ಬೆಂಗಳೂರು: ಬಿಎಂಆರ್ಸಿಎಲ್ನಿಂದ ನಿರ್ಮಾಣವಾಗಿರುವ ನೂತನ ವೈಟ್ಫೀಲ್ಡ್ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದು (ಮಾ.25) ಹಸಿರು ನಿಶಾನೆ ತೋರಿದರು.
Karnataka | PM Modi inaugurates Whitefield (Kadugodi) to Krishnarajapura line of Bengaluru Metro pic.twitter.com/C07MbTMxU7
— ANI (@ANI) March 25, 2023
ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ, ಜನಸಾಮಾನ್ಯರಂತೆ ಮೆಟ್ರೋ ಟಿಕೆಟ್ ಕೌಂಟರ್ ಬಳಿ ತೆರಳಿ, ಟಿಕೆಟ್ ಪಡೆದು ಮೆಟ್ರೋದಲ್ಲಿ ಸಂಚಾರ ಮಾಡಿದರು. ಈ ವೇಳೆ ಮೆಟ್ರೋ ರೈಲಿನ ಒಳಗೆ ವಿದ್ಯಾರ್ಥಿಗಳು ಹಾಗೂ ಬಿಎಂಆರ್ಸಿಎಲ್ ಸಿಬ್ಬಂದಿ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಪ್ರಧಾನಿ ಮೆಟ್ರೋ ಸವಾರಿಯ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಥ್ ನೀಡಿದರು. ವೈಟ್ಫೀಲ್ಡ್ನಿಂದ ಸತ್ಯಸಾಯಿ ಆಸ್ಟತ್ರೆ ನಿಲ್ದಾಣದವರೆಗೂ ಒಟ್ಟು ಐದು ನಿಮಿಷಗಳ ಕಾಲ ಪ್ರಧಾನಿ ಮೋದಿ ಸಂಚಾರ ಮಾಡಿದರು.
ಇದನ್ನೂ ಓದಿ: ವಿಶ್ವೇಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ; ಮೆಡಿಕಲ್ ಕಾಲೇಜು ಲೋಕಾರ್ಪಣೆ
ಅಂದಹಾಗೆ ವೈಟ್ಫೀಲ್ಡ್ ನೇರಳೆ ಮಾರ್ಗದ ವಿಸ್ತೃತ ಮಾರ್ಗವಾಗಿದೆ. 4,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಕೆ.ಆರ್.ಪುರಂನಿಂದ ವೈಟ್ಫೀಲ್ಡ್ವರೆಗೆ ನೂತನ ಮಾರ್ಗ ಇದಾಗಿದ್ದು, 12 ಮೆಟ್ರೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ.
ಮಧ್ಯಾಹ್ನ 3.20ಕ್ಕೆ ದಾವಣಗೆರೆಗೆ ತೆರಳಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪದ ಮಹಾ ಸಂಗಮದಲ್ಲಿ ಭಾಗವಹಿಸುವರು. ಕಾರ್ಯಕ್ರಮ ಮುಗಿದ ನಂತರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ವಾಪಸಾಗುವರು. (ದಿಗ್ವಿಜಯ ನ್ಯೂಸ್)
ಬಿಜೆಪಿ ಸರ್ಕಾರ ಬಡವರ ಸೇವೆಯನ್ನು ಸರ್ವೋಚ್ಛ ಸೇವೆಯೆಂದು ಭಾವಿಸಿದೆ: ಪ್ರಧಾನಿ ಮೋದಿ
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ವಿರಾಮ; ಹೋರಾಟ ಸ್ಥಗಿತಗೊಳಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ