More

    ವಾಹನ ಸವಾರರಿಗೆ ಶಾಕ್ ಮೇಲೆ ಶಾಕ್: 9 ದಿನದಲ್ಲಿ 8ನೇ ಬಾರಿ ಪೆಟ್ರೋಲ್, ಡೀಸೆಲ್​ ಬೆಲೆ ಏರಿಕೆ!

    ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ ಆಗಿದ್ದು, ವಾಹನ ಸವಾರರು ಇದರಿಂದ ಕಂಗಾಲಾಗಿದ್ದಾರೆ.

    ಬುಧವಾರ ಅಂದರೆ ಮಾರ್ಚ್ 30, 2022ರಂದು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಕಳೆದ ಒಂಬತ್ತು ದಿನಗಳಲ್ಲಿ ಒಟ್ಟು 8ನೇ ಬಾರಿಗೆ ದರ ಏರಿಕೆ ಮಾಡಲಾಗಿದೆ. ಈ ಮೂಲಕ ಒಟ್ಟು ಲೀಟರ್‌ಗೆ 5 ರೂ 60 ಪೈಸೆ ಹೆಚ್ಚಳ ಮಾಡಲಾಗಿದೆ.

    ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮಕ್ಕೆ ತೈಲ ಕಂಪನಿಗಳು ಅಂತ್ಯ ಹಾಡಿ, ನಿತ್ಯವೂ 70-80 ಪೈಸೆಯಷ್ಟು ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಪ್ರಾರಂಭಿಸಿವೆ. ಇದು ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ಒಟ್ಟಾರೆ ಮಾರ್ಚ್​ 22 ರಿಂದ ಇಲ್ಲಿವರೆಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 5.60 ರೂ. ಹೆಚ್ಚಳ ಮಾಡಲಾಗಿದೆ.

    ತೈಲ ಏರಿಕೆಗೆ ಕೇಂದ್ರ ಸಮರ್ಥನೆ: ಅಂತಾರಾಷ್ಟ್ರೀಯ ಮಾರುಕಟ್ಟೆ ದರ ಹೆಚ್ಚಳ ಪ್ರಮುಖ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts