More

    ಮತ್ತೆ ಏರಿದ ಪೆಟ್ರೋಲ್​ ಬೆಲೆ! ಡೀಸೆಲ್ ಬೆಲೆ ತಟಸ್ಥ

    ನವದೆಹಲಿ : ಕಳೆದ 75 ದಿನಗಳಲ್ಲಿ 41 ನೇ ಬಾರಿಯ ಬೆಲೆ ಏರಿಕೆಯಲ್ಲಿ ಇಂದು ಪೆಟ್ರೋಲ್​ ದರ 30 ಪೈಸೆಯಷ್ಟು ಹೆಚ್ಚಳ ಕಂಡಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರದಲ್ಲಿ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್​ 11.44 ರೂ.ಗಳಷ್ಟು ಏರಿಕೆಯಾಗಿದೆ.

    ಮತ್ತೊಂದೆಡೆ, ಡೀಸೆಲ್ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಮೇ ತಿಂಗಳಿಂದ ಈವರೆಗೆ ಲೀಟರ್​ಗೆ 9.14 ರೂ.ಗಳಷ್ಟು ಏರಿಕೆ ಕಂಡಿರುವ ಡೀಸೆಲ್​ಗೆ ಮೂರನೇ ಬಾರಿ ಬೆಲೆ ಏರಿಕೆಯಿಂದ ವಿನಾಯಿತಿ ಸಿಕ್ಕಿದೆ. ಜೊತೆಗೆ ಡೀಸೆಲ್​ ಬೆಲೆ ಜುಲೈ 12 ರಂದು ಲೀಟರ್​ 16 ಪೈಸೆಯಷ್ಟು ಇಳಿಕೆಯನ್ನೂ ಕಂಡಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಕೇರಳದಲ್ಲಿ ಇಂದು, ನಾಳೆ ಸಂಪೂರ್ಣ ಲಾಕ್​ಡೌನ್

    ಇಂದಿನ ಏರಿಕೆಯ ನಂತರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್​ಗೆ 101.84 ರೂ. ತಲುಪಿದೆ, ಡೀಸೆಲ್​ ಬೆಲೆ 89.87 ರೂ.ಗಳಷ್ಟಿದೆ. ದೆಹಲಿಯ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ನ ಈ ಬೆಲೆಯನ್ನು ಮಾನದಂಡವಾಗಿಟ್ಟುಕೊಂಡರೂ, ದೇಶದ ವಿವಿಧೆಡೆಗಳಲ್ಲಿ ಆಯಾ ರಾಜ್ಯಗಳ ತೆರಿಗೆ ದರಗಳನ್ವಯ ಇಂಧನ ಬೆಲೆಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ.

    ಐದು ಮಹಾನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ ಮತ್ತು ಬೆಂಗಳೂರಿನಲ್ಲಿ ಅದಾಗಲೇ 100 ರೂ.ಗಳ ಮಟ್ಟವನ್ನು ಪೆಟ್ರೋಲ್​ ಬೆಲೆ ಮೀರಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್​ 107.83 ರೂ. ಮತ್ತು ಡೀಸೆಲ್ 97.45 ರೂ.ಗಳ ದರದಲ್ಲಿ ಲಭ್ಯವಿದೆ. ದೇಶಾದ್ಯಂತ ಇಂಧನವು ಅತ್ಯಂತ ದುಬಾರಿಯಾಗಿರುವುದು ರಾಜಸ್ಥಾನದ ಗಂಗಾನಗರದಲ್ಲಿ – ಇಲ್ಲಿನ ಬಂಕುಗಳಲ್ಲಿ ಪೆಟ್ರೋಲ್​ನ ಮಾರಾಟ ಬೆಲೆ ಲೀಟರ್​ಗೆ 113.21 ರೂ. ಇದ್ದರೆ, ಡೀಸೆಲ್​ ಬೆಲೆ 103.15 ರೂ.ನಷ್ಟಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಉನ್ನತ ಶಿಕ್ಷಣ ಕಾಲೇಜು ತರಗತಿ ಆರಂಭ ಯಾವಾಗ?

    ಏರುತ್ತಿರುವ ಅಂತರರಾಷ್ಟ್ರೀಯ ತೈಲ ದರಗಳು ಮತ್ತು ದೇಶೀಯ ತೆರಿಗೆಗಳ ದುಬಾರಿ ಮಟ್ಟವು ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಭಾರತ ಪರಿಷ್ಕರಿಸುವ ಇಂಧನದಲ್ಲಿ ಶೇ. 80 ರಷ್ಟಕ್ಕೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)

    ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಮಾದರಿ ಪರೀಕ್ಷೆ; ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ

    ‘ತೂಫಾನ್’ ಚಿತ್ರಕ್ಕೆ ಭರಪೂರ ಪ್ರಶಂಸೆ ನೀಡಿದ ಶಾರೂಖ್ ಖಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts