More

    ವಿಶ್ವಕಪ್ ‘ನವ’ ಉಲ್ಲಾಸ: ಬೆಂಗಳೂರಲ್ಲಿ ಭಾರತ ತಂಡದ 9ನೇ ಪಂದ್ಯದ ಮನಮೋಹಕ ದೃಶ್ಯಗಳು

    ಬೆಂಗಳೂರು: ನಿನ್ನೆ (ನ.12) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್​ ನಡುವೆ ವಿಶ್ವಕಪ್​ ಟೂರ್ನಿಯ 45ನೇ ಪಂದ್ಯ ನಡೆಯಿತು. ಇದು ಉಭಯ ತಂಡಗಳಿಗೂ ಗ್ರೂಪ್​ ಹಂತದ ಕೊನೆಯ ಪಂದ್ಯವಾಗಿತ್ತು. ಇದರಲ್ಲಿ ಟೀಮ್​ ಇಂಡಿಯಾ 160 ರನ್​ಗಳ ಭರ್ಜರಿ ಗೆಲುವು ದಾಖಲಿಸಿ, ಟೂರ್ನಿಯಲ್ಲಿ ಅಜೇಯ ಓಟ ಮುಂದುರಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಸಕ್ತ ಟೂರ್ನಿಯ ಕೆಲವು ಪಂದ್ಯಗಳು ಈಗಾಗಲೇ ನಡೆದಿದ್ದರೂ, ಭಾರತ ನಿನ್ನೆ ಆಡಿದ ಪಂದ್ಯ ಈ ಕ್ರೀಡಾಂಗಣದಲ್ಲಿ ಆಡಿದ ಮೊದಲ ಹಾಗೂ ಗ್ರೂಪ್​ ಹಂತದ ಕೊನೆಯ ಪಂದ್ಯವಾಗಿತ್ತು, ಹೀಗಾಗಿ ಭಾರತೀರ ಆಟಗಾರರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಸಾಕಷ್ಟು ಕ್ರೀಡಾಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ವಿಜಯವಾಣಿಯ ಫೋಟೋಗ್ರಾಫರ್​  ಸುಧೀಂದ್ರ ಶ್ರೀರಂಗರಾಜು ಅವರು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ ಕೆಲವು ಮನಮೋಹಕ ಚಿತ್ರಗಳು ಇಲ್ಲಿವೆ ನೋಡಿ.

    ind vs Ned 2

    ind vs Ned 2

    ind vs Ned 3

    Ind vs Ned 7

    ind vs Ned 8

    ind vs Ned 4

    ind vs Ned 12

    ind vs Ned 5

    Ind vs ned 9

    Ind vs Ned 10

    ಪಂದ್ಯದ ಫಲಿತಾಂಶವೇನು?
    ನಿನ್ನೆ ನಡೆದ ಪಂದ್ಯದಲ್ಲಿ ಭಾರತ ನೀಡಿದ 411ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್​ ಪಡೆ 47.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 250 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್​ ಇಂಡಿಯಾ 160 ರನ್​ಗಳ ಭಾರೀ ಅಂತರದಿಂದ ಗೆಲುವಿನ ಕೇಕೆ ಹಾಕಿತು. ತಂಡದ ಪರ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (45), ತೇಜ ನಿಡಮನೂರು (54), ಕಾಲಿನ್ ಅಕರ್ಮನ್ (35) ಹೊರತುಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.

    ಭಾರತ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಮೊಹಮ್ಮದ್​ ಸಿರಾಜ್​, ಕುಲದೀಪ್​ ಯಾದವ್​, ರವೀಂದ್ರ ಜಡೇಜಾ ಮತ್ತು ಜಸ್​​ಪ್ರಿತ್​ ಬೂಮ್ರಾ ತಲಾ ಎರಡು ವಿಕೆಟ್​ ಪಡೆದರೆ, ವಿರಾಟ್​ ಕೊಹ್ಲಿ ಮತ್ತು ನಾಯಕ ರೋಹಿತ್​ ಶರ್ಮ ತಲಾ ಒಂದೊಂದು ವಿಕೆಟ್​ ಪಡೆದರು. ಅಪರೂಪಕ್ಕೊಮ್ಮೆ ಬೌಲಿಂಗ್​ ಮಾಡಿ ಕೊಹ್ಲಿ ಮತ್ತು ರೋಹಿತ್​ ವಿಕೆಟ್​ ಪಡೆದಿದ್ದು, ಕ್ರೀಡಾಭಿಮಾನಿಗಳನ್ನು ಹೆಚ್ಚು ಗಮನ ಸೆಳೆಯಿತು.

    ಭಾರತದ ಪರಾಕ್ರಮ
    ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 50 ಓವರ್​ಗಳಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 410 ರನ್​ ಕಲೆ ಹಾಕಿತು. ಬ್ಯಾಟ್​ ಹಿಡಿದು ಕ್ರೀಡಾಂಗಣಕ್ಕಿಳಿದ ಟೀಮ್​ ಇಂಡಿಯಾದ ಪ್ರತಿ ಬ್ಯಾಟರ್​ಗಳು ಸಹ ರನ್​ ಮಾರುತವನ್ನೇ ಸೃಷ್ಟಿಸಿದರು. ರೋಹಿತ್​ ಶರ್ಮ (61 ರನ್​, 54 ಎಸೆತ, 8 ಬೌಂಡರಿ, 2 ಸಿಕ್ಸರ್​) ಮತ್ತು ಶುಭಮಾನ್​ ಗಿಲ್​ (51 ರನ್​, 32 ಎಸೆತ, 3 ಬೌಂಡರಿ, 4 ಸಿಕ್ಟರ್​) 100 ರನ್​ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಹಿಡಿದು ಮೈದಾನಕ್ಕಿಳಿದ ವಿರಾಟ್​ ಕೊಹ್ಲಿ ಸಹ ನೆದರ್ಲೆಂಡ್ಸ್​ ಬೌಲರ್​ಗಳನ್ನು ಕಾಡಿದರು. 56 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ 1 ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

    ಶ್ರೇಯಸ್​-ರಾಹುಲ್​ ಜುಗಲ್​ಬಂಧಿ
    ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದ ಶ್ರೇಯಸ್​ ಅಯ್ಯರ್ ( ಅಜೇಯ 128 ರನ್​, 94 ಎಸೆತ, 10 ಬೌಂಡರಿ, 5 ಸಿಕ್ಸರ್​)​ ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಕೆ.ಎಲ್​. ರಾಹುಲ್​ (102 ರನ್​, 64 ಎಸೆತ, 11 ಬೌಂಡರಿ, 4 ಸಿಕ್ಸರ್​) ದ್ವಿಶತಕ ಜತೆಯಾಟದೊಂದಿಗೆ ಉತ್ತಮ ಇನಿಂಗ್ಸ್​ ಆಡಿದರು. ನೆದರ್ಲೆಂಡ್ಸ್​ ಬೌಲರ್​ಗಳನ್ನು ಅಕ್ಷರಶಃ ಬೆಂಡತ್ತಿದ ಈ ಜೋಡಿ ಎರಡು ವೈಯಕ್ತಿಕ ಶತಕಗಳೊಂದಿಗೆ ಭಾರತ ತಂಡ 410 ರನ್​ಗಳ ಬೃಹತ್​ ಗುರಿಯನ್ನು ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಸೂರ್ಯಕುಮಾರ್​ ಯಾದವ್​ 2 ರನ್​ ಗಳಿಸಿ ಅಜೇಯರಾಗಿ ಉಳಿದರು.

    ನೆದರ್ಲೆಂಡ್ಸ್​ ಪರ ಬಾಸ್ ಡಿ ಲೀಡೆ ಎರಡು ವಿಕೆಟ್​ ಪಡೆದರೆ, ಪೌಲ್​ ವ್ಯಾನ್​ ಮೀಕೆರೆನ್​ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ತಲಾ ಒಂದೊಂದು ವಿಕೆಟ್​ ಕಬಳಿಸಿದರು. ಆದರೆ, ಯಾರೊಬ್ಬರು ಸಹ ಟೀಮ್​ ಇಂಡಿಯಾ ಬ್ಯಾಟರ್​ಗಳಿಗೆ ಸವಾಲಾಗಲೇ ಇಲ್ಲ.

    VIDEO| 9 ವರ್ಷದ ಬಳಿಕ ವಿಕೆಟ್​ ಪಡೆದ ವಿರಾಟ್​ ಕೊಹ್ಲಿ: ಅನುಷ್ಕಾ ಶರ್ಮಾ ಪ್ರತಿಕ್ರಿಯೆ ವೈರಲ್​

    VIDEO| ರೋಹಿತ್ ಶರ್ಮ​ ಬೌಲಿಂಗ್​ ಸ್ಟೈಲ್​ಗೆ ಪತ್ನಿ ಕ್ಲೀನ್​ ಬೋಲ್ಡ್​! ವೈರಲ್​ ಆಯ್ತು ರಿತಿಕಾ ರಿಯಾಕ್ಷನ್​

    ವಿಶ್ವಕಪ್​ನಲ್ಲಿ ಭಾರತದ ಅಜೇಯ ಓಟ: ನೆದರ್ಲೆಂಡ್ಸ್​ ವಿರುದ್ಧ ದಾಖಲೆ ಗೆಲುವು, ಮುಂದಿನ ಗುರಿ ಸಮಿಫೈನಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts