More

    ಮತ್ತೆ ಏರಿತು ಇಂಧನ ಬೆಲೆ; ಪೆಟ್ರೋಲ್​-ಡೀಸೆಲ್ ಇನ್ನೂ ದುಬಾರಿ

    ನವದೆಹಲಿ: ಜಾಗತಿಕ ತೈಲ ಬೆಲೆಗಳಲ್ಲಿ ಮೂರು ವರ್ಷಗಳಲ್ಲೇ ಅತಿಯಾದ ಏರಿಕೆ ಕಂಡುಬಂದಿರುವ ಕಾರಣ, ಭಾರತದಲ್ಲಿ ಶನಿವಾರ(ಅ.2) ಪೆಟ್ರೋಲ್​-ಡೀಸೆಲ್​ ಬೆಲೆಗಳಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ​25 ಪೈಸೆ ಏರಿಕೆಯೊಂದಿಗೆ ಲೀಟರ್​ಗೆ 101.89 ರೂ. ಇದ್ದ ಪೆಟ್ರೋಲ್ ಬೆಲೆ ₹ 102.14 ಆಗಿದೆ. ಡೀಸೆಲ್​ ಬೆಲೆಯು 30 ಪೈಸೆಯಷ್ಟು ಹೆಚ್ಚಿದ್ದು, ಪ್ರತಿ ಲೀಟರ್​ಗೆ ₹ 90.17 ರಿಂದ ₹ 90.47 ಹೆಚ್ಚಿದೆ ಎಂದು ಇಂಡಿಯನ್​ ಆಯಿಲ್ ಕಾರ್ಪೋರೇಷನ್​ ತಿಳಿಸಿದೆ.

    ಮುಂಬೈನಲ್ಲಿ 24 ಪೈಸೆ ಹೆಚ್ಚಳದೊಂದಿಗೆ ಪೆಟ್ರೋಲ್​ ಬೆಲೆಯು ಲೀಟರ್​ಗೆ 108.19 ರೂ. ಆಗಿದ್ದು, ಡೀಸೆಲ್​ಗೆ ಪ್ರತಿ ಲೀಟರ್​ಗೆ 32 ಪೈಸೆ ಹೆಚ್ಚಳವಾಗಿ 98.16 ರೂ. ತಲುಪಿದೆ. ನಾಲ್ಕು ಮೆಟ್ರೊ ನಗರಗಳಲ್ಲಿ ಅತಿಹೆಚ್ಚಿನ ಇಂಧನ ಬೆಲೆ ಇರುವ ನಗರವೆಂದರೆ ಮುಂಬೈ. ವ್ಯಾಟ್​ನಲ್ಲಿನ​ ವ್ಯತ್ಯಾಸದಿಂದಾಗಿ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಇಂಧನ ದರಗಳು ಇರುತ್ತವೆ. (ಏಜೆನ್ಸೀಸ್)

    VIDEO| ಅಂಡರ್​ವಾಟರ್​ ಜಾವೆಲಿನ್​! ಚಿನ್ನದ ಹುಡುಗ ನೀರಜ್​ ಚೋಪ್ರಾರ ಈ ವಿಡಿಯೋ ನೋಡಿ

    ಈ ತಿಂಗಳಲ್ಲೇ ಮಕ್ಕಳಿಗೂ ಕರೊನಾ ಲಸಿಕೆ: ಆರೋಗ್ಯ ಸಚಿವ ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts