More

    ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ಬೆಲೆ: ಸತತ ಐದನೇ ದಿನವೂ ದಾಖಲಾಗಿದೆ ಏರಿಕೆ

    ನವದೆಹಲಿ: ಲಾಕ್​ಡೌನ್ ಹಂತ ಹಂತವಾಗಿ ಹಿಂತೆಗೆಯುವ ಪ್ರಕ್ರಿಯೆ ಆರಂಭವಾದ ಬೆನ್ನಿಗೆ ಪೆಟ್ರೋಲ್, ಡೀಸೆಲ್ ಬೆಲೆಗಳ ನಿತ್ಯ ಪರಿಷ್ಕರಣೆಯೂ ಆರಂಭವಾಗಿದೆ. ಭಾನುವಾರದಿಂದ ನಿತ್ಯ ದರ ಪರಿಷ್ಕರಣೆ ಶುರುವಾಗಿದ್ದು ಸತತ ಐದನೇ ದಿನವೂ ಬೆಲೆ ಏರಿಕೆ ದಾಖಲಾಗಿದೆ. ಲಾಕ್​ಡೌನ್ ಅವಧಿಯಲ್ಲಿ 82 ದಿನಗಳ ಕಾಲ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸ್ಥಿರವಾಗಿತ್ತು.ಯಾವುದೇ ಪರಿಷ್ಕರಣೆ ನಡೆದಿರಲಿಲ್ಲ.

    ಗುರುವಾರ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಪ್ರತಿ ಲೀಟರ್ ಮೇಲೆ 60 ಪೈಸೆ ಹೆಚ್ಚಳವಾಗಿದೆ. ಇದರಂತೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 74 ರೂಪಾಯಿ ಆದರೆ, ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ 72.22 ಪೈಸೆ ಆಗಿದೆ. ನಿನ್ನೆ ಪೆಟ್ರೋಲ್ ಬೆಲೆ ಲೀಟರ್​ಗೆ 73.40 ಪೈಸೆ ಇತ್ತು. ಡೀಸೆಲ್ ಬೆಲೆ 71.62 ಪೈಸೆ ಇತ್ತು.

    ಇದನ್ನೂ ಓದಿ: ತೈಲ ಬೆಲೆ ಸತತ 4ನೇ ದಿನ ಏರಿಕೆ

    ಆದಾಗ್ಯೂ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏಕರೂಪದಲ್ಲಿ ಇಲ್ಲ. ಆಯಾ ರಾಜ್ಯಗಳಲ್ಲಿನ ಸ್ಥಳೀಯ ತೆರಿಗೆ ಅಥವಾ ವ್ಯಾಟ್​ ಮತ್ತು ಇತರೆ ವೆಚ್ಚಕ್ಕೆ ಅನುಗುಣವಾಗಿ ವ್ಯತ್ಯಾಸವಿದೆ. ದೆಹಲಿಯಲ್ಲಿ ಕಳೆದ ಐದು ದಿನಗಳ ಅವಧಿಯಲ್ಲಿ ಒಟ್ಟು ಪೆಟ್ರೋಲ್ ಬೆಲೆ ಲೀಟರ್​ಗೆ 2.74 ರೂಪಾಯಿ, ಡೀಸೆಲ್​ಗೆ ಲೀಟರಿಗೆ 2.83 ರೂಪಾಯಿ ಏರಿಕೆ ಆದಂತಾಗಿದೆ. (ಏಜೆನ್ಸೀಸ್​)

    ಪೆಟ್ರೋಲ್ ಬೆಲೆ 54 ಪೈಸೆ, ಡೀಸೆಲ್​ ಬೆಲೆ 58 ಪೈಸೆ ಪ್ರತಿ ಲೀಟರ್​ಗೆ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts