More

    ಸ್ವಸ್ಥ ಶರೀರಕ್ಕೆ ಯೋಗ ಅಗತ್ಯ

    ಬೀದರ್: ಯೋಗವು ಭಾರತ ದೇಶದ ಉತ್ತಮ ಸಂಸ್ಕೃತಿಯಾಗಿದೆ. ನಿತ್ಯವೂ ಯೋಗ ಮಾಡಿದರೆ ಶರೀರ ಸ್ವಸ್ಥವಾಗಿರಲಿದ್ದು, ಸುಂದರ ಹಾಗೂ ಮತ್ತು ಸದೃಢ ಸಮಾಜ ನಿರ್ಮಾಣ ಇದರಿಂದ ಸಾಧ್ಯ ಎಂದು ಸಂಸದ ಭಗವಂತ ಖೂಬಾ ಹೇಳಿದರು.

    ನಗರದ ವಿದ್ಯಾನಗರ ಬಡಾವಣೆಯ ರಾಮಮಂದಿರ ಆವರಣದಲ್ಲಿ ಜೈಶ್ರೀರಾಮ ಚಾರಿಟೇಬಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ಸೋಮವಾರ ಜರುಗಿದ ಒಂದು ವಾರದ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ವಿಶ್ವದಲ್ಲಿಯೇ ಭಾರತದ ಸಂಸ್ಕೃತಿ ಮತ್ತು ಪರಂಪರೆ ಶ್ರೀಮಂತಿಕೆಯಿಂದ ಕೂಡಿದೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

    ನಿರಂತರ ಯೋಗ ಮಾಡುವುದರಿಂದ ಮನಸ್ಸು ನಕಾರಾತ್ಮಕ ಚಿಂತನೆ ಬಿಟ್ಟು ಸಕಾರಾತ್ಮಕತೆ ಕಡೆಗೆ ಬರುತ್ತದೆ. ಸುಖಮಯ ಜೀವನಕ್ಕೆ ಯೋಗ ಸರಳ ಮಾರ್ಗವಾಗಿದೆ. ಅನೇಕ ಮಹಾತ್ಮರು, ಸಾಧು-ಸಂತರು ದೇಶಕ್ಕೆ ಉನ್ನತ ಕೊಡುಗೆ ನೀಡಿದ್ದಾರೆ. ಸ್ವಾರ್ಥವನ್ನು ಬಿಟ್ಟು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು.

    ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಬಾಬಾ ರಾಮದೇವ ಅವರು ಯೋಗವನ್ನು ದೇಶದ ಜನರ ಮನ, ಮನೆಗೆ ಮುಟ್ಟಿಸುವ ಕೆಲಸ ಮಾಡಿದರೆ, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ವಿಶ್ವಕ್ಕೆ ಪರಿಚಯಿಸಿದರು ಎಂದರು.

    ಒಂದು ವಾರ ಶಿಬಿರ ನಡೆಸಿಕೊಟ್ಟ ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ, ಭರತನಾಟ್ಯ ಕಲಾವಿದೆ ರಾಜೇಶ್ವರಿ, ಸ್ವಾಮಿ ವಿವೇಕಾನಂದ ಶಕ್ತಿಕೇಂದ್ರದ ಅಧ್ಯಕ್ಷ ರಾಜಕುಮಾರ ಕೋಮಟಿ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಸಿದ್ರಾಮಶೆಟ್ಟಿ, ಪ್ರಮುಖರಾದ ಕಲ್ಯಾಣರಾವ ಬಿರಾದಾರ, ಮಲ್ಲಿಕಾರ್ಜುನ ಯದಲಾಪುರ, ಪ್ರಭು ಆಲೂರೆ, ನಾಗೇಂದ್ರರೆಡ್ಡಿ, ಮಲ್ಲಿಕಾರ್ಜುನ ಬೆಳಕೇರಿ, ಜಗದೀಶ ಜೆಟ್ಲಾ, ಧೂಳಪ್ಪ ಡಾವರಗಾಂವ, ಮೋಹನ್ ಚಾರಿ, ಬಾಬುರಾವ ಸಂಗೊಳಗಿ, ಸೂರ್ಯಕಾಂತ ಕೋಟೆ, ಮೀನಾಕ್ಷಿ ಸಂಗೊಳಗಿ ಇದ್ದರು. ಪ್ರಭಾಕರ ಜೆಟ್ಲಾ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಶ್ರೀಕಾಂತ ಪಾಟೀಲ್ ನಿರೂಪಣೆ ಮಾಡಿದರು. ಬಾಲಸುಬ್ರಹ್ಮಣ್ಯಂ ಚಾಲಕ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts