More

    ಪಿಲಿಕುಳ ಮೃಗಾಲಯದ ಆಕರ್ಷಣೆ ‘ವಿಕ್ರಂ’ ಇನ್ನಿಲ್ಲ

    ಗುರುಪುರ: ಪಿಲಿಕುಳ ಜೈವಿಕ ಉದ್ಯಾನದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ 21 ವರ್ಷ ಪ್ರಾಯದ ‘ವಿಕ್ರಂ’ ಹೆಸರಿನ ಗಂಡು ಹುಲಿ ಸೋಮವಾರ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.

    ಪಿಲಿಕುಳ ಮೃಗಾಲಯ ಆರಂಭವಾದ 2003ರಲ್ಲಿ ಶಿವಮೊಗ್ಗದ ತ್ಯಾವರೆಕೊಪ್ಪದಿಂದ ಇಲ್ಲಿಗೆ ತರಲಾಗಿದ್ದ ಮೂರು ಹುಲಿಗಳಲ್ಲಿ ಗಂಭೀರ ನಡಿಗೆಯ ವಿಕ್ರಂ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿತ್ತು. ರಾಜ(20) ಮತ್ತು ನೇತ್ರಾ(22) ಹೆಸರಿನ ಹುಲಿಗಳು ಈ ಹಿಂದೆಯೇ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದವು.

    ವಿಕ್ರಂ ಜೀವಿತಾವಧಿಯಲ್ಲಿ ಪಿಲಿಕುಳದಲ್ಲಿ ಕದಂಬ, ಕೃಷ್ಣ, ವಿನಯ, ಒಲಿವರ್, ಅಕ್ಷಯ್, ಮಂಜು, ಅಮರ್, ಅಕ್ಬರ್, ಆ್ಯಂಟನಿ ಮತ್ತು ನಿಶಾ ಹೆಸರಿನ ಹುಲಿಗಳು ಜನ್ಮ ತಾಳಿದ್ದವು. ಈ ಹುಲಿ ಮರಿಗಳನ್ನು ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರ, ಮೈಸೂರು ಮೃಗಾಲಯಗಳಿಗೆ ರವಾನಿಸಲಾಗಿದೆ. ಪಿಲಿಕುಳ ಮೃಗಾಲಯದಲ್ಲಿ ಈಗ ಒಟ್ಟು 10 ಹುಲಿಗಳಿವೆ.

    ವಿಕ್ರಂ ಎರಡು ತಿಂಗಳಿಂದ ವೈದ್ಯಕೀಯ ಚಿಕಿತ್ಸೆಯಲ್ಲಿತ್ತು. ಇತ್ತೀಚಿನವರೆಗೂ ಮೃಗಾಲಯದಲ್ಲಿ ತಿರುಗಾಡುತ್ತಿದ್ದ ವಿಕ್ರಂಗೆ ಕೆಲವು ದಿನಗಳಿಂದ ದೃಷ್ಟಿಹೀನತೆ, ಸಂಧಿವಾತ, ಮೂತ್ರಪಿಂಡಗಳಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿತ್ತು. ಒಂದು ವಾರದಿಂದ ಆಹಾರ ತ್ಯಜಿಸಿದ್ದ ವಿಕ್ರಂಗೆ ಡ್ರಿಪ್ಸ್ ಹಾಕಿ ಆ್ಯಂಟಿಬಯೋಟಿಕ್‌ಗಳನ್ನು ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಹುಲಿಯೊಂದರ ಜೀವಿತಾವಧಿ 16-18 ವರ್ಷವಾಗಿದ್ದರೆ, ಇಲ್ಲಿ ಮಾತ್ರ 21-22 ವರ್ಷ ಬದುಕಿದೆ ಎಂದು ಪಿಲಿಕುಳ ಜೈವಿಕ ಉದ್ಯಾನ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts