More

    ವೋಟರ್ ಐಡಿ ಪರಿಶೀಲನೆ, ಖಾಸಗಿ ವ್ಯಕ್ತಿ ನಡೆ ಮೇಲೆ ಅನುಮಾನ; ಕಾಂಗ್ರೆಸ್ ಮುಖಂಡರಿಂದ ತಗಾದೆ

    ವಿಜಯಪುರ: ರಾಜ್ಯಾದ್ಯಂತ ವೋಟರ್ ಐಡಿ ವಿವಾದ ಭುಗಿಲೆದ್ದಿರುವಾಗಲೇ ವಿಜಯಪುರದಲ್ಲಿ ವೋಟರ್ ಐಡಿ ಪರಿಷ್ಕರಣೆಗೆ ಬಂದಿದ್ದ ಖಾಸಗಿ ವ್ಯಕ್ತಿಯನ್ನು ಕಾಂಗ್ರೆಸ್ ಮುಖಂಡರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಇಲ್ಲಿನ ಕಾಂಗ್ರೆಸ್ ಕಚೇರಿ ಬಳಿ ವೋಟರ್ ಐಡಿ ಪರಿಷ್ಕರಣೆ ನಡೆಸುತ್ತಿದ್ದ ಮಂಜುನಾಥ ಪೂಜಾರ ಎಂಬಾತನನ್ನು ವಶಕ್ಕೆ ಪಡೆದ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಆತನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಮಂಜುನಾಥ ತಾನು ಯಾವುದೇ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳ ನಿಯೋಜಿತ ಅಭ್ಯರ್ಥಿ ಅಲ್ಲ. ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮತದಾರರ ಪಟ್ಟಿಯಿಂದ ಕೈ ಬಿಟ್ಟ ಹೆಸರುಗಳ ಮರು ಸೇರ್ಪಡೆಗೆ ಜಾಗೃತಿ ಮೂಡಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ, ಕೆಲವೊಮ್ಮೆ ಜಿಲ್ಲಾಡಳಿತವೇ ಕಳುಹಿಸಿದೆ ಎಂದು ತೊದಲುತ್ತಿದ್ದಾನೆ. ಹೀಗಾಗಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಪ್ ತಹಸೀಲ್ದಾರ್‌ಗೆ ಕರೆ ಮಾಡಿ ವಿಚಾರಿಸಿದರು. ಆಗ ಇಲಾಖೆಯಿಂದ ಕೇವಲ ಬಿಎಲ್‌ಒಗಳನ್ನು ನೇಮಿಸಲಾಗಿದೆ. ಅವರ ಜೊತೆಗೆ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಳುಹಿಸಿ ಪರಿಶೀಲಿಸಲು ಅವಕಾಶ ಇದೆ ಎಂದಿದ್ದಾರೆ.

    ಇದರಿಂದ ಆಕ್ರೋಶಗೊಂಡ ಅಬ್ದುಲ್‌ ಹಮೀದ್ ಮುಶ್ರೀಪ್, ಬಿಎಲ್‌ಒ ಜತೆ ಬಂದಿರುವುದಾಗಿ ಹೇಳುವ ಯುವಕ ಯಾವ ಪಕ್ಷದವನು? ಆತನಿಗೆ ಗುರುತಿನ ಚೀಟಿ ನೀಡಲಾಗಿದೆಯೇ? ಎಂದು ಪ್ರಶ್ನಿಸಿಲಾಗಿದೆ. ಪ್ರಕರಣದ ಬಗ್ಗೆ ವಿಚಾರಿಸುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. ವಿಜಯಪುರ ನಗರ ಕ್ಷೇತ್ರದಲ್ಲಿ ಈಗಾಗಲೇ ಅನೇಕ ಹೆಸರುಗಳನ್ನು ಡಿಲಿಟ್ ಮಾಡಲಾಗಿದೆ. ಐದು ಹೊಸದಾಗಿ ಹೆಸರು ಸೇರಿಸಿದರೆ ಐದು ಹಳೆಯ ಹೆಸರು ಡಿಲಿಟ್ ಮಾಡುತ್ತಿದ್ದಾನೆ. ಅಲ್ಲದೇ ಕೆಲವು ಹೆಸರುಗಳನ್ನು ನಾಗಠಾಣ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗುತ್ತಿದೆ ಎಂದು ಮುಶ್ರೀಪ್ ಫೋನ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts