More

    ಕೇಂದ್ರ ನೀಡಿರುವ ವೆಂಟಿಲೇಟರ್​ಗಳ ಆಡಿಟ್​ : ಪ್ರಧಾನಿ ಮೋದಿ ಆದೇಶ

    ನವದೆಹಲಿ : ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಒದಗಿಸಲಾಗಿರುವ ವೆಂಟಿಲೇಟರ್​​ಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ಕೂಡಲೇ ಆಡಿಟ್​ ಮಾಡಿ ವರದಿ ಸಲ್ಲಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದೇಶಿಸಿದ್ದಾರೆ. ಇಂದು ಭಾರತದ ಕೋವಿಡ್​ ಸನ್ನಿವೇಶವನ್ನು ಸಮೀಕ್ಷೆ ನಡೆಸಲು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಈ ನಿರ್ದೇಶನ ನೀಡಿದ್ದಾರೆ.

    “ಕೆಲವು ರಾಜ್ಯಗಳಲ್ಲಿ ವೆಂಟಿಲೇಟರ್​ಗಳು ಬಳಸಲ್ಪಡದೆ ಶೇಖರಿಸಿಡಲಾಗಿವೆ ಎಂಬ ವರದಿಗಳ ಬಗ್ಗೆ ಪಿಎಂ ಗಂಭೀರ ಕಾಳಜಿ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ನೀಡಲಾಗಿರುವ ವೆಂಟಿಲೇಟರ್​ಗಳ ಇನ್​​ಸ್ಟಲೇಷನ್ ಮತ್ತು ಆಪರೇಷನ್ ಬಗೆಗೆ ಕೂಡಲೇ ಒಂದು ಆಡಿಟ್ ನಡೆಸಬೇಕೆಂದು ನಿರ್ದೇಶನ ನೀಡಿದರು. ಅಗತ್ಯವಿದ್ದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ವೆಂಟಿಲೇಟರ್​ಗಳನ್ನು ಆಪರೇಟ್​ ಮಾಡುವ ಬಗ್ಗೆ ರಿಫ್ರೆಷರ್​ ತರಬೇತಿಯನ್ನು ಆರೋಗ್ಯಸೇವಾ ಕಾರ್ಯಕರ್ತರಿಗೆ ನೀಡಬೇಕು ಎಂದು ಹೇಳಿದ್ದಾರೆ” ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ.

    ಇದನ್ನೂ ಓದಿ: ಆಕ್ಸಿಜನ್ ಉಪಕರಣ : ಸ್ವಿಟ್ಜರ್​ಲ್ಯಾಂಡ್​ ಟು ಅಂಡಮಾನ್ ನಿಕೋಬಾರ್​

    ಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಇತರ ಸೂಚನೆಗಳೆಂದರೆ –

    * ಸ್ಥಳೀಯ ಸ್ತರಗಳಲ್ಲಿ ಕಂಟೈನ್​ಮೆಂಟ್​ ಯೋಜನೆಗಳನ್ನು ರೂಪಿಸಬೇಕು.
    * ಕರೊನಾ ಪಾಸಿಟಿವಿಟಿ ದರ ಹೆಚ್ಚಿರುವ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಬೇಕು.
    * ಮನೆ ಮನೆಗೆ ತೆರಳಿ ಪರೀಕ್ಷೆ ಮತ್ತು ಕಣ್ಗಾವಲು ಒದಗಿಸುವಂತೆ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಬೇಕು.
    * ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕದ ಪೂರೈಕೆಯ ಸರಿಯಾದ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು. (ಏಜೆನ್ಸೀಸ್)

    ಭೀಕರ ಕರೊನಾ ವೈರಸ್​ ಹುಟ್ಟು ಇನ್ನೂ ಸ್ಪಷ್ಟವಾಗಿಲ್ಲ : ವಿಜ್ಞಾನಿಗಳ ಅಸಮಾಧಾನ

    ಕೇರಳ ಲಾಕ್​ಡೌನ್ ವಿಸ್ತರಣೆ ; ನಾಲ್ಕು ಜಿಲ್ಲೆಗಳಲ್ಲಿ ಟ್ರಿಪಲ್ ಲಾಕ್​ಡೌನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts