More

    ದಾಸಿಮಯ್ಯ ಮನುಕುಲಕ್ಕೆ ದಾರಿದೀಪ

    ಗಂಗಾವತಿ: ತತ್ವಜ್ಞಾನವನ್ನು ಪ್ರಥಮ ಬಾರಿಗೆ ವಚನಗಳ ಮೂಲಕ ಪ್ರಚುರಪಡಿಸಿ, ಬದುಕನ್ನು ಹಸನಾಗಿಸಿದ ಆದ್ಯ ವಚನಕಾರ ದಾಸಿಮಯ್ಯ ಸಮಸ್ತ ಮನುಕುಲಕ್ಕೆ ದಾರಿದೀಪ ಎಂದು ಭಾರತೀಯ ಗೋ ಪರಿವಾರದ ರಾಜ್ಯ ಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ ಹೇಳಿದರು.

    ನಗರದ ದೇವಾಂಗಮಠದಲ್ಲಿ ದೇವಾಂಗ ಸಮುದಾಯದಿಂದ ಸೋಮವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು.
    ದೇವ ಮಾನವರ ಮಾನಕಾಯ್ದು ವಸ ಸೂತ್ರ ರಚಿಸಿದ ದೇವರ ದಾಸಿಮಯ್ಯ ಸಾರ್ವಕಾಲಿಕ ಶ್ರೇಷ್ಟರು. ವಸ ನೇಯುವ ನೇಕಾರರು ಬದುಕನ್ನು ಕಟ್ಟಿಕೊಳ್ಳಲು ಇಂದಿಗೂ ಪರದಾಡುತ್ತಿದ್ದಾರೆ. ಪುರಾಣ ಕಾಲದಿಂದಲೂ ಶ್ರೀಶೈಲ, ವಾರಣಾಸಿ, ತಿರುಪತಿ, ಮಹಾರಾಷ್ಟ್ರದ ಶಂಭೋ ಮಹಾದೇವ, ಬನಶಂಕರಿದೇವಿ ಸೇರಿ ಜಗತ್ತಿನ ಪ್ರಮುಖ ದೇವರುಗಳಿಗೆ ವಸ ನೇಯ್ದು ಸಮರ್ಪಿಸುವ ಪರಿಪಾಠ ಇಂದಿಗೂ ಮುಂದುವರಿದಿದೆ. ಸಾರ್ಥಕ ಸೇವೆಯಲ್ಲಿರುವ ನೇಕಾರರ ಬದುಕು ಹಸನಾಗಿಸಲು ಸಂಘಟಿತರಾಗುವ ಅಗತ್ಯವಿದೆ ಎಂದರು.

    ದಾಸಿಮಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ವಾಸು ಕೊಳಗದ, ದೇವಾಂಗ ಸಮುದಾಯದ ಮುಖಂಡರಾದ ವಸಂತಗೌಡ ಕೊಪ್ಪರದ, ಮಲ್ಲೇಶಪ್ಪ, ಶಂಕ್ರಪ್ಪ, ಶಿಕ್ಷಕರಾದ ಶಿವಾನಂದ ತಿಮ್ಮಾಪುರ, ಅಜ್ಜಯ್ಯ, ಮಲ್ಲಿಕಾರ್ಜುನ ಕಡೂರು, ವೀರಭದ್ರಪ್ಪ ಹೆಬ್ಬಾಳ, ಸುರೇಶ ಕೊಂಡಕುಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts