More

    ಮೋದಿಗೆ ಕುಡ್ಲ ಹುಡುಗಿ ಆತಿಥ್ಯ: ನಿರ್ವಹಣಾ ತಂಡದ ನೇತೃತ್ವ ವಹಿಸಿದ್ದ ಸುಮಲ್

    ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸದ ವೇಳೆ ಹೋಟೆಲ್‌ನಲ್ಲಿ ಆತಿಥ್ಯ ನೀಡಿದ ತಂಡದ ನೇತೃತ್ವವನ್ನು ಮಂಗಳೂರು ಮೂಲದ ಯುವತಿ ಸುಮಲ್ ಸಂದೀಪ್ ಕೋಟ್ಯಾನ್ ವಹಿಸಿದ್ದರು.

    ನಗರದ ಮೇರಿಹಿಲ್‌ನ ಗೋಪಾಲ ಪೂಜಾರಿ -ಸುಫಲಾ ದಂಪತಿಯ ಪುತ್ರಿ ಸುಮಲ್ 10 ವರ್ಷಗಳಿಂದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿದ್ದಾರೆ. ಕುಂದಾಪುರ ಮೂಲಕ ಜುವೆಲ್ ಆಫ್ ಇಂಡಿಯಾ ವುಡ್‌ಲ್ಯಾಂಡ್ಸ್ ಡಿಸಿ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಹೋಟೆಲ್ ಸಿಇಒ ಆನಂದ ಪೂಜಾರಿಯವರ ಸೂಚನೆ ಮೇರೆಗೆ ಸತತ ಎರಡನೇ ಬಾರಿ ಆತಿಥ್ಯ ನೀಡುವ ತಂಡದಲ್ಲಿದ್ದರು.

    ತಮ್ಮ ಆತಿಥ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಬೆಳಗ್ಗೆ 5 ಗಂಟೆಗೆ ದಿನಚರಿ ಆರಂಭವಾಗುತ್ತಿತ್ತು. ನಮ್ಮ ತಂಡದಲ್ಲಿ ಎಂಟು ಮಂದಿ ಇದ್ದರು. ಮೋದಿಯವರ ಅಡುಗೆ ತಯಾರಿ ಕುರಿತಂತೆ ವಿಶೇಷವಾಗಿ ನಿಗಾ ವಹಿಸುವ ಜವಾಬ್ದಾರಿ ನನ್ನ ಮೇಲಿತ್ತು. ಆಹಾರದ ಸುರಕ್ಷತೆ, ಕೋವಿಡ್ ನಿಯಮ ಪಾಲನೆ ಕುರಿತಾಗಿಯೂ ಗಮನ ಹರಿಸಬೇಕಿತ್ತು. ದಕ್ಷಿಣ ಭಾರತದ ಇಡ್ಲಿ ಸಾಂಬಾರ್ ತಿಂದು ಮೋದಿ ಖುಷಿ ಪಟ್ಟರು. ಅವರ ಸರಳತೆ, ಸಹೃದಯತೆ ನೋಡಿ ಖುಷಿಯಾಯಿತು ಎಂದು ವಿವರಿಸಿದ್ದಾರೆ.
    ಸುಮಲ್ ಅವರು ಮಂಗಳೂರು ತಾಲೂಕು ಪಂಚಾಯಿತಿ ನಿಕಟಪೂರ್ವ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸುನೀಲ್ ಕುಮಾರ್ ಗಂಜಿಮಠ ಅವರ ಕಿರಿಯ ಸಹೋದರಿಯ ಪುತ್ರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts