More

    ಮಹಿಳೆ ಸಾವು ಪ್ರಕರಣ: ಸಾಕಿದ ಗಿಣಿಯಿಂದ ಮಹತ್ವದ ಸುಳಿವು, ಆರೋಪಿಗೆ ಜೀವಾವಧಿ ಶಿಕ್ಷೆ

    ಆಗ್ರಾ: ಸಾಕಿದ ಗಿಣಿಯೊಂದು ನೀಡಿದ ಮಹತ್ವದ ಸುಳಿವಿನ ಆಧಾರದ ಮೇಲೆ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯೊಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಆರೋಪಿಯನ್ನು ಆಶುತೋಷ್​ ಎಂದು ಗುರುತಿಸಲಾಗಿದೆ. ಈತ ಆಗ್ರಾದ ಮುಂಚೂಣಿ ಪತ್ರಿಕೆಯ ಮುಖ್ಯ ಸಂಪಾದಕ ವಿಜಯ್​ ಶರ್ಮಾ ಅವರ ಪತ್ನಿ ನೀಲಂ ಶರ್ಮಾರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಅಲ್ಲದೆ, 72 ಸಾವಿರ ರೂ. ದಂಡವನ್ನು ಸಹ ವಿಧಿಸಲಾಗಿದೆ.

    2014ರ ಫೆ. 10ರಂದು ತಮ್ಮ ಮನೆಯಲ್ಲೇ ನೀಲಂ ಶರ್ಮಾರ ಕೊಲೆ ನಡೆದಿತ್ತು. ಕೊಲೆಯ ಬಳಿಕ ಮನೆಯನ್ನು ದರೋಡೆ ಮಾಡಲಾಗಿತ್ತು. ಆದರೆ, ಪೊಲೀಸರಿಗೆ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಸಾಕಿದ ಗಿಳಿ ಈ ಪ್ರಕರಣದಲ್ಲಿ ಮಹತ್ವದ ಸುಳಿವು ನೀಡಿತು. ಘಟನೆ ನಡೆದ ದಿನ ಸಾಕಿದ ನಾಯಿ ಮತ್ತು ನೀಲಂ ಶರ್ಮಾ ಮಾತ್ರ ಮನೆಯಲ್ಲಿದ್ದರು. ವಿಜಯ ಶರ್ಮಾ ಮತ್ತು ಅವರ ಮಕ್ಕಳಾದ ರಾಜೇಶ್​ ಮತ್ತು ನಿವೇದಿತಾ, ಫಿರೋಜಾಬಾದ್​ನಲ್ಲಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು.

    ಇದನ್ನೂ ಓದಿ: ಮಣ್ಣಿನಡಿ ಸಿಲುಕಿ ಮೂವರ ಮೃತ್ಯು

    ಆ ದಿನ ತಡರಾತ್ರಿ ಮೂವರು ಮನೆಗೆ ಬಂದರು. ಈ ವೇಳೆ ನೀಲಂ ಮತ್ತು ಸಾಕು ನಾಯಿ ಶವವಾಗಿ ಪತ್ತೆಯಾಗಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಲಾಗಿತ್ತು. ಈ ಘಟನೆಯ ಬಳಿಕ ನೀಲಂ ಅವರ ಸಾಕಿದ ಗಿಳಿ ಹರ್ಕ್ಯುಲ್​ ಊಟ ತಿನ್ನುವುದು ಮತ್ತು ನೀರು ಕುಡಿಯುವುದನ್ನು ತ್ಯಜಿಸಿತ್ತು. ಅಲ್ಲದೆ, ಕಿರಿಚಾಡುವುದನ್ನು ನಿಲ್ಲಿಸಿತ್ತು. ಇದನ್ನು ಗಮನಿಸಿದ ವಿಜಯ್​ ಶರ್ಮಾ, ನೀಲಂ ಕೊಲೆಯಾಗಿರುವುದನ್ನು ಗಿಳಿ ನೋಡಿರಬಹುದೆಂದು ಸಂಶಯ ವ್ಯಕ್ತಪಡಿಸಿದರು.

    ಇದಾದ ನಂತರ ಕೊಲೆಗೆ ಸಂಬಂಧಿಸಿದ ಶಂಕಿತರ ಹೆಸರುಗಳನ್ನು ಒಂದೊಂದಾಗಿ ಗಿಳಿ ಮುಂದೆ ಹೇಳಿದಾಗ ಆಶುತೋಷ್ ಹೆಸರನ್ನು ಕೇಳಿ ಗಿಳಿ ‘ಆಶು ಅಶು’ ಎಂದು ಕಿರುಚತೊಡಗಿತು. ಇದರ ಬೆನ್ನಲ್ಲೇ ವಿಜಯ್ ಶರ್ಮಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಶುತೋಷ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಮನವಿ ಮಾಡಿದ್ದರು. ನಂತರದ ವಿಚಾರಣೆಯಲ್ಲಿ ಅಶುತೋಷ್ ಅಪರಾಧವನ್ನು ಒಪ್ಪಿಕೊಂಡಿದ್ದ. ಕಳ್ಳತನ ಮಾಡುವಾಗ ನೀಲಂ ಶರ್ಮಾ ಅವರು ಹಿಡಿದುಕೊಂಡಿದ್ದರಿಂದ ಚಾಕುವಿನಿಂದ 14 ಬಾರಿ ಇರಿದಿದ್ದ. ಈ ವೇಳೆ ನಾಯಿ ಬೊಗಳುತ್ತಲೇ ಇತ್ತು. ಹೀಗಾಗಿ ನಾಯಿಗೂ 9 ಬಾರಿ ಇರಿದು ಸಾಯಿಸಿದ್ದ. ಇದಿಷ್ಟನ್ನು ಗಿಳಿ ಹತ್ತಿರದಿಂದಲೇ ನೋಡಿತ್ತು.

    ಅಂದಹಾಗೆ ಆರೋಪಿ ಆಶುತೋಷ್​ ನೀಲಂ ಕುಟುಂಬಕ್ಕೆ ಪರಿಚಿತನಾಗಿದ್ದ. ಆಶುತೋಷ್ ಆಗಾಗ ಮನೆಗೆ ಭೇಟಿ ನೀಡುತ್ತಿದ್ದ ಎಂದು ನೀಲಂ ಶರ್ಮಾ ಅವರ ಪುತ್ರಿ ನಿವೇದಿತಾ ಹೇಳಿದ್ದಾರೆ. ಅಶುತೋಷ್ ಎಂಬಿಎ ಕೋರ್ಸ್ ಮಾಡುತ್ತಿರುವ ಕಾರಣ ವಿಜಯ್ ಶರ್ಮಾ ಅವರು 80 ಸಾವಿರ ರೂ. ನೀಡಿದ್ದರು. ಮನೆಗೆ ಬಗ್ಗೆ ಚೆನ್ನಾಗಿ ತಿಳಿದಿದ್ದ ಆಶುತೋಷ್​ಗೆ ಮನೆಯಲ್ಲಿ ಚಿನ್ನಾಭರಣ ಮತ್ತು ಹಣವನ್ನು ಎಲ್ಲೆಲ್ಲಿ ಇಡಲಾಗಿದೆ ಎಂಬುದು ತಿಳಿದಿತ್ತು. ಇದಾದ ನಂತರ ದರೋಡೆಗೆ ಯೋಜನೆ ರೂಪಿಸಿದ್ದಾಗಿ ಮಗಳು ಹೇಳಿದ್ದಾಳೆ.

    ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಯ ಮಾದರಿ ಉತ್ತರ ಪ್ರಕಟ; ಆಕ್ಷೇಪಣೆ ಸಲ್ಲಿಕೆಗೆ ನಾಡಿದ್ದೇ ಕಡೇ ದಿನ

    ಪ್ರಕರಣದುದ್ದಕ್ಕೂ ಗಿಣಿಯನ್ನು ಉಲ್ಲೇಖಿಸಲಾಗಿದ್ದರೂ, ಸಾಕ್ಷ್ಯಾಧಾರ ಕಾಯಿದೆಯಲ್ಲಿ ಅಂತಹ ಅವಕಾಶವಿಲ್ಲದ ಕಾರಣ ಅದನ್ನು ಸಾಕ್ಷ್ಯದಲ್ಲಿ ಪ್ರಸ್ತುತಪಡಿಸಲಾಗಿಲ್ಲ. ಘಟನೆ ನಡೆದ ಆರು ತಿಂಗಳ ನಂತರ ಗಿಳಿ ಸಾವನ್ನಪ್ಪಿದೆ ಎಂದು ನಿವೇದಿತಾ ಹೇಳಿದ್ದಾರೆ. (ಏಜೆನ್ಸೀಸ್​)

    ಡಬಲ್​ ಇಂಜಿನ್​ ಸರ್ಕಾರ ಮತ್ತೆ ಅಧಿಕಾರಕ್ಕೆ ತರಲು ಕರ್ನಾಟಕ ಜನತೆಯಿಂದ ನಿರ್ಧಾರ: ಪ್ರಧಾನಿ ಮೋದಿ

    ಮನೆಯವರಿಂದ ಪ್ರೀತಿ ನಿರಾಕರಣೆ; 100 ಅಡಿ ಕಂದಕಕ್ಕೆ ಜಿಗಿದೂ ಬದುಕುಳಿದ ಪ್ರೇಮಿಗಳು!

    ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ… ರಾಹುಲ್​ ಗಾಂಧಿಗೆ ಒಂದು ಉಳಿದವರಿಗೆ ಇನ್ನೊಂದಿಲ್ಲ: ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts