More

    ಮಕ್ಕಳ ಮೇಲೆ ಬಿದ್ದ ಕಲ್ಲಿನ ಕಂಬ; ಜಸ್ಟ್​ ಮಿಸ್​, ಪ್ರಾಣಾನೇ ಹೋಗ್ತಿತ್ತು…

    ತುಮಕೂರು: ಅವರ ಪಾಡಿಗೆ ಆಟವಾಡಿಕೊಂಡು ಇದ್ದ ಮಕ್ಕಳ ಮೇಲೆ ಒಮ್ಮೆಲೆ ಕಂಬವೊಂದು ಬಿದ್ದಾಗ ಹೇಗಾಗಿರಬೇಡ?! ಹೌದು, ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

    ತಮ್ಮ ಪಾಡಿಗೆ ಇದ್ದ ಶಾಲಾ ಮಕ್ಕಳ ಮೇಲೆ ಒಮ್ಮೆಲೆ ಹಳೆ ಕಟ್ಟಡದ ಕಲ್ಲು ಕಂಬಗಳು ಕುಸಿದು ಬಿದ್ದಿವೆ. ಅಲ್ಲಿದ್ದ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಆದರೆ ದುರದೃಷ್ಟವಶಾತ್​ ಓರ್ವ ಮಾತ್ರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    ಉಲ್ಲಾಸ್ ಎನ್ನುವಾತ ಗಂಭೀರವಾಗಿ ಗಾಯಗೊಂಡಿದ್ದು ಯಶಸ್, ಹಾಗೂ ಕುಶಾಲ್ ಎಂಬ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿರುವ ಘಟನೆ ನಡೆದಿದ್ದು ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನ 8 ಕಲ್ಲಿನ ಕಂಬಗಳಲ್ಲಿ ಒಟ್ಟು ಮೂರು ಕಂಬಗಳು ಕುಸಿದು ಬಿದ್ದಿವೆ.

    ಇದೀಗ ಗಂಭೀರವಾಗಿ ಗಾಯಗೊಂಡಿರುವ ಉಲ್ಲಾಸ್​ಗೆ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ. ಯಶಸ್ ಹಾಗೂ ಕುಶಾಲ್​ಗೆ ಗೋಡೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ದೌಡಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts