More

    ಹೂಳೆತ್ತುವ ಕಾಮಗಾರಿಯನ್ನು ಆನಂದ ಮಾಮನಿ ಪರಿಶೀಲನೆ

    ಮುನವಳ್ಳಿ: ಸಮೀಪದ ಹೂಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಿಕಟ್ಟಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಹಳ್ಳದ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ವಿಧಾನಸಭೆ ಉಪಸಭಾಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಆನಂದ ಮಾಮನಿ ಮಂಗಳವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ನಂತರ ನರೇಗಾ ಕಾರ್ಮಿಕರಿಗೆ ಉಚಿತ ಮಾಸ್ಕ್ ವಿತರಿಸಿದರು.

    ನಂತರ ಮಾತನಾಡಿದ ಅವರು, ಕೋವಿಡ್-19ನಿಂದಾಗಿ ಬಹುತೇಕ ಗ್ರಾಮೀಣ ಪ್ರದೇಶದ ಬಡ ಕೂಲಿಕಾರ್ಮಿಕರು ನಿರುದ್ಯೋಗ ಸಮಸ್ಯೆಗೆ ತುತ್ತಾಗಿದ್ದು, ಅವರಿಗೆ ನರೇಗಾ ಯೋಜನೆ ಆಸರೆಯಾಗಿದೆ. ಬಡ ಕೂಲಿಕಾರ್ಮಿಕರು ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

    ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಹಿರೇಕುಂಬಿ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕೆ ನರೇಗಾ ಯೋಜನೆ ಲದಾಯಕವಾಗಿದೆ. ಕರೊನಾ ಹಿಮ್ಮೆಟ್ಟಿಸಲು ಕೆಲ ತಿಂಗಳ ಕಾಲ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

    ಎಪಿಎಂಸಿ ಅಧ್ಯಕ್ಷ ಜಗದೀಶ ಹನಸಿ, ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ತಾಪಂ ಸದಸ್ಯ ಬಸಪ್ಪ ಗುಡನಾಯ್ಕರ, ಗ್ರಾಪಂ ಅಧ್ಯಕ್ಷೆ ದೇವಕ್ಕ ತಳವಾರ, ಉಪಾಧ್ಯಕ್ಷ ಬಸಪ್ಪ ಮಾದರ, ಗ್ರಾಪಂ ಸದಸ್ಯರಾದ ಈರಪ್ಪ ಹೊಸಮನಿ, ಎಂ.ಬಿ.ಗಾಣಿಗೇರ, ಬಸಪ್ಪ ಸುಂಕದ, ಸಿದ್ದಪ್ಪ ಗಡೇಕಾರ, ಕರನಾಯ್ಕ ದಂಡನಾಯ್ಕರ, ಮಹಾಂತೇಶ ಕಡಕೋಳ, ತಾಪಂ ಇಒ ಯಶವಂತಕುಮಾರ, ಸಹಾಯಕ ಅಭಿಯಂತ ಎಸ್.ಕೆ.ಪಾಟೀಲ, ಸಂಗನಗೌಡ ಹಂದ್ರಾಳ, ಪಿಡಿಒ ರಮೇಶ ಬೇಡಸೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts