More

    ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

    ಶಿವಮೊಗ್ಗ: ಕುವೆಂಪು ನಾಡು ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ಇಂದು (ಫೆ.27) ಉದ್ಘಾಟಿಸಿದರು. ವಿಶೇಷ ಏನೆಂದರೆ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಹುಟ್ಟುಹಬ್ಬ ಕೂಡ ಹೌದು.

    ಇಂದು ಬೆಳಗ್ಗೆ 11.40ಕ್ಕೆ ವಿಶೇಷ ವಿಮಾನದ ಮೂಲಕ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬಂದಿಳಿದರು. ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​ವೈ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ ಪ್ರಧಾನಿ ಟರ್ಮಿನಲ್​ ವೀಕ್ಷಣೆ ಮಾಡಿದರು.

    ಇದನ್ನೂ ಓದಿ: ಬೆಳಗಾವಿಯಲ್ಲಿ ಪ್ರಧಾನಿ ರೋಡ್ ಶೋ ಹಿನ್ನೆಲೆ; 10 ಕ್ವಿಂಟಾಲ್ ಹೂ ಸಿದ್ಧಗೊಳಿಸಿದ ಕಾರ್ಯಕರ್ತರು

    ವಿಮಾನ ನಿಲ್ದಾಣದ ಉದ್ಘಾಟನೆಗೆಂದು ಶಿವಮೊಗ್ಗಕ್ಕೆ ಆಗಮಿಸಿರುವ ಪ್ರಧಾನಿ ಮೋದಿಗೆ ಶ್ರೀಗಂಧದ ಉಡುಗೊರೆ ನೀಡಲಾಯಿತು. ವಿಮಾನ ನಿಲ್ದಾಣದ ಟರ್ಮಿನಲ್ ಮಾದರಿಯನ್ನು ಕಲಾವಿದರು ಶ್ರೀಗಂಧದಲ್ಲಿ ನಿರ್ಮಾಣ ಮಾಡಿದ್ದು, ಇದುವರೆಗೂ ಯಾರೂ ಪಡೆಯದ ವಿನೂತನ ಉಡುಗೊರೆಯನ್ನು ಪ್ರಧಾನಿ ಮೋದಿ ಪಡೆದರು. ಶ್ರೀಗಂಧದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿಯ ಪ್ರತಿಕೃತಿ ನಿರ್ಮಾಣವಾಗಿದ್ದರೆ, ಸ್ಮರಣಿಕೆಯ ಕೆಳಭಾಗವನ್ನು ಬೀಟೆ ಹಾಗೂ ಶಿವನೆ ಮರದಿಂದ ತಯಾರಿಸಲಾಗಿದೆ. ಸಾಗರದ ಕಲಾವಿದರು ಈ ವಿಶೇಷ ಕಲಾಕೃತಿ ಸೃಷ್ಟಿಸಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿಗೆ ಶಿವಮೊಗ್ಗ ಜನತೆಯ ಪರವಾಗಿ ವಿಶೇಷ ಉಡುಗೊರೆ ನೀಡಲಾಯಿತು.

    ಶ್ರೀಗಂಧದ ಸ್ಮರಣಿಕೆಯ ಜೊತೆಗೆ ಅಡಕೆ ಹಾಳೆಯಲ್ಲಿ ಮಾಡಿರುವ ಪೇಟ ಹಾಗೂ ಅಡಕೆಯಲ್ಲಿ ಮಾಡಿರುವ ಹಾರ ಹಾಕಿ ಪ್ರಧಾನಿ ಮೋದಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಡಕೆ ಮಲೆನಾಡಿನ ಟ್ರೇಡ್ ಮಾರ್ಕ್ ಆಗಿರುವುದರಿಂದ ಅಡಕೆ ಹಾಳೆಯಲ್ಲಿ ತಯಾರಿಸಿರುವ ಪೇಟ ಹಾಗೂ ಅಡಕೆ ಹಾರ ಹಾಕಿ ಪ್ರಧಾನಿಯನ್ನು ಗೌರವಿಸಲಾಯಿತು. (ದಿಗ್ವಿಜಯ ನ್ಯೂಸ್​)

    ಮಾರ್ಚ್ ಮೂರನೇ ವಾರ ಬೆಂಗಳೂರು ಹಬ್ಬ: ಜನಮನ ಗೆಲ್ಲಲು ಬಿಜೆಪಿ ಪ್ಲ್ಯಾನ್​

    ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ: ಮಲೆನಾಡಲ್ಲಿ ನಮೋ ಮೋಡಿ​

    ಪ್ರವಾಹ ಪರಿಹಾರ, ಬಹಿರಂಗ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯಗೆ ಸಚಿವ ಆರ್.ಅಶೋಕ್ ಪಂಥಾಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts