More

    ಫೋನ್​ ಟ್ಯಾಪಿಂಗ್​ ಆಗ್ತಿರೋದು ಸತ್ಯ, ಕೇಂದ್ರಕ್ಕೆ ಪತ್ರ ಬರೆಯುವೆ; ಸಂಸದ ಡಿ.ಕೆ.ಸುರೇಶ್

    ಬೆಂಗಳೂರು: ಫೋನ್​ ಟ್ಯಾಪಿಂಗ್​ ಆರೋಪವಲ್ಲ, ಸತ್ಯ. ಕಳೆದ 15 ದಿನಗಳಿಂದ ಕರೆ ದೂರವಾಣಿಯಲ್ಲಿ ಮಾತನಾಡುವಾಗ ಅಡಚಣೆ ಆಗುತ್ತಿದೆ. ಈ ಸಂಬಂಧ ದೂರು ನೀಡಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್​ ಹೇಳಿದ್ದಾರೆ.

    ‘ನನ್ನ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆರೋಪಿಸಿದ್ದರು. ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸುರೇಶ್, ಫೋನ್​ ಟ್ಯಾಪಿಂಗ್​ನಲ್ಲಿ ಬಿಜೆಪಿಯವರು ಎಕ್ಸ್​ಪರ್ಟ್​. ಒಂದು ಪಕ್ಷದ ಅಧ್ಯಕ್ಷರು ಇದನ್ನು ಗಂಭೀರವಾಗಿ ಮಾಡಿದ್ದಾರೆ. ರಾಜ್ಯ ಸರ್ಕಾರ ಮೊದಲು ಈ ಪ್ರಕರಣವನ್ನು ಪರಿಗಣಿಸಬೇಕು. ಇಲ್ಲವಾದರೆ ನಾನೇ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಸಿದರು.

    ಇದನ್ನೂ ಓದಿರಿ video/ ಗರಿಬಿಚ್ಚಿ ಪ್ರಧಾನಿ ಮೋದಿ ಜತೆ ಹೆಜ್ಜೆ ಹಾಕಿದ ನವಿಲು… ಇದು ‘ನಮೋ’ ಅಮೂಲ್ಯ ಕ್ಷಣಗಳು!

    ‘ನನ್ನ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆರೋಪಿಸಿದ್ದರು. ಈ ಮಾತಿಗೆ ಧ್ವನಿಗೂಡಿಸಿರುವ ಅವರ ಸಹೋದರ ಡಿ.ಕೆ. ಸುರೇಶ್​, ಫೋನ್​ ಟ್ಯಾಪಿಂಗ್​ ಆರೋಪವಲ್ಲ, ಸತ್ಯ ಎಂದಿದ್ದಾರೆ.

    ಡಿಜೆ ಹಳ್ಳಿ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯವಿದೆ. ಅದನ್ನ ಸರ್ಕಾರ ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್​ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಸುರೇಶ್​ ವಾಗ್ದಾಳಿ ನಡೆಸಿದರು.

    ಮಿಸ್ಟರ್ ಡಿಕೆಶಿ, ನೀವು ಜಾಮೀನನ ಮೇಲೆ ಹೊರಗಿದ್ದೀರಿ ಎಂಬುದನ್ನ ಅರಿತುಕೊಳ್ಳಿ; ಪ್ರಹ್ಲಾದ್ ಜೋಶಿ

    ಡಿ.ಕೆ.ಶಿವಕುಮಾರ್​ ಮನೆಯಲ್ಲಿ ಫೋನ್​ ಟ್ಯಾಪಿಂಗ್​ ಮಷಿನ್​ ಇದೆ: ಹೊಸ ಬಾಂಬ್​ ಸಿಡಿಸಿದ ಸಿ.ಪಿ.ಯೋಗೀಶ್ವರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts