More

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಖಂಡನೆ

    ಧಾರವಾಡ: ಕೇಂದ್ರ ಸರ್ಕಾರ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳ ವಾಪಸಾತಿ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

    ಕೇಂದ್ರ ಸರ್ಕಾರದ 3 ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಕೊರೆಯುವ ಚಳಿ ಲೆಕ್ಕಿಸದೆ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಮೂರು ಕೃಷಿ ಕಾನೂನುಗಳ ತಿದ್ದುಪಡಿಯನ್ನು ರದ್ದುಪಡಿಸಬೇಕು. ಪೆಟ್ರೋಲ್, ಡೀಸೆಲ್ ಹಾಗೂ ಅಡಿಗೆ ಅನಿಲ ದರ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಕುರಿತು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.

    ಮುಖಂಡರಾದ ಇಸ್ಮಾಯಿಲ್ ತಮಟಗಾರ, ದೀಪಕ ಚಿಂಚೋರೆ, ಬಸವರಾಜ ಮಲಕಾರಿ, ಬಸವರಾಜ ಕಿತ್ತೂರ, ಯಾಸೀನ ಹಾವೇರಿಪೇಟ, ವಸಂತ ಅರ್ಕಾಚಾರಿ, ದೇವಕಿ ಯೋಗಾನಂದ, ಜಯಲಕ್ಷ್ಮೀ ದೊಡಮನಿ, ಗೌರಿ ನಾಡಗೌಡ್ರ, ದೀಪಾ ಗೌರಿ, ಗೌಸಖಾನ ನವಲೂರ, ಮುಸ್ತಾಕ್ ಪಟೇಲ, ಇಮ್ರಾನ್ ಯಲಿಗಾರ, ಸೂರಜ ಗೌಳಿ, ಮಹಾವೀರ ಶಿವಣ್ಣವರ, ಪ್ರಭು ತಂಸಿ, ಮಂಜುನಾಥ ಬಟಕುರಿ, ತಾನಾಜಿ ಶಿರ್ಕೆ, ಆನಂದ ಸಿಂಗನಾಥ, ಜಯಶ್ರೀ ದೇಶಮಾನೆ, ವಾಣಿ ಕರಿಗಾರ, ಶೇಖ, ಭಕ್ತಿ ಕಡಕೋಳ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts