More

    ಮಾರ್ಚ್ ಮೂರನೇ ವಾರ ಬೆಂಗಳೂರು ಹಬ್ಬ: ಜನಮನ ಗೆಲ್ಲಲು ಬಿಜೆಪಿ ಪ್ಲ್ಯಾನ್​

    ಬೆಂಗಳೂರು: ಬೆಂಗಳೂರು ಮಹಾನಗರದ ಅಭಿವೃದ್ಧಿಯನ್ನು ದೊಡ್ಡ ಪ್ರಮಾಣದಲ್ಲಿ ಬಿಂಬಿಸಿ, ಹೊಸ ಹೊಳಪು ನೀಡಲೆಂದು ಮಾರ್ಚ್ ಮೂರನೇ ವಾರದಲ್ಲಿ ಬೆಂಗಳೂರು ಹಬ್ಬ ಆಯೋಜಿಸಲು ರಾಜ್ಯ ಸರ್ಕಾರ ಪ್ಲ್ಯಾನ್ ಮಾಡಿದೆ.

    ಚುನಾವಣೆ ಹೊಸ್ತಿಲಲ್ಲಿ ಅದ್ದೂರಿ ಉತ್ಸವ ಹಮ್ಮಿಕೊಂಡು ಜನರ ಮನಗೆಲ್ಲುವ ತಂತ್ರಗಾರಿಕೆ ರೂಪಿಸಿದೆ. ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಬಳಿ ಬೃಹತ್ ಪ್ರಮಾಣದಲ್ಲಿ ಸಂಘಟಿಸಲು ಚಿಂತನೆ ನಡೆಸಿದೆ. ಬೆಂಗಳೂರು ಉತ್ಸವ ಎರ್ಪಡಿಸುವ ಕುರಿತು ಮಂಗಳವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ರ‍್ಯಾಗಿಂಗ್​ಗೆ ವೈದ್ಯಕೀಯ ವಿದ್ಯಾರ್ಥಿನಿ ಬಲಿ: ವಾಟ್ಸ್​ಆ್ಯಪ್​ ಚಾಟ್​ನಿಂದ ಸಿಕ್ಕಿಬಿದ್ದ ಸೀನಿಯರ್​ ಸ್ಟೂಡೆಂಟ್​

    ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಬೆಂಗಳೂರು ಹಬ್ಬದ ಪೂರ್ವಭಾವಿ ಸಭೆಯು ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮಕ್ಷಮ ಸೋಮವಾರ ನಡೆಯಿತು.

    ಪ್ರತಿಮೆ ಅನಾವರಣ
    ವಿಧಾನಸೌಧ ಮುಂಭಾಗದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ರಾಂತಿಯೋಗಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮಾರ್ಚ್ 23 ಅಥವಾ 24ರಂದು ನೆರವೇರಿಸಲು ನಿರ್ಧರಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಪ್ರವಾಹ ಪರಿಹಾರ, ಬಹಿರಂಗ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯಗೆ ಸಚಿವ ಆರ್.ಅಶೋಕ್ ಪಂಥಾಹ್ವಾನ

    ಬೆಂಗಳೂರು-ಮೈಸೂರು ದಶಪಥ ಸಂಚಾರಕ್ಕೆ ಟೋಲ್ ಸಂಗ್ರಹ; ಇಲ್ಲಿದೆ​ ದರ ಪಟ್ಟಿ…

    ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ: ಮಲೆನಾಡಲ್ಲಿ ನಮೋ ಮೋಡಿ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts