More

    ಎರಡು ದೇಶಗಳ ದಿಗ್ಗಜರ ಆಲಿಂಗನ; ಮೋದಿ ಮತ್ತು ಟ್ರಂಪ್​ ಅಹಮದಾಬಾದ್​ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಅದೆಷ್ಟುಸಲ ಅಪ್ಪಿಕೊಂಡರು ಗೊತ್ತಾ?

    ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಡುವೆ ಉತ್ತಮ ಬಾಂಧವ್ಯ ಇದೆ. ಡೊನಾಲ್ಡ್​ ಟ್ರಂಪ್​ ಯಾವಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ಹೆಸರಿಸುವಾಗಲೂ ನನ್ನ ಸ್ನೇಹಿತ ಎಂದೇ ಉಲ್ಲೇಖಿಸುತ್ತಾರೆ.

    ಹಾಗೇ ಸೋಮವಾರ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಕೂಡ ಈ ಇಬ್ಬರು ದಿಗ್ಗಜರ ನಡುವಿನ ಬಾಂಧವ್ಯ ಎದ್ದು ಕಾಣುತ್ತಿತ್ತು.

    ನರೇಂದ್ರ ಮೋದಿಯವರು ಟ್ರಂಪ್​ ಅವರನ್ನು ಯಾವಾಗಿನಂತೆ ಅಪ್ಪಿಕೊಂಡು ಸ್ವಾಗತಿಸಿದರು. ಅದಾದ ಬಳಿಕ ಅಹಮದಾಬಾದ್​ ಕಾರ್ಯಕ್ರಮ ಮುಕ್ತಾಯ ಆಗುವಷ್ಟರಲ್ಲಿ ಇವರಿಬ್ಬರೂ ಆರು ಬಾರಿ ಪರಸ್ಪರ ತಬ್ಬಿಕೊಂಡಿದ್ದಾರೆ.
    ನರೇಂದ್ರ ಮೋದಿಯವರು ಸ್ವಲ್ಪ ವಿಭಿನ್ನವಾಗಿ ಆಲಿಂಗನ ಮಾಡಿಕೊಳ್ಳುತ್ತಾರೆ. ಹಾಗೇ ಹಸ್ತಲಾಘವ (ಶೇಕ್​​ಹ್ಯಾಂಡ್​) ಮಾಡುವುದರಲ್ಲೂ ಭಿನ್ನತೆ ಇದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಏರ್​ಫೋರ್ಸ್​-1 ವಿಮಾನದಿಂದ ಕೆಳಗೆ ಇಳಿಯುತ್ತಲೇ ನರೇಂದ್ರ ಮೋದಿಯವರು ಅವರನ್ನು ಎಂದಿನಂತೆ ಆಲಿಂಗಿಸಿಕೊಂಡು ಸ್ವಾಗತಿಸಿದರು.

    ಅದಾದ ಮೇಲೆ ಮೊಟೆರಾ ಸ್ಟೇಡಿಯಂಗೆ ಪ್ರವೇಶ ಮಾಡಿದಾಗ ಎರಡು ಬಾರಿ ಪರಸ್ಪರ ಅಪ್ಪಿಕೊಂಡಿದ್ದಾರೆ. ನರೇಂದ್ರ ಮೋದಿ ಮತ್ತು ಡೊನಾಲ್ಡ್​ ಟ್ರಂಪ್ ಭಾಷಣ ಮುಗಿಸಿದಾಗಲೂ ಒಬ್ಬರಿಗೊಬ್ಬರು ಆಲಿಂಗಿಸಿಕೊಳ್ಳುವ ಮೂಲಕ ಶುಭಕೋರಿಕೊಂಡರು. ಒಟ್ಟಿನಲ್ಲಿ ಮೊಟೆರಾ ಕ್ರೀಡಾಂಗಣದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಆರು ಬಾರಿ ಆಲಿಂಗಿಸಿಕೊಂಡಿದ್ದಾರೆ.

    ನಿನ್ನೆ ನಡೆದ ನಮಸ್ತೆ ಟ್ರಂಪ್​ ಅದ್ದೂರಿ ಸಮಾರಂಭಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು. ಅವರೆಲ್ಲರ ಸಮ್ಮುಖದಲ್ಲಿ ಟ್ರಂಪ್​ ನರೇಂದ್ರ ಮೋದಿ ಹಾಗೂ ಭಾರತವನ್ನು ಮನಸಾರೆ ಹೊಗಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts