More

    ನರ ಬಲಿಯ ಚಿರತೆ ಸೆರೆಗೆ ಬೋನ್; ಫಲವನಹಳ್ಳಿಗೆ ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಭೇಟಿ, 24 ತಾಸಲ್ಲಿ ಬಲೆ ಬೀಸಲು ಸೂಚನೆ

    ನ್ಯಾಮತಿ: ಚಿರತೆ ದಾಳಿಯಿಂದ ರೈತ ಮಹಿಳೆ ಬಲಿಯಾದ ಫಲವನಹಳ್ಳಿ ಸ್ಥಳಕ್ಕೆ ಬುಧವಾರ ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಈರಾಲಾಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ರೈತ ಮಹಿಳೆಯನ್ನು ಬಲಿ ತೆಗೆದುಕೊಂಡ ಚಿರತೆ ಸೆರೆಗೆ ಅಗತ್ಯ ಕಾರ್ಯಾಚರಣೆ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗಾಗಲೇ 5 ಕಡೆ ಬೋನ್ ಇರಿಸಿದ್ದು, ಮತ್ತೆರೆಡು ಬೋನ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

    10 ಕ್ಯಾಮರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚಿರತೆ ಸೆರೆ ಹಿಡಿಯುವ ತನಕ ವಿಶ್ರಮಿಸಿದೆ ಮೈಯೆಲ್ಲಾ ಕಣ್ಣಾಗಿ ಕಾಐರ್ಆಚರಣೆಯಲ್ಲಿ ತೊಡಗಿ ಎಂದು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅದರಂತೆ ಚಿರತೆ ಸೆರೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕೆ.ಆರ್.ಚೇತನ್ ತಿಳಿಸಿದ್ದಾರೆ.

    ಅರಣ್ಯದಂಚಿನ ಪ್ರದೇಶದಲ್ಲಿ ಗ್ರಾಮಸ್ಥರು ಒಬ್ಬೊಬ್ಬರೇ ಓಡಾಡದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಜಾನುವಾರುಗಳನ್ನು ಮೇಯಲು ಬಿಡದಂತೆ ಫಲವನಹಳ್ಳಿ ಗ್ರಾಪಂ ವತಿಯಿಂದ ಟಾಂ ಟಾಂ ಸಾರಲಾಗಿದೆ.

    ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಮೃತ ಮಹಿಳೆ ಕುಟುಂಬಕ್ಕೆ ಸಾಂತ್ವಾನ ಹೇಳಿ ಸರ್ಕಾರದಿಂದ 7.5 ಲಕ್ಷ ರೂ.ಮತ್ತು 5 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ.

    ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಡಿಎಫ್‌ಒ ಜಗನ್ನಾಥ್, ಉಪವಲಯ ಅರಣ್ಯಾಧಿಕಾರಿ ಶಿವಯೋಗಿ, ಬರ್ಕತ್ ಅಲಿ, ಕೃಷ್ಣಮೂರ್ತಿ, ರಂಗಯ್ಯನ ದುರ್ಗದ ಚಂದ್ರಶೇಖರ್, ಕೃಷ್ಣಮೂರ್ತಿ, ಅರಣ್ಯ ವೀಕ್ಷಕರಾದ ಎಂ.ಪಿ.ಬಸವರಾಜಪ್ಪ, ಎಂ.ಆರ್. ಚಂದ್ರಪ ಹಾಗೂ ಪೊಲೀಸ್ ಸಿಬ್ಬಂದಿಯೂ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts