More

    ವ್ಯಾಟ್​ ಹೆಚ್ಚಳದಿಂದ ಇಂಧನ ದರದಲ್ಲಿ ಭಾರಿ ಏರಿಕೆ: ಯಾವ್ಯಾವ ನಗರದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟಿದೆ?

    ನವದೆಹಲಿ: ಇಂಧನ ಮೇಲಿನ ಮೌಲ್ಯವರ್ಧಿತ ತೆರಿಗೆ(ವ್ಯಾಟ್​) ಹೆಚ್ಚಳ ಹಿನ್ನೆಲೆಯಲ್ಲಿ ಮುಂಬೈ, ಬೆಂಗಳೂರು ಹಾಗೂ ಕೋಲ್ಕತಾದಂತಹ ಮಹಾನಗರಗಳಲ್ಲಿ ಪೆಟ್ರೋಲ್​, ಡಿಸೇಲ್​ ದರ ಮತ್ತಷ್ಟು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಇಳಿಕೆಯಾದರೂ ದೇಶದಲ್ಲಿ ಇಂಧನ ದರ ಗಗನಮುಖಿಯಾಗಿರುವುದು ಸಾರ್ವಜನಿಕರ ಜೇಬಿಗೆ ಹೊರೆಯಾಗಿದೆ.

    ವ್ಯಾಟ್​ ಹೆಚ್ಚಳದಿಂದಾಗಿ ಮುಂಬೈ ಮತ್ತು ಕೋಲ್ಕತದಲ್ಲಿ ಲೀಟರ್​ ಒಂದಕ್ಕೆ ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆಯಲ್ಲಿ 1 ರೂ. ಏರಿಕೆಯಾಗಿದ್ದರೆ, ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆಯಲ್ಲಿ 1.58 ರೂ. ಹಾಗೂ ಡಿಸೇಲ್​ಗೆ 1.55 ರೂ. ಹೆಚ್ಚಳವಾಗಿದೆ.

    ಏಪ್ರಿಲ್​ನಿಂದ ಇಂಧನ ವ್ಯಾಪಾರಿಗಳು ಯೂರೋ- VIಗೆ ಸಮನಾದ ಬಿಎಸ್​-VI ಶ್ರೇಣಿಯ ಇಂಧನವನ್ನು ಮಾರಾಟ ಮಾಡಲಾಗುತ್ತಿದೆ. ಇಂಧನ ನವೀಕರಣಕ್ಕೆ 35 ಸಾವಿರ ಕೋಟಿ ರೂ. ಹೆಚ್ಚುವರಿಯಾಗಿ ತಗುಲಿರುವುದು ಕೂಡ ಇಂಧನ ದರದ ಹೆಚ್ಚಳಕ್ಕೆ ಕಾರಣವಾಗಿದೆ.

    ಪ್ರಮುಖ ನಗರಗಳಲ್ಲಿ ಇಂದಿನ ಇಂಧನ ದರ ಹೀಗಿದೆ…
    * ದೆಹಲಿ- ಪೆಟ್ರೋಲ್​(69.59 ರೂ.), ಡೀಸೆಲ್​(62.29 ರೂ.)
    * ಮುಂಬೈ- ಪೆಟ್ರೋಲ್​(76.31), ಡೀಸೆಲ್​ (66.21 ರೂ.)
    * ಚೆನ್ನೈ- ಪೆಟ್ರೋಲ್​(72.28 ರೂ.), ಡೀಸೆಲ್​ (65.71 ರೂ.)
    * ಬೆಂಗಳೂರು- ಪೆಟ್ರೋಲ್​(73.55 ರೂ.), ಡೀಸೆಲ್​ (65.96 ರೂ.)
    * ಹೈದರಾಬಾದ್​- ಪೆಟ್ರೋಲ್​(73.97 ರೂ.), ಡೀಸೆಲ್​ (67.82 ರೂ.)
    * ಕೋಲ್ಕತ- ಪೆಟ್ರೋಲ್​(73.30 ರೂ.), ಡೀಸೆಲ್​ (65.62 ರೂ.)

    ಬ್ರೆಂಟ್​ ಕಚ್ಚಾ ತೈಲವು ಶುಕ್ರವಾರ 3 ರಷ್ಟು ಕುಸಿತದೊಂದಿಗೆ 29.05 ಡಾಲರ್​ಗೆ ಇಳಿದಿದೆ. ಕರೊನಾ ವೈರಸ್​ನಿಂದಾಗಿ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಇಂಧನ ದರದಲ್ಲಿ ಶೇ. 60ರಷ್ಟು ದರ ಕುಸಿದಿರುವುದು ಕೇಂದ್ರ ಸರ್ಕಾರಕ್ಕೆ ಲಾಭವಾಗಿ ಪರಿಣಮಿಸಿದೆ. (ಏಜೆನ್ಸೀಸ್​)

    ಮತ್ತೆ ತತ್ತರಿಸಿತು ಷೇರುಪೇಟೆ- ಸೆನ್ಸೆಕ್ಸ್ 400 ಅಂಶ ಕುಸಿದರೆ, ನಿಫ್ಟಿ 8,200ರ ಕೆಳಕ್ಕೆ…

    ಚೀನಾ ವಿರುದ್ಧ ಐಸಿಜೆಯಲ್ಲಿ ಪ್ರಶ್ನಿಸಿ, 500 ಬಿಲಿಯನ್​ ಡಾಲರ್​ ಪರಿಹಾರ ಕೇಳಿ: ಪ್ರಧಾನಿಗೆ ಕಾನೂನು ಪರಿಣಿತರಿಂದ ಸಲಹಾ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts