More

    ಕಬ್ಬಿಗೆ ಎಫ್ಆರ್‌ಪಿ ಹೆಚ್ಚಳಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ


    ಮುದ್ದೇಬಿಹಾಳ : ತಾಲೂಕಿನ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ನಿಗದಿಪಡಿಸಿರುವ ನ್ಯಾಯೋಚಿತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ಹೆಚ್ಚಿಸಲು ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಳಿಕೋಟೆ ತಾಲೂಕು ಘಟಕದ ವತಿಯಿಂದ ಪಡೇಕನೂರ ಹಾಗೂ ಸುತ್ತಲಿನ ಕಬ್ಬು ಬೆಳೆಗಾರರು ಬುಧವಾರ ಪಟ್ಟಣದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    ಬಾಲಾಜಿ ಸಕ್ಕರೆ ಕಾರ್ಖಾನೆಯವರು ಕಾರ್ಖಾನೆ ಪ್ರಾರಂಭಗೊಂಡಾಗಿನಿಂದ ಕಬ್ಬಿನ ದರ ಕಡಿಮೆ ನೀಡುತ್ತ ಬಂದಿದ್ದಾರೆ. 2022-23ನೇ ಸಾಲಿಗೆ ಪ್ರತಿ ಟನ್‌ಗೆ (1000 ಕೆಜಿಗೆ) 2502 ರೂ. ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಈ ದರ ನಾಯಯುತವಾಗಿಲ್ಲ. ವಿಜಯಪುರ ಜಿಲ್ಲೆಯ ನಾಯನೇಗಲಿ ಸಕ್ಕರೆ ಕಾರ್ಖಾನೆಯವರು ಪ್ರತಿ ಟನ್‌ಗೆ 2766 ರೂ. ದರ ನಿಗದಿ ಮಾಡಿದ್ದು, ಇದನ್ನು ಪರಿಗಣಿಸಿ ಬಾಲಾಜಿಯವರೂ ಟನ್‌ಗೆ 2800 ರೂ. ನೀಡಲು ಆದೇಶ ಹೊರಡಿಸುವಂತೆ ನೋಡಿಕೊಳ್ಳಬೇಕು. ಒಂದು ವಾರದೊಳಗೆ ಈ ಬೇಡಿಕೆ ಈಡೇರದಿದ್ದಲ್ಲಿ ಎಲ್ಲ ಗ್ರಾಮದ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

    ರಾಜ್ಯ ಕಬ್ಬು ಅಭಿವದ್ದಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರು 2021-22ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ 2022-23ನೇ ಸಾಲಿಗೆ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್​ಆರ್‌ಪಿ) ಯನ್ನೇ ಪ್ರಕಟಿಸಲಾಗಿದೆ.

    ಬಾಲಾಜಿ ಸಕ್ಕರೆ ಕಾರ್ಖಾನೆಯು 2021-22ನೇ ಸಾಲಿನಲ್ಲಿ (1-7-2021ರಿಂದ 30-6-2022ರವರೆಗೆ) 10,67,053 ಮೆಟ್ರಿಕ್ ಟನ್ ಕಬ್ಬು ನುರಿಸಿದೆ. ಇದರಿಂದ 98,382 ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿದೆ. ಇದು ಶೇ. 10.80 ಇಳುವರಿ ಆಗಿದೆ. ಈ ಆಧಾರದ ಮೇಲೆ 2022-23ನೇ ಸಾಲಿಗೆ ಪ್ರತಿ ಮೆಟ್ರಿಕ್ ಟನ್ (1000 ಕೆಜಿ) ಕಬ್ಬಿಗೆ ಎ್ಆರ್‌ಪಿ ದರ 3218 ರೂ ನಿಗದಿಪಡಿಸಿದೆ.

    ಈ ಎಫ್​ಆರ್‌ಪಿ ಎಕ್ಸ್‌ಗೇಟ್ ದರವಾಗಿದೆ. ಹೀಗಾಗಿ ಎ್ಆರ್‌ಪಿ 3218 ರೂ. ಗಳಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಮುರಿದುಕೊಂಡು 2502 ರೂ. ದರ ನಿಗದಿಪಡಿಸಲಾಗಿದೆ. ಇಲ್ಲಿ ಕಾರ್ಖಾನೆಯವರು ಆಯುಕ್ತರು ಮತ್ತು ನಿರ್ದೇಶಕರು ನಿಗದಿಪಡಿಸಿದ ಎಫ್​ಆರ್‌ಪಿಯಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವಾಗಿ ಪ್ರತಿ ಮೆಟ್ರಿಕ್ ಟನ್‌ಗೆ 716 ರೂ. ಕಡಿತಗೊಳಿಸುತ್ತಿರುವುದಾಗಿ ಕಾರ್ಖಾನೆ ಮೂಲಗಳು ಮಾಹಿತಿ ನೀಡಿವೆ.

    ಸಂಘದ ತಾಳಿಕೋಟೆ ತಾಲೂಕು ಅಧ್ಯಕ್ಷ ಶಿವನಗೌಡ ಕೊನಾಳ, ಗೌರವಾಧ್ಯಕ್ಷ ಎಸ್.ಎಂ. ಬಿರಾದಾರ, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಹಿರೇಗೌಡರ, ಕಬ್ಬು ಬೆಳೆಗಾರರಾದ ಎ.ಎನ್. ಶಿವಯೋಗಿ, ಎ.ಸಿ. ಬಿರಾದಾರ, ಎಸ್.ಬಿ. ಜಾಲಿಕಟ್ಟಿ, ಬಿ.ಎ. ಕೊನಾಳ, ಎಸ್.ಎಸ್. ಸೌದಿ, ಎಸ್.ಎಚ್. ವಜ್ಜಲ, ಜಿ.ಎಸ್. ಮೇಟಿ, ಸಿ.ಎಸ್. ತುಂಬಗಿ, ಎಸ್.ಬಿ. ಬಿರಾದಾರ, ಎಸ್.ಎಸ್. ಬಿರಾದಾರ, ಆನಂದ ಲಿಂಗದಳ್ಳಿ, ಬಸವರಾಜ ಹೆರೂರ, ಶಿವನಗೌಡ ನರಸಲಗಿ, ಬಸವಂತ್ರಾಯ ಮೂಲಿಮನಿ, ಶಿವನಗೌಡ ಕಳ್ಳಿ, ರಾಜುಗೌಡ ಮೇಲಿನಮನಿ, ಶ್ರೀಶೈಲ ಜಾಲಿಕಟ್ಟಿ, ಮಲ್ಲನಗೌಡ ಕರಭಂಟನಾಳ, ಭೀಮನಗೌಡ ಮೇಟಿ, ಪ್ರಭುಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts