ದುಬೈ: ಕಳೆದ ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೆಜ್ ಮುಷರಫ್ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಈ ಕುರಿತು ಅವರ ಕುಟುಂಬ ಮೂಲಗಳು ಟ್ವೀಟ್ ಮಾಡಿದ್ದು, ಮುಷರಫ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸದ್ಯ ಅವರು ತುರ್ತು ನಿಗಾ ಘಟಕದಲ್ಲಿ ಇಲ್ಲ, ಆದರೆ ಗಂಭೀರ ಸಮಸ್ಯೆ ಇರುವುದರಿಂದ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಅವರು ಗುಣಮುಖರಾಗುವುದು ಕಷ್ಟಸಾಧ್ಯ ಎಂದು ವೈದ್ಯರು ಹೇಳಿದ್ದಾರೆ ಎಂದು ಮುಷರಫ್ ಅಧಿಕೃತ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಅವರು ಅಮಿಲೋಯ್ಡೋಸಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು, ಇದು ದೇಹದ ಅಂಗಾಂಗಗಳಲ್ಲಿ ಅಸಹಜ ಪ್ರೋಟೀನ್ ರಚನೆಯಿಂದ ಉಂಟಾಗುವ ಅಪರೂಪದ ಗಂಭೀರ ಕಾಯಿಲೆ ಇದಾಗಿದ್ದು, ಇದು ಹೃದಯ, ಮೆದುಳು, ಮೂತ್ರಪಿಂಡಗಳು, ಮತ್ತು ದೇಹದ ಇತರೆ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಈ ಸಮಸ್ಯೆಯಿಂದ ಬಳಲುತ್ತಿರುವ ಮುಷರಫ್ ಆರೋಗ್ಯದಲ್ಲಿ ಮೂರು ವಾರಗಳಿಂದ ಚೇತರಿಕೆ ಕಾಣುತ್ತಿಲ್ಲ ಎಂದು ಹೇಳಲಾಗಿದೆ.
ದೇಶದ್ರೋಹ ಆರೋಪದ ಮೇಲೆ ಪಾಕಿಸ್ತಾನದ ತೊರೆದಿರುವ ಮುಷರಫ್ ದುಬೈಯಲ್ಲಿ ನೆಲೆಸಿದ್ದಾರೆ. ಅಲ್ಲದೇ 2018ರಲ್ಲಿ ಈ ಕಾಯಿಲೆ ಇರುವುದು ಪತ್ತೆಯಾಗಿತ್ತು. (ಏಜೆನ್ಸೀಸ್)
ನಯನತಾರಾ-ವಿಘ್ನೇಶ್ ಬಳಿಯಿರುವ ಆಸ್ತಿ ಇಷ್ಟೊಂದಾ? ಒಟ್ಟು ಮೌಲ್ಯ ಕೇಳಿದ್ರೆ ನೀವು ಬೆರಗಾಗೋದು ಖಂಡಿತ!