More

    ಮೋದಿ ವಿರೋಧಿಯಾಗಿದ್ದ ಜ್ವಾಲಾ ಗುಟ್ಟಾ ಈಗ ಅಭಿಮಾನಿ ಆಗಿಬಿಟ್ಟರೇ?

    ಬೆಂಗಳೂರು: ವಿಶ್ವ ಚಾಂಪಿಯನ್‌ಷಿಪ್-ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆಯಾಗಿರುವ ಮಾಜಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಈ ಹಿಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಸಿಗಳನ್ನು ವಿರೋಧಿಸುತ್ತಲೇ ಬಂದವರು. ನಿಮ್ಮ ತಾಯಿ ಚೈನೀಸ್ ಆಗಿರುವುದರಿಂದ ನಿಮ್ಮ ಮೋದಿ ವಿರೋಧಿ ಮಾತುಗಳು ನಿರೀಕ್ಷಿತವೇ ಆಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳು ಜ್ವಾಲಾ ಗುಟ್ಟಾಗೆ ತಿರುಗೇಟು ನೀಡಿದ್ದೂ ಇದೆ. ಆದರೆ ಇದೇ ಜ್ವಾಲಾ ಗುಟ್ಟಾ ಅವರು ಗುರುವಾರ ನರೇಂದ್ರ ಮೋದಿ ಅವರ 70ನೇ ಜನ್ಮದಿನದ ಹಿನ್ನೆಲೆಯಲ್ಲಿ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಶುಭಾಶಯದ ಹೇಳಿಕೆಯಲ್ಲಿ ಮೋದಿಯನ್ನು ಕೊಂಡಾಡಿದ್ದಾರೆ. ಇದರಿಂದ ಜ್ವಾಲಾ ಗುಟ್ಟಾ ಅವರೀಗ ಮೋದಿ ಅಭಿಮಾನಿಯಾಗಿ ಬದಲಾಗಿಬಿಟ್ಟರೇ ಎಂಬ ಅಚ್ಚರಿಯ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

    ಮೋದಿ ಅವರು ತಮ್ಮ ಗುರಿಗಳ ಬಗ್ಗೆ ಅತ್ಯಂತ ನಿಖರತೆ ಹೊಂದಿದ್ದಾರೆ. ಅವರ ಈ ಗುಣ ಕ್ರೀಡಾಪಟುಗಳೆಲ್ಲರಿಗೂ ಮಾದರಿಯಾಗಿದೆ. ಅವರ ಆತ್ಮವಿಶ್ವಾಸದ ದೇಹಭಾಷೆಯನ್ನು ಭಾರತದ ಯುವಕರೆಲ್ಲರೂ ಮೈಗೂಡಿಕೊಳ್ಳಬೇಕು ಎಂದು ಜ್ವಾಲಾ ಗುಟ್ಟಾ ಅವರು ಮೋದಿಯನ್ನು ಹೊಗಳಿದ್ದಾರೆ.

    ಕ್ರೀಡಾಪಟುಗಳು ಯಾವಾಗಲೂ ಎದುರಾಳಿಯ ದೌರ್ಬಲ್ಯಗಳ ಬಗೆಗಿನ ಮಾಹಿತಿಯತ್ತ ಕಣ್ಣಿಟ್ಟಿರುತ್ತಾರೆ. ಎದುರಾಳಿಯನ್ನು ಬೇಗನೆ ಅರಿತುಕೊಂಡು ಸರಿಯಾದ ಹೆಜ್ಜೆ ಇಡುವ ಮೂಲಕ ಅದರಿಂದ ಲಾಭ ಪಡೆದುಕೊಳ್ಳಬೇಕು. ಈ ಮೂಲಕ ಜಯಶಾಲಿಯಾಗಿ ಹೊರಹೊಮ್ಮಬಹುದು. ಮೋದಿ ಅವರ ಈ ಸಾಮರ್ಥ್ಯವೂ ಅವರನ್ನು ಮೇಲಕ್ಕೇರಿಸಿದೆ. ಯುವಕರ ನಾಡಿ ಮಿಡಿತ ಅವರಿಗೆ ಚೆನ್ನಾಗಿ ಗೊತ್ತಿದೆ. ಇದರಿಂದಾಗಿಯೇ ಅವರು ಕ್ರೌಡ್-ಪುಲ್ಲರ್ ಆಗಿದ್ದಾರೆ ಎಂದು ಜ್ವಾಲಾ ಗುಟ್ಟಾ ಹೊಗಳಿದ್ದಾರೆ.

    ಇದನ್ನೂ ಓದಿ: VIDEO: ವಿಶ್ವಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಜಯಿಸಿದ ಆಸ್ಟ್ರೇಲಿಯಾ

    ಮೋದಿ ಅವರೆಂದೂ ಟೀಕೆಗಳಿಂದ ವಿಚಲಿತರಾಗುವುದಿಲ್ಲ. ಗುರಿ ಕಡೆಗಿನ ಅವರ ಓಟವೂ ನಿಲ್ಲುವುದಿಲ್ಲ. ಆದರೆ ಟೀಕಾಕಾರರ ಮಾತುಗಳನ್ನು ಖಂಡಿತವಾಗಿಯೂ ಗಮನಿಸುತ್ತಿರುತ್ತಾರೆ ಮತ್ತು ಅವುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ ಸಾರ್ವಜನಿಕವಾಗಿ ಅವರೆಂದು, ಬೇರೆಯವರು ಏನೆಲ್ಲ ಹೇಳುತ್ತಿದ್ದಾರೆ ಎಂಬುದು ತಮ್ಮ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ತೋರಿಸಿಕೊಳ್ಳುವುದಿಲ್ಲ ಎಂದು ಜ್ವಾಲಾ ಗುಟ್ಟಾ ಹೇಳಿದ್ದಾರೆ.

    ಕ್ರೀಡೆಯಲ್ಲಿ ಯಾವಾಗಲೂ ಕೋಚ್‌ಗಳು ಕ್ರೀಡಾಪಟುಗಳಿಗೆ, ನೀವು ನಿಮ್ಮ ನಿರ್ವಹಣೆಯ ಮೇಲೆ ಗಮನ ಇಡಿ, ಉತ್ತಮ ಲಿತಾಂಶ ಅದನ್ನು ಹಿಂಬಾಲಿಸುತ್ತದೆ ಎಂದು ಹೇಳುತ್ತಿರುತ್ತಾರೆ. ಮೋದಿ ಕೂಡ ಇದೇ ರೀತಿ ದೇಶದ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಪುನರುತ್ಥಾನಕ್ಕೆ ನೆರವಾಗುತ್ತಿದ್ದಾರೆ. ಯಾವುದೇ ಕೆಲಸವನ್ನು ಅವರು ನಿರ್ವಹಿಸುತ್ತಿರಲಿ. ಅದು ಪಕ್ಷದ ಸಾಮಾನ್ಯ ಕಾರ್ಯಕರ್ತ, ಗುಜರಾತ್ ಮುಖ್ಯಮಂತ್ರಿ ಅಥವಾ ದೇಶದ ಪ್ರಧಾನಿ. ಅವರು ತಮ್ಮ ಶ್ರೇಷ್ಠ ಕೆಲಸವನ್ನೇ ನಿರ್ವಹಿಸುವ ತುಡಿತ ಹೊಂದಿರುತ್ತಾರೆ. ವಿವಿಧ ಕ್ಷೇತ್ರಗಳ ಜನರಿಂದ ಕಲಿಯಲು ಪ್ರಯತ್ನಿಸುವ ಅವರ ಗುಣವೂ ಅಪೂರ್ವವಾದುದು ಎಂದು ಜ್ವಾಲಾ ಗುಟ್ಟಾ ಕೊಂಡಾಡಿದ್ದಾರೆ.

    ಭಾರತೀಯ ಕ್ರೀಡಾಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮೋದಿ ಅವರ ಆಸಕ್ತಿಯನ್ನೂ ಜ್ವಾಲಾ ಗುಟ್ಟಾ ಪ್ರಶಂಸಿಸಿದ್ದು, ಬಾಲಕಿಯರು ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿರುವ ಬಗ್ಗೆ, ಯೋಗದ ಮೇಲಿನ ಪ್ರೀತಿ ಮತ್ತು ಖೇಲೋ ಇಂಡಿಯಾ, ಫಿಟ್ ಇಂಡಿಯಾ ಕಾನ್ಸೆಪ್ಟ್‌ನ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹೈದರಾಬಾದ್‌ನ 37 ವರ್ಷದ ಜ್ವಾಲಾ ಗುಟ್ಟಾ ಇತ್ತೀಚೆಗೆ ಕಾಲಿವುಡ್ ನಟ ವಿಷ್ಣು ವಿಶಾಲ್ ಜತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ವಿಚ್ಛೇದಿತೆ ಜ್ವಾಲಾ ಕಳೆದ ಕೆಲ ವರ್ಷಗಳಿಂದ ವಿಷ್ಣು ವಿಶಾಲ್ ಜತೆಗೆ ಡೇಟಿಂಗ್‌ನಲ್ಲಿದ್ದರು.

    ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಕ್ರೀಡಾ ತಾರೆಯರು ಏನೇನು ವಿಷ್ ಮಾಡಿದರು ಗೊತ್ತೇ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts