More

    ಫಾರ್ಮಾ ವಿದ್ಯಾರ್ಥಿಗಳಿಗೆ ಸಿಗುತ್ತೆ ಪ್ರಮಾಣಪತ್ರ: ಆದ್ರೆ ಷರತ್ತು ಅನ್ವಯ ಅಂತಿದೆ ರಾಜೀವ್ ಗಾಂಧಿ ಆರೋಗ್ಯ ವಿವಿ

    ದೇವರಾಜ್ ಎಲ್​
    ಬೆಂಗಳೂರು: ಕರೊನಾದಿಂದ ವಿದ್ಯಾರ್ಥಿಗಳ ಉದ್ಯೋಗಾವಕಾಶಗಳಿಗೆ ತೊಂದರೆಯಾಗಬಾರದೆಂದು ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್​ಜಿಯುಎಚ್​ಎಸ್) ಹೊಸ ಮಾರ್ಗ ಕಂಡುಕೊಂಡಿದೆ. ಫಾರ್ವ ಕೋರ್ಸ್​ಗಳ ಅಂತಿಮ ವರ್ಷದ ಪರೀಕ್ಷೆ ಬಾಕಿ ಇದ್ದರೂ ವಿದ್ಯಾರ್ಥಿಗಳಿಗೆ ಷರತ್ತುಬದ್ಧವಾಗಿ ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣಪತ್ರ ನೀಡಲು ತೀರ್ಮಾನಿಸಿದೆ.

    ಸಾಮಾನ್ಯವಾಗಿ ಜೂನ್​ನಲ್ಲಿ ಪರೀಕ್ಷೆ ಮುಗಿದು ಫಲಿತಾಂಶ ನೀಡಬೇಕಾಗಿತ್ತು. ಆದರೆ, ಕರೊನಾ ಪ್ರಕರಣಗಳು ನಿತ್ಯ ಹೆಚ್ಚಳವಾಗುತ್ತಿದ್ದು, ಪರೀಕ್ಷೆ ನಡೆಸಲು ಅಸಾಧ್ಯವಾಗಿದೆ. ಇದೇ ರೀತಿ ವಿಳಂಬ ಮಾಡುತ್ತಿದ್ದರೆ, ಫಾರ್ಮಾ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶ ಕೈತಪ್ಪುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ವಿವಿಯು ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಫಾರ್ವ ಕಾಲೇಜುಗಳ ಜತೆಗೆ ಚರ್ಚೆ ನಡೆಸಿತ್ತು. ವಿವಿಯ ಕ್ರಮಕ್ಕೆ ಕಾಲೇಜುಗಳು ಮೆಚ್ಚುಗೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಲ್ಲ ಬಿ ಫಾರ್ವ ಮತ್ತು ಡಿ ಫಾರ್ವ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿ ಪ್ರಮಾಣ ಪತ್ರ ವಿತರಣೆಗೆ ವಿವಿ ಸೂಚನೆ ನೀಡಿದೆ.

    ಇದನ್ನೂ ಓದಿ: ಕೇಂದ್ರ ಸರ್ಕಾರ ಮೂರು ವಿಚಾರಗಳಲ್ಲಿ ಸುಳ್ಳು ಹೇಳುತ್ತಿದೆ…: ರಾಹುಲ್​ ಗಾಂಧಿ ಹೊಸ ಆರೋಪ

    ಕರೊನಾ ವೇಳೆಯಲ್ಲಿ ವಿದ್ಯಾರ್ಥಿ ಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುತ್ತಿವೆ. ಕೆಲಸಕ್ಕೆ ಸೇರಿಕೊಳ್ಳಬೇಕಾದರೆ. ಕೋರ್ಸ್ ಪೂರೈಸ ಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ವಿವಿಯ ನಿರ್ಧಾರ ಉತ್ತಮವಾಗಿದೆ.
    ಡಾ. ಶರವಣನ್, ಪಿಇಎಸ್ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲ

    ಕರೊನಾ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆಯೋಜಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಷರತ್ತು ಬದಟಛಿವಾದ ಕೋರ್ಸ್ ಪೂರೈಸಿರುವ ಪ್ರಮಾಣಪತ್ರ ನೀಡಲು ನಿರ್ಧರಿಸಿದ್ದೇವೆ.
    ಡಾ. ಕೆ.ಬಿ. ಲಿಂಗೇಗೌಡ
    ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ

    ಇದನ್ನೂ ಓದಿ: VIDEO: ವಿರಳ ಹಳದಿ ಬಣ್ಣದ ಆಮೆ ಪತ್ತೆ

    ಷರತ್ತುಗಳೇನು?: ಅಂತಿಮ ವರ್ಷದಲ್ಲಿ ಪರೀಕ್ಷೆ ಉಳಿಸಿಕೊಂಡ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಪ್ರಮಾಣಪತ್ರ ದೊರೆಯಲಿದ್ದು, ಹಿಂದಿನ ಸೆಮಿಸ್ಟರ್​ಗಳಲ್ಲಿ ಅನುತ್ತೀರ್ಣರಾಗಿ ಬ್ಯಾಕ್​ಲಾಗ್ ಆಗಿರುವವರಿಗೆ ದೊರೆಯುವುದಿಲ್ಲ. ಅಲ್ಲದೆ, ವಿವಿಯು ಅಂತಿಮ ಸೆಮಿಸ್ಟರ್ ಪರೀಕ್ಷೆ ಆಯೋಜಿಸಿದಾಗ ಬಂದು ಪರೀಕ್ಷೆ ಬರೆಯಲು ಸಿದ್ಧರಾಗಬೇಕು. ಶೇ.75 ಕನಿಷ್ಠ ಹಾಜರಾತಿ ಇರಬೇಕು. ಇಂತಹ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಡುವಂತೆ ರಾಜೀವ್ ಗಾಂಧಿ ವಿವಿಯು ಎಲ್ಲ ಫಾರ್ಮಸಿ ಕಾಲೇಜುಗಳಿಗೆ ಪತ್ರ ಬರೆದು ಸೂಚನೆ ನೀಡಿದೆ.

    ಇದನ್ನೂ ಓದಿ: ಗಡಿಯಲ್ಲಿ ಗುಂಡು ಹಾರಿಸೋಕೆ ನೇಪಾಳ ಪೊಲೀಸರೂ ಶುರುಮಾಡಿದ್ರು!: ಭಾರತೀಯನಿಗೆ ಗಾಯ

    ರಾಜ್ಯದಲ್ಲಿ 65 ಫಾರ್ಮಸಿ ಕಾಲೇಜುಗಳಿದ್ದು, ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 3 ಸಾವಿರ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವೈದ್ಯಕೀಯ ಕೋರ್ಸ್​ಗಳಲ್ಲಿ ವ್ಯಾಸಂಗ ಮಾಡಿರುವವರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿ ದೊರೆಯುತ್ತಿವೆ. ಫಾರ್ಮಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಸಾಮಾನ್ಯವಾಗಿ ಮಾರ್ಕೆಟಿಂಗ್ ಎಕ್ಸುಕ್ಯೂಟಿವ್, ಫಾರ್ಮಾ ಡೇಟಾ ಎಂಟ್ರಿ, ಮೆಡಿಕಲ್ ಅಧಿಕಾರಿ ಸೇರಿ ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.

    ‘ನಿನ್ನೇ ಮದುವೆ ಆಗ್ತೇನೆ ಚಿನ್ನಾ ಅದಕ್ಕೂ ಮೊದ್ಲು ಮನೆ ಬೇಡ್ವಾ.. ಸ್ವಲ್ಪ ಹಣ ಅಕೌಂಟ್​ಗೆ ಹಾಕು.!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts