More

    ಸ್ವಾತಂತ್ರ್ಯ ಸಿಕ್ಕಾಗಿನಿಂದ ರಕ್ಷಣಾ ಒಪ್ಪಂದಗಳಲ್ಲಿ ಕಾಂಗ್ರೆಸ್​ ಕಮಿಷನ್​ ಪಡೆಯುತ್ತಿತ್ತು: ಪ್ರಧಾನಿ ಮೋದಿ

    ಮಂಡಿ: ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಸಮರ ಇನ್ನೇನು ಶುರುವಾಗಲಿದ್ದು ಪ್ರಧಾನಿ ಮೋದಿ ಪ್ರಚಾರಕ್ಕೆ ಇಳಿದಿದ್ದಾರೆ. ಮಂಡಿ ಪ್ರದೇಶದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಕಾಂಗ್ರೆಸ್​ ದೇಶದ ಸುರಕ್ಷೆ ಮತ್ತು ಅಭಿವೃದ್ಧಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಹಿಮಾಚಲ ಪ್ರದೇಶದಲ್ಲಿ ನಡೆದ ಮೊದಲ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ‘ಕಾಂಗ್ರೆಸ್​ ಸಮಯದಲ್ಲಿ ನಡೆದ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ ಯಾವಾಗಲೂ ಕಮಿಷನ್​ ಪಡೆಯುತ್ತಿದ್ದರು. ಇದರಿಂದಾಗಿ ಸೇನಾ ಪಡೆಗಳಿಗೆ ಆಯುಧಗಳು ಬೇಕಾದಾಗ ತಲುಪುತ್ತಿರಲಿಲ್ಲ’ ಎಂದು ಆರೋಪಿಸಿದರು.

    ‘ಸ್ವಾತಂತ್ರ್ಯ ಸಿಕ್ಕಿದ ನಂತರ ಕಾಂಗ್ರೆಸ್​ ನಡೆಸಿದ ಹಗರಣ ಸುರಕ್ಷಾ ಕ್ಷೇತ್ರದಲ್ಲೇ ಆಗಿತ್ತು. ಕಾಂಗ್ರೆಸ್​ ಅಧಿಕಾರದಲ್ಲಿ ಇದ್ದಾಗೆಲ್ಲ ಡಿಫೆನ್ಸ್​ ಡೀಲ್​ಗಳಲ್ಲಿ ಬೇಕಾದಷ್ಟು ಬ್ರೋಕರೇಜ್​ ಪಡೆದುಕೊಂಡಿದೆ’ ಎಂದು ಭಾಷಣದಲ್ಲಿ ವಾಗ್ದಾಳಿ ನಡೆಸಿದರು.

    ಹಿಮಾಚಲದಲ್ಲಿ ನವೆಂಬರ್​ ಹನ್ನೆರಡರಿಂದ ಚುನಾವಣೆ ಪ್ರಾರಂಭ ಆಗಲಿದೆ. ಮತ ಎಣಿಕೆ ಡಿಸೆಂಬರ್​ ಎಂಟಕ್ಕೆ ಶುರುವಾಗಲಿದೆ. ಚುನಾವಣೆಗೆ ಇನ್ನೊಂದು ವಾರವೇ ಬಾಕಿ ಇದ್ದು ಹಿಮಾಚಲದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts