More

    ಚುನಾವಣಾ ಕಾವು; ಪೆಟ್ರೋಲ್ ಆಮಿಷ ತೋರಿಸಿ ಜನರನ್ನು ಸೇರಿಸಿದರು!

    ಹಾವೇರಿ: ಚುನಾವಣಾ ಕಾವು ಏರುತ್ತಿದ್ದಂತೆಯೇ ರಾಜಕೀಯ ನಾಯಕರುಗಳು ನಾನಾ ರೀತಿಯ ಆಮಿಷ ತೋರಿಸಿ ಜನರ ಬೆಂಬಲ ಪಡೆಯಲು ಪ್ರಯತ್ನಿಸುತ್ತಾರೆ. ಹಾವೇರಿಯ ಬ್ಯಾಡಗಿ ಕ್ಷೇತ್ರದಲ್ಲೂ ಅದೇ ರೀತಿ ಆಮಿಷ ತೋರಿಸಲಾಗುತ್ತಿದ್ದು ಇಲ್ಲಿ ಮಾತ್ರ ಜನರನ್ನು ಸೆಳೆಯಲು ಬಳಸುತ್ತಿರುವುದು ಪೆಟ್ರೋಲ್​! ಈ ವಿಶೇಷ ಎಕ್ಸ್​ಕ್ಲೂಸಿವ್​ ಮಾಹಿತಿ ಲಭಿಸಿರುವುದು ದಿಗ್ವಿಜಯ ನ್ಯೂಸ್​ಗೆ.

    ಪೆಟ್ರೋಲ್ ನೀಡಲು ಬಳಸಿರುವ ಟೋಕನ್

    ಹಾವೇರಿಯ ಬ್ಯಾಡಗಿ ಕ್ಷೇತ್ರದಲ್ಲಿ ಬಿಜೆಪಿ ಎಸ್​ಟಿ ಮೋರ್ಚಾ ಸಮಾವೇಶದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪೆಟ್ರೋಲ್ ಆಮಿಷ ಒಡ್ಡಲಾಗಿದೆ. ಕಾರ್ಯಕರ್ತರಿಗೆ ಮೊದಲು ಟೋಕನ್​ ನೀಡಿ ನಂತರ ಪೆಟ್ರೋಲ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸೇರುವ ಪ್ರತಿಯೊಂದು ವಾಹನಕ್ಕೂ 100 ರೂಪಾಯಿಯ ಪೆಟ್ರೋಲ್ ನೀಡುವ ಆಮಿಷವನ್ನು ಒಡ್ಡಲಾಗಿದೆ.

    ಆದರೆ ಇದಕ್ಕೆ ಒಂದೇ ಕೆಲಸವನ್ನು ನೀವು ಮಾಡಿಕೊಡಬೇಕು. ನಿಮ್ಮ ಬೈಕ್​ಗೆ ಬಿಜೆಪಿ ಭಾವುಟ ಕಟ್ಟಿರಬೇಕು. ಅಂತಹ ದ್ವಿಚಕ್ರ ವಾಹನಗಳಿಗೆ ಮಾತ್ರ ಟೋಕನ್ ಕಾರ್ಯಕರ್ತರು ನೀಡುತ್ತಿದ್ದಾರೆ. ಹೀಗಾಗಿ ಬ್ಯಾಡಗಿ- ಮೊಟ್ಟೆಬೆನ್ನೂರು ರಸ್ತೆಯ ಹೊರವಲಯದ ಬಂಕ್ ಬಳಿ ದ್ವಿಚಕ್ರ ವಾಹನಗಳು ಸಾಲುಗಟ್ಟಿ ನಿಂತಿವೆ.

    ಈ ಸುದ್ದಿಯನ್ನು ವಿಡಿಯೋ ರೂಪದಲ್ಲಿ ಇಲ್ಲಿ ನೋಡಿ: 

    ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಬರುತ್ತಿದ್ದು ರೋಡ್ ಶೋ‌ ಹಿನ್ನೆಲೆಯಲ್ಲಿ ಜನರನ್ನು ಸೆಳೆಯಲು ಈ ತಂತ್ರವನ್ನು ಬಳಸಲಾಗಿದೆ. ಅಂದಹಾಗೆ ಪೆಟ್ರೋಲ್ ಆಮಿಷ ಒಡ್ಡಿ ಜನರನ್ನು ಸೇರಿಸುತ್ತಿರುವುದು ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಯ ಬೆಂಬಲಿಗರು. ಈ ರೋಡ್​ ಶೋ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಪ್ರಮುಖ ಬೀದಿಯಲ್ಲಿ ನಡೆಯಲಿದೆ.

    ತೃತೀಯ ಲಿಂಗಿಗಳ ಆರ್ಥಿಕ ಅಭಿವೃದ್ಧಿ: ದೇಶದಲ್ಲಿ ಮೊದಲ ಟ್ರಾನ್ಸ್ ಟೀ ಸ್ಟಾಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts