More

    VIDEO: ‘ನನ್ನ ಅಪ್ಪನ ನೋವು ನೋಡಲಾಗುತ್ತಿಲ್ಲ..ಹೇಗಾದರೂ ಔಷಧಿ ತರಿಸಿಕೊಡಿ’-ಯಡಿಯೂರಪ್ಪನವರಿಗೆ ಮನವಿ ಮಾಡಿದ ಕ್ಯಾನ್ಸರ್​ ಪೀಡಿತ ವ್ಯಕ್ತಿಯ ಮಗಳು

    ದಾವಣಗೆರೆ: ಲಾಕ್​ಡೌನ್​ ಇದ್ದರೂ ವೈದ್ಯಕೀಯ ತುರ್ತು ಸೇವೆಗಳಿಗೆ ಅಡೆತಡೆಯಿಲ್ಲ. ಮೆಡಿಕಲ್​ ಶಾಪ್​ಗಳು ತೆರೆದೇ ಇರುತ್ತವೆ ಎಂದಿದ್ದರೂ ಅದೆಷ್ಟೋ ಜನರಿಗೆ ಸಮಸ್ಯೆಯಾಗುತ್ತಿರುವುದು ಸುಳ್ಳಲ್ಲ.

    ಇದೀಗ ಯುವತಿಯೋರ್ವಳು ತನ್ನ ಕ್ಯಾನ್ಸರ್ ಪೀಡಿತ ತಂದೆಗೆ ಔಷಧಿ ಸಿಗುತ್ತಿಲ್ಲ ಎಂದು ತುಂಬ ನೋವಿನಿಂದ ಹೇಳಿಕೊಂಡಿದ್ದಾಳೆ. ಅಲ್ಲದೆ, ಮೆಡಿಸಿನ್​ ತರಿಸಿಕೊಡುವಂತೆ ವಿಡಿಯೋ ಮೂಲಕ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾಳೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿ ಕುಂಬಳೂರಿನ ಯುವತಿ ನಿಖಿತಾ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಔಷಧಿ ಸಿಗದೆ ನನ್ನ ತಂದೆ ಕಷ್ಟಪಡುತ್ತಿರುವುದನ್ನು ನೋಡಲಾಗುತ್ತಿಲ್ಲ. ಹೇಗಾದರೂ ಮೆಡಿಸನ್​ ತರಿಸಿಕೊಡಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.

    ನಿಖಿತಾ ತಂದೆ ಹನುಮಂತಪ್ಪ ಪ್ಯಾಂಕ್ರಿಯಾಸ್ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಅವರಿಗೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಡಿ.25ರಂದು ಒಂದು ಥೆರಪಿ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಮಾ.25ಕ್ಕೆ ಎರಡನೇ ಬಾರಿಗೆ ಚಿಕಿತ್ಸೆ ನೀಡಬೇಕಿತ್ತು. ಆದರೆ ಲಾಕ್​ಡೌನ್​ ಇದ್ದುದರಿಂದ ಆಸ್ಪತ್ರೆಯಲ್ಲಿ ಅದಕ್ಕೆ ಬೇಕಾದ ಮೆಡಿಸಿನ್ ಸಿಗುತ್ತಿಲ್ಲ.

    ಅದನ್ನು ಮುಂಬೈನಿಂದ ತರಿಸಬೇಕು ಎನ್ನುತ್ತಿದ್ದಾರೆ. ಆದರೆ ಔಷಧಿ ಇಲ್ಲದೆ ನಿಖಿತಾ ಅಪ್ಪ ತೀವ್ರ ಕಷ್ಟಪಡುತ್ತಿದ್ದಾರೆ.
    ಈಗ ಇದನ್ನೇ ವಿಡಿಯೋದಲ್ಲಿ ಹೇಳಿರುವ ನಿಖಿತಾ, ಹೇಗಾದರೂ ಮಾಡಿ ಮೆಡಿಸಿನ್​ ತರಿಸಿಕೊಡಿ. ನನ್ನ ತಂದೆಯ ನೋವು ನೋಡಲಾಗುತ್ತಿಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

    ವಿದೇಶಿಯರಿಗೆ ಮನ ಮಿಡಿಯುತ್ತಿರುವ ರಾಷ್ಟ್ರಗಳು, ಅಮೆರಿಕ- ಭಾರತ ಬಾಂಧವ್ಯಕ್ಕೆ ಹೊಸ ಸಾಕ್ಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts