More

    ‘ಈ ಬಾರಿ ನಾನ್ನೂರು ಮೀರಿ..’: ಇಸಿ ವೇಳಾಪಟ್ಟಿ ಪ್ರಕಟಿಸಿದ ನಂತರ ಪ್ರಧಾನಿ ಮೋದಿ ವಿಶ್ವಾಸ ಹೀಗಿದೆ ನೋಡಿ..

    ನವದೆಹಲಿ: ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ಏಳು ಹಂತದ ವೇಳಾಪಟ್ಟಿಯನ್ನು ಘೋಷಿಸಿದ ಕೂಡಲೇ, X ನಲ್ಲಿನ ಪೋಸ್ಟ್‌ಗಳ ಸರಣಿಯಲ್ಲಿ ಪ್ರಧಾನಿ ಮೋದಿ, ತಮ್ಮ ಸರ್ಕಾರದ 10 ವರ್ಷಗಳಲ್ಲಿ ಭಾರತ ಕಂಡ “ಅದ್ಭುತ ತಿರುವು” ಏನೆಂಬುದನ್ನು ವಿವರಿಸಿದರಲ್ಲದೆ, ಅಬ್ ಕಿ ಬಾರ್, 400 ಪಾರ್’ ಅಂದರೆ ಈ ಬಾರಿ 400 ಸ್ಥಾನ ಮೀರಿ ಜಯಭೇರಿ ಬಾರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ‘ಯಾವ ಭ್ರಷ್ಟ ವ್ಯಕ್ತಿಯೂ ತಪ್ಪಿಸಿಕೊಳ್ಳುವುದಿಲ್ಲ’ ಬಿಆರ್‌ಎಸ್ ನಾಯಕಿ ಕವಿತಾ ಬಂಧನಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ

    ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು(ಎನ್​ಡಿಎ) ಚುನಾವಣೆಗೆ ಸಂಪೂರ್ಣ ಸಿದ್ಧವಾಗಿದೆ. ಪ್ರತಿಪಕ್ಷಗಳಿಗೆ ಸೀಟು ಇಲ್ಲ. ಅಧಿಕಾರವೂ ಇಲ್ಲ ಎಂದು ಜನರು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

    10 ವರ್ಷದಲ್ಲಿ ಭಾರತ ಕಂಡ “ಅದ್ಭುತ ಬದಲಾವಣೆ” ಮುಂದಿಟ್ಟು ಆಡಳಿತ ಮೈತ್ರಿ ಕೂಟ ಮತ ಕೇಳಲಿದೆ. ಉತ್ತಮ ಆಡಳಿತ ಮತ್ತು ಪ್ರತಿ ಕ್ಷೇತ್ರಕ್ಕೆ ನಿಷ್ಠಾವಂತ ಸೇವೆ ಮುಂದಿಟ್ಟು ಜನರ ಮನವೊಲಿಸಿ ಮತ್ತೆ ಅಧಿಕಾರಕ್ಕೆ ಬರುವುದಾಗಿ ಭರವಸೆ ವ್ಯಕ್ತಪಡಿಸಿದರು.

    ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಇದಾಗಿದೆ. ಚುನಾವಣೆ ದಿನಾಂಕಗಳನ್ನು ಇಸಿ ಘೋಷಿಸಿದೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳು ಚುನಾವಣೆಗೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ (‘ಮತ್ತೊಮ್ಮೆ ಮೋದಿ ಸರ್ಕಾರ್’) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಪ್ರಧಾನಿ ಬರೆದಿದ್ದಅರೆ.

    ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಪುನರುಚ್ಚರಿಸಿದ ಪ್ರಧಾನಿ, ತಮ್ಮ ಮೂರನೇ ಅವಧಿಯಲ್ಲಿ ಬಡತನ ಮತ್ತು ಭ್ರಷ್ಟಾಚಾರದ ವಿರುದ್ಧದ ಯುದ್ಧವು ಇನ್ನಷ್ಟು ವೇಗದಲ್ಲಿ ಮುಂದುವರಿಯುತ್ತದೆ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.

    ಮೂರನೇ ಅವಧಿಯಲ್ಲಿ ಮಾಡಬೇಕಾದ ಕೆಲಸ ಬಹಳಷ್ಟಿದೆ. ಕಳೆದ ದಶಕವು 70 ವರ್ಷ ಆಳಿದವರು ಸೃಷ್ಟಿಸಿದ ಅಂತರವನ್ನು ತುಂಬುವ ಕೆಲಸ ನಡೆಯುತ್ತಿದೆ. ಭಾರತವು ಸಮೃದ್ಧ ಮತ್ತು ಸ್ವಾವಲಂಬಿಯಾಗಲಿದೆ. ನಾವು ಭಾರತವನ್ನು ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ಯುವಕರ ಕನಸುಗಳನ್ನು ನನಸಾಗಿಸಲು ನಾವು ನಮ್ಮ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

    ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರ್ಪಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts