More

    ದೇವರಮನೆ ಪರ್ವತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ

    ಬಣಕಲ್: ಬೆಂಗಳೂರು ಮೂಲದ ಬೇರುಭೂಮಿ ಮತ್ತು ಕನ್ನಡ ಮನಸುಗಳು, ಚಿಕ್ಕಮಗಳೂರಿನ ಗ್ರೀನ್‌ೆರ್ಸ್ ತಂಡಗಳು, ಶ್ರೀ ಕಾಲಭೈರವೇಶ್ವರ ದೇವಾಲಯ ಆಡಳಿತ ಮಂಡಳಿ, ತ್ರಿಪುರ ಗ್ರಾಪಂ ಮತ್ತಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದೇವರಮನೆ ಪರ್ವತ ಶ್ರೇಣಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತಾ ಅಭಿಯಾನ ನಡೆಯಿತು.

    ರಾಜ್ಯದ ವಿವಿಧೆಡೆಯಿಂದ ಸ್ವಯಂಪ್ರೇರಿತರಾಗಿ ಆಗಮಿಸಿದ್ದ 100ಕ್ಕೂ ಹೆಚ್ಚು ಮಂದಿ ಶ್ರೀ ಕಾಲಭೈರವೇಶ್ವರ ದೇವಾಲಯದ ಸುತ್ತಲಿನ ಬೆಟ್ಟದ ಸಾಲುಗಳಲ್ಲಿ ಇಬ್ಬಿಬ್ಬರಂತೆ ತಂಡ ರಚಿಸಿಕೊಂಡು ಪ್ಲಾಸ್ಟಿಕ್ ಕವರ್‌ಗಳು, ನೀರು ಮತ್ತು ಮದ್ಯದ ಖಾಲಿ ಬಾಟಲಿಗಳನ್ನು ಸಂಗ್ರಹಿಸಲಾಯಿತು. ತ್ಯಾಜ್ಯದ ಚೀಲಗಳನ್ನು ಬೆಟ್ಟದಿಂದ ಕೆಳಗೆ ವಿಲೇವಾರಿ ವಾಹನಕ್ಕೆ ಮತ್ತು ಘಟಕಕ್ಕೆ ಖುದ್ದಾಗಿ ಹೊತ್ತು ತಂದು ಹಾಕಿದರು.
    ಬೇರುಭೂಮಿ ತಂಡದ ಯಶಸ್, ಕನ್ನಡ ಮನಸುಗಳು ತಂಡದ ಪವನ್ ಧರೆಗುಂಡಿ, ಗ್ರೀನ್‌ೆರ್ಸ್‌ನ ಪ್ರದೀಪ್ ಗೌಡ, ಗ್ರಾಮದ ಹುಡುಗರು ತಂಡದ ಬೈದುವಳ್ಳಿ ಪ್ರವೀಣ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮೂಡಿಗೆರೆ ತಾಲೂಕು ಘಟಕದ ಕಾರ್ಯದರ್ಶಿ ಪೂರ್ಣೇಶ್, ದೇವಾಲಯ ಸಮಿತಿ ಧರ್ಮದರ್ಶಿ ಮದನ್ ಕುಮಾರ್ ಹೆಗ್ಡೆ, ಪ್ರಕೃತಿ ಗೌಡ, ಕವಿತಾ, ಅರವಿಂದ್, ಕೃತಿ, ರಾಕೇಶ್ ದಳವಾಯಿ, ಶ್ರೀನಿವಾಸ್, ನೂತನ್, ನವೀನ್, ನರಸಿಂಹಮೂರ್ತಿ, ಗಣೇಶ್, ಹರೀಶ್, ಸುನಿಲ್ ದೇವಾಡಿಗ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts