More

    ಹೋಳಿ ಹೆಸರಲ್ಲಿ ಜಪಾನಿ ಮಹಿಳೆಗೆ ಕಿರುಕುಳ! ಭಾರತದಿಂದ ಹೊರಹೋಗಿ ಆಕೆ ಟ್ವೀಟ್​ ಮಾಡಿದ್ದೇನು?

    ನವದೆಹಲಿ: ಹೋಳಿ ಹಬ್ಬದಂದು ದೆಹಲಿಯಲ್ಲಿ ಜಪಾನಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

    ಮಹಿಳೆ ಈವರೆಗೆ ದೂರು ದಾಖಲಿಸಿಲ್ಲ. ಅದಲ್ಲದೇ ನಿನ್ನೆ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಜಪಾನಿ ಯುವತಿ, ದೆಹಲಿಯ ಪಹರ್‌ಗಂಜ್‌ನಲ್ಲಿ ತಂಗಿದ್ದರು. ಮೂವರು ಆರೋಪಿಗಳು, ಒಬ್ಬ ಬಾಲಾಪರಾಧಿ ಕೂಡ ಅದೇ ಪ್ರದೇಶದವರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ವಿಸ್ಮಯಕಾರಿ ಆನಿಮೆ!; ಮಕ್ಕಳ ನೆಚ್ಚಿನ ವರ್ಣರಂಜಿತ ಪ್ರಪಂಚ

    ಮಹಿಳೆ ತಾನು ಬಾಂಗ್ಲಾದೇಶ ತಲುಪಿದ್ದು ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಕ್ರಮಕ್ಕೆ ಜನರು ಕರೆ ನೀಡಿದ್ದಾರೆ. ವೈರಲ್​ ಆಗಿರುವ ವಿಡಿಯೊದಲ್ಲಿ, ಕೆಲ ಯುವಕರು ಆ ಮಹಿಳೆಯನ್ನು ಹಿಡಿದುಕೊಂಡು “ಹೋಳಿ ಹೈ” ಎಂಬ ಘೋಷಣೆಗಳ ನಡುವೆ ಬಣ್ಣಗಳನ್ನು ಬಳಿಯುತ್ತಿದ್ದಾರೆ.

    ಇದನ್ನೂ ಓದಿ: ಗಿನ್ನೆಸ್​ ದಾಖಲೆ | ಅವಳಿ ಸೋದರಿಯರ ನಡುವೆ 2.5 ಅಡಿ ಅಂತರ!

    ಒಬ್ಬ ಹುಡುಗ ಅವಳ ತಲೆಯ ಮೇಲೆ ಮೊಟ್ಟೆಯನ್ನು ಒಡೆದು ಹಾಕುತ್ತಿರುವುದನ್ನು ಸಹ ಕಾಣಬಹುದು. ಅವಳು ಅಂತಿಮವಾಗಿ ದೂರ ಸರಿಯುವ ಮೊದಲು ತನ್ನನ್ನು ಹಿಡಿದಿಡಲು ಪ್ರಯತ್ನಿಸುವ ವ್ಯಕ್ತಿಗೆ ಅವಳು ಕಪಾಳಮೋಕ್ಷ ಮಾಡುತ್ತಾಳೆ. ಆ ವಿಡಿಯೋದ ಕೊನೆಗೆ ಆ ಮಹಿಳೆಯು ಈ ಕಿರಾತಕರ ದೌರ್ಜನ್ಯಕ್ಕೆ ಸುಸ್ತಾಗಿ ಹೋಗಿರುವುದು ವಿಡಿಯೋದಲ್ಲ ಕಾಣಬಹುದು.

    ಇದನ್ನೂ ಓದಿ: ಚಂದ್ರಯಾನಕ್ಕೆ ಸಂಗಾತಿ ಬೇಕು ಎಂದಿದ್ದ ಜಪಾನಿನ ಬಿಲಿಯನೇರ್​ ಯುಸಾಕು ಮೇಜಾವಾ ಯೂಟರ್ನ್​

    ಸ್ಥಳೀಯ ಗುಪ್ತಚರರ ಮೂಲಕ ಆರೋಪಿಗಳನ್ನು ಗುರುತಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಜಪಾನ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts