ಬೆಂಗಳೂರು: ಸತತವಾಗಿ ಏರುತ್ತಲೇ ಇರುವ ತೈಲ ಬೆಲೆ ಈಗಾಗಲೇ ಕರೊನಾ-ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಸಂತ್ರಸ್ತರನ್ನು ಮತ್ತಷ್ಟು ಸಂಕಟಕ್ಕೀಡು ಮಾಡಿದ್ದು, ಇದೀಗ ಪೆಟ್ರೋಲ್ ಬೆಲೆ ಶತಕ ಬಾರಿಸಿದ್ದು, ಸಾರ್ವಜನಿಕರು ಮತ್ತಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ. ರಾಜ್ಯದ ಕೆಲವೆಡೆ ಇದು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ.
ರಾಜ್ಯದ ಬಳ್ಳಾರಿ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದು ಪೆಟ್ರೋಲ್ ಬೆಲೆ ನೂರು ರೂಪಾಯಿಗೂ ಹೆಚ್ಚಾಗಿದೆ. ಉತ್ತರ ಕನ್ನಡದ ಶಿರಸಿಯಲ್ಲಿ ಪೆಟ್ರೋಲ್ ದರ ಇಂದು ಒಂದು ಲೀಟರ್ಗೆ 100.22 ರೂ. ಇದ್ದು, ಬಳ್ಳಾರಿಯಲ್ಲಿ 100.08 ರೂ., ಚಿಕ್ಕಮಗಳೂರಿನಲ್ಲಿ 100.06 ರೂ. ಆಗಿದೆ. ಇನ್ನು ಬಳ್ಳಾರಿಯಲ್ಲಿ ಎಕ್ಸ್ಪಿ ಪೆಟ್ರೋಲ್ ಬೆಲೆ 103.56 ರೂ. ಆಗಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲೂ ಪೆಟ್ರೋಲ್ ಬೆಲೆ ನೂರರ ಗಡಿ ದಾಟುವ ಲಕ್ಷಣಗಳು ನಿಚ್ಚಳವಾಗಿವೆ. ಈಗಾಗಲೇ ಲಾಕ್ಡೌನ್ ಹಿನ್ನೆಲೆಯಲ್ಲಿ ಜನರು ಒಂದೆಡೆ ದುಡಿಮೆ ಇಲ್ಲದೆ, ಇನ್ನೊಂದೆಡೆ ಅಗತ್ಯವಸ್ತುಗಳ ಬೆಲೆ ದುಬಾರಿ ಆಗಿರುವುದರಿಂದಾಗಿ ಭಾರಿ ಸಂಕಷ್ಟದಲ್ಲಿದ್ದಾರೆ. ಈ ನಡುವೆ ನೂರರ ಗಡಿ ದಾಟಿರುವ ಪೆಟ್ರೋಲ್ ಬೆಲೆ ಇನ್ನೂ ಹಲವಾರು ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದ್ದು, ಜನರ ಮೇಲೆ ಬೆಲೆ ಏರಿಕೆಯ ನೂರೆಂಟು ಬರೆ ಬಿದ್ದರೂ ಅಚ್ಚರಿ ಇಲ್ಲ ಎಂಬಂತಾಗಿದೆ.
3 ದಿನಗಳ ಹಿಂದೆ ಅಪಹರಿಸಲಾಗಿದ್ದ ಬಾಲಕನ ಕೊಲೆ; ಸಂಬಂಧಿಯಿಂದಲೇ ಕೃತ್ಯ.. ಅಷ್ಟಕ್ಕೂ ಇಷ್ಟೆಲ್ಲ ಯಾಕೆ ಗೊತ್ತಾ?
ಕೊಲೆ ಆರೋಪದ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪೊಲೀಸ್ ವಶಕ್ಕೆ!; ಕಾರು ಡಿಕ್ಕಿ ಹೊಡೆಸಿ ಕೊಲೆಗೈದ ಆರೋಪ