More

    PHOTOS| 50 ವರ್ಷಗಳ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ಅಪರೂಪದ ರೈನ್​ ಬೋ ಸ್ನೇಕ್​!

    ಫ್ಲೋರಿಡಾ: ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಅಪರೂಪದ ರೈನ್​ ಬೋ ಸ್ನೇಕ್​(ಮಳೆಬಿಲ್ಲು ಹಾವು) ಮೊದಲ ಬಾರಿಗೆ ಅಮೆರಿಕದ ಫ್ಲೋರಿಡಾದಲ್ಲಿರುವ ಓಕಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಪತ್ತೆಯಾಗುವ ಮೂಲಕ ಅಚ್ಚರಿ ಮೂಡಿಸಿದೆ.

    ಫರಾನ್ಸಿಯಾ ಎರಿಟ್ರೋಗ್ರಾಮಾ ಎಂಬ ವರ್ಗಕ್ಕೆ ಸೇರುವ ರೈನ್​ ಬೋ ಸ್ನೇಕ್​ ಈ ಹಿಂದೆ 1969ರಲ್ಲಿ ಮರಿಯೋನ್​ ಕೌಂಟಿಯಲ್ಲಿ ಪತ್ತೆಯಾಗಿತ್ತು. ಈ ಹಾವನ್ನು ಅದರ ವಿಶೇಷ ಬಣ್ಣಗಳಿಂದಲೇ ಸುಲಭವಾಗಿ ಪತ್ತೆ ಹಚ್ಚಬಹುದು. ಹಾವಿನ ಬೆನ್ನು ನೀಲಿ ಮತ್ತು ಕಪ್ಪು ಬಣ್ಣದಿಂದ ಮಿನುಗುತ್ತದೆ. ಅಲ್ಲದೆ, ಅದರ ದೇಹದ ಉದ್ದಕ್ಕೂ ಮೂರು ಪ್ರಕಾಶಮಾನವಾದ ಕೆಂಪು ಪಟ್ಟೆಗಳು ಇವೆ.

    ವಿಷಕಾರಿಯಲ್ಲದ ರೈನ್​ ಬೋ ಸ್ನೇಕ್​ನ ಫೋಟೋವನ್ನು ಇಬ್ಬರ ಮಹಿಳೆಯರು ಉದ್ಯಾನವನದಲ್ಲಿ ತಿರುಗಾಡುವಾಗ ಸೆರೆಹಿಡಿದಿದ್ದಾರೆ. ಈ ರೈನ್​​ ಬೋ ಸ್ನೇಕ್​ ತನ್ನ ಜೀವಿತಾವಧಿಯಲ್ಲಿ ಹೆಚ್ಚಾಗಿ ನೀರಿನಲ್ಲಿ ವಾಸಿಸುತ್ತದೆ. ಅದರಲ್ಲೂ ಹೆಚ್ಚಾಗಿ ಜಲಸಸ್ಯರಾಶಿಯ ನಡುವೆ ಜೀವಿಸುತ್ತದೆ. ಆಹಾರಕ್ಕಾಗಿ ಈಲ್​ ಮೀನುಗಳನ್ನು ತಿನ್ನುತ್ತದೆ. ಈ ಕಾರಣದಿಂದಲೇ ರೈನ್​ ಬೋ ಸ್ನೇಕ್​ ಕಾಣಸಿಗುವುದು ಅಪರೂಪವಾಗಿದೆ.

    ವಯಸ್ಕ ರೈನ್​ ಬೋ ಸ್ನೇಕ್​ ಸುಮಾರು 100 ರಿಂದ 140 ಸೆಂಟಿಮೀಟರ್​ ಬೆಳೆಯುತ್ತದೆ. ಫ್ಲೋರಿಡಾದ ನ್ಯಾಚುರಲ್​ ಹಿಸ್ಟರಿ ಮ್ಯೂಸಿಯಂ ಪ್ರಕಾರ ಇದುವರೆಗೂ ಪತ್ತೆಯಾಗಿರುವ ರೈನ್​ ಬೋ ಹಾವಿನ ಉದ್ದ 167 ಸೆಂಟಿ ಮೀಟರ್​ ಆಗಿದೆ.

    ಈ ಸರಿಸೃಪವು ಅಟ್ಲಾಂಟಿಕ್​ ಕರಾವಳಿಯ ವಿಶಾಲವಾದ ಬಯಲು ಮೈದಾನದಲ್ಲಿ ಜೀವಿಸುತ್ತದೆ. ಇದು ಪೂರ್ವ ಲೂಯಿಸಿಯಾನದಿಂದ ದಕ್ಷಿಣ ಮೇರಿಲ್ಯಾಂಡ್ ವರೆಗೂ ತನ್ನ ಕ್ಷೇತ್ರವನ್ನು ವ್ಯಾಪಿಸಿಕೊಂಡಿದೆ. (ಏಜೆನ್ಸೀಸ್​)

    A Rare Sighting!Tracey Cauthen recently reported stumbling upon a ~4 ft Rainbow Snake Farancia erytrogramma while…

    FWC Fish and Wildlife Research Institute ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಫೆಬ್ರವರಿ 19, 2020

    A Rare Sighting! Tracey Cauthen recently reported stumbling upon this ~4 ft Rainbow Snake Farancia erytrogramma while…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts