More

    ದೈಹಿಕ, ಮಾನಸಿಕ ಸಮತೋಲನಕ್ಕೆ ಯೋಗ ಅಗತ್ಯ: ಡಾ. ಮಹದೇವ ಆರೇರ ಅಭಿಮತ

    ಹೊಸಪೇಟೆ: ಯೋಗ ಭಾರತೀಯ ಜೀವನ ಪದ್ಧತಿಯ ಭಾಗವಾಗಿದ್ದು, ಇತ್ತೀಚೆಗೆ ಒಂದು ಕಲೆಯಾಗಿ, ಚಿಕಿತ್ಸಾ ಪದ್ಧತಿಯಾಗಿ, ಅಧ್ಯಯನ ವಿಷಯವಾಗಿ ಪ್ರಸಿದ್ಧಿಗೆ ಬಂದಿದೆ. ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಯೋಗಾಭ್ಯಾಸ ಅಗತ್ಯ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗದ ಸಹಾಯಕ ಅಧ್ಯಾಪಕ ಡಾ. ಮಹದೇವ ಆರೇರ ಅಭಿಪ್ರಾಯಪಟ್ಟರು.

    ಯೋಗ ಪದ್ಧತಿಗೆ ಪ್ರಾಚೀನ ಇತಿಹಾಸವಿದೆ.

    ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ಯೋಗ ಅಧ್ಯಯನ ವಿಭಾಗ ಮಂಗಳವಾರ ಆಯೋಜಿಸಿದ್ದ ಯೋಗ ತತ್ವಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಯೋಗ ಪದ್ಧತಿಗೆ ಪ್ರಾಚೀನ ಇತಿಹಾಸವಿದೆ. ಋಷಿಮುನಿಗಳು, ಸಾಧುಸಂತರ ಅಮೋಘ ತಪಸ್ಸಿನ ಫಲವಾಗಿ ಯೋಗ ಬೆಳೆದು ಬಂದಿದೆ. ಆಸನ, ಪ್ರಾಣಾಯಾಮ, ಬಂಧ, ಮುದ್ರೆ, ಷಟ್ಕ್ರಿಯೆ ಮತ್ತು ಧ್ಯಾನ ಎಂಬ ಆರು ಸ್ತರಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.


    ಇದನ್ನೂ ಓದಿ: ಸ್ವಸ್ಥ ಶರೀರಕ್ಕೆ ಯೋಗ ಅಗತ್ಯ

    ಪ್ರಸ್ತುತ ಮನುಷ್ಯನ ಆಂತರಿಕ ವಿಕಾಸ, ಆರ್ಥಿಕ ಸದೃಢತೆಗಾಗಿ ಯೋಗ ಉಪಯುಕ್ತವಾಗುತ್ತಿದೆ. ಯೋಗ ಸಾಧನೆಯಿಂದ ಮನಸ್ಸಿಗೆ ನೆಮ್ಮದಿ, ಆರೋಗ್ಯ, ಆಧ್ಯಾತ್ಮಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.

    ಪ್ರತಿನಿತ್ಯ ಯೋಗ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು

    ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಮನುಷ್ಯನಲ್ಲಿ ಮನುಷ್ಯತ್ವವನ್ನು ತುಂಬಲು ಯೋಗ ತುಂಬ ಸಹಾಯಕಾರಿಯಾಗಿದೆ. ಆತ್ಮವಿಶ್ವಾಸ, ಸುಖ, ಸಂತೋಷ, ನೆಮ್ಮದಿ ಬದುಕಿಗಾಗಿ ಪ್ರತಿನಿತ್ಯ ಯೋಗ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯೋಗ ವಿಷಯದಲ್ಲಿ ಡಿಪ್ಲೊಮಾ ಸರ್ಟಿಫಿಕೇಟ್, ಸ್ನಾತಕೋತ್ತರ ಪದವಿ ಪಡೆದವರು, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶಗಳಿದ್ದು, ಯೋಗ ವಿಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.


    ಯೋಗ ಅಧ್ಯಯನ ವಿಭಾಗದ ನಿರ್ದೇಶಕ ಡಾ. ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕ ಸಿದ್ಧರಾಮೇಶ ಸ್ವಾಗತಿಸಿದರು. ಕೃಷ್ಣ ನಾಯಕ ವಂದಿಸಿದರು. ಸುಮಲತಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts