ಸಭಾಂಗಣ ಹಾಗೂ ವಸತಿ ಸಂಕೀರ್ಣ ಉದ್ಘಾಟನೆ ಮಾಡಿದ ಅವರು, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.)ದ ಕ್ರಮಗಳ ವಿರುದ್ಧ ವಿರೋಧ ಪಕ್ಷಗಳ ನಾಯಕರ ಸಂಘಟಿತ ವಾಗ್ದಾಳಿ ವಿರುದ್ಧ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!

    ಭಾರತದ ಎಲ್ಲ ಭ್ರಷ್ಟ ಮುಖಗಳು ಈಗ ಒಂದಾಗಿ ವೇದಿಕೆ ಮೇಲ ಬರುತ್ತಿವೆ. ಭಾರತವು ಮಹಾನ್ ವಿಷಯಗಳ ಉತ್ತುಂಗದಲ್ಲಿರುವ ಈ ಸಮಯದಲ್ಲಿ ಭಾರತದ ಒಳಗೆ ಮತ್ತು ಹೊರಗೆ ಭಾರತ ವಿರೋಧಿ ಶಕ್ತಿಗಳು ಒಗ್ಗೂಡುತ್ತಿರುವುದು ಸಹಜವಾಗಿದೆ ಎಂದು ಮೋದಿ ಹೇಳಿದ್ದಾರೆ.

    ಇದನ್ನೂ ಓದಿ: ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಭಾರತ ಸಾಂವಿಧಾನಿಕ ಸಂಸ್ಥೆಗಳ ಭದ್ರ ಬುನಾದಿಯನ್ನು ಹೊಂದಿದೆ. ಹೀಗಾಗಿಯೇ ಅವರು ದಾಳಿಗೆ ಒಳಗಾಗಿದ್ದಾರೆ. ಅವರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗುತ್ತಿದೆ. ಆದರೆ ಸಂಸ್ಥೆಗಳು ಭ್ರಷ್ಟರ ಮೇಲೆ ದಾಳಿ ಮಾಡಿದಾಗ ಅವುಗಳ ವಿರುದ್ಧವೇ ಟೀಕೆ ಬರುತ್ತದೆ. ನ್ಯಾಯಾಲಯಗಳು ತೀರ್ಪು ನೀಡಿದರೆ ಅದನ್ನೂ ಪ್ರಶ್ನಾರ್ಹವಾಗಿ ನೋಡಲಾಗುತ್ತದೆ. ಕೆಲವು ಪಕ್ಷಗಳು ಭ್ರಷ್ಟರನ್ನು ರಕ್ಷಿಸುವ ಅಭಿಯಾನಕ್ಕಾಗಿ ಒಂದಾಗುತ್ತಿವೆ ಎಂದು ಮೋದಿ ಟೀಕಿಸಿದ್ದಾರೆ.

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts