More

    ರಾಮಸೇತು ಅಧ್ಯಯನಕ್ಕೆ ಸಮ್ಮತಿ; ನೀರಿನ ಆಳದಲ್ಲಿನ ಮಾದರಿ ಸಂಗ್ರಹಿಸಿ ವಿಶ್ಲೇಷಣೆ

    ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ದಿಬ್ಬಗಳ ಸರಣಿಯಾದ ‘ರಾಮಸೇತು’ ಹೇಗೆ ನಿರ್ಮಾಣಗೊಂಡಿತು? ಅದು ಎಷ್ಟು ಹಳೆಯದು? ಎಂಬುದನ್ನು ತಿಳಿಯುವ ಅಧ್ಯಯನ ಯೋಜನೆಗೆ ಈ ವರ್ಷ ಚಾಲನೆ ಸಿಗಲಿದೆ. ಇದು ರಾಮಾಯಣದ ಕಾಲವನ್ನು ನಿರ್ಧರಿಸಲು ನೆರವಾಗಬಹುದು ಎಂದು ಯೋಜನೆಯಲ್ಲಿ ಭಾಗವಹಿಸಲಿರುವ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

    ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್​ಐಆರ್) ಮತ್ತು ಗೋವಾದ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆ (ಎನ್​ಐಒ) ಸಂಶೋಧನೆಗಾಗಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಭಾರತೀಯ ಪುರಾತತ್ವಶಾಸ್ತ್ರ ಸಂಸ್ಥೆಯ (ಎಎಸ್​ಐ) ಕೇಂದ್ರೀಯ ಪುರಾತತ್ವ ಸಲಹಾ ಮಂಡಳಿ ಅಂಗೀಕರಿಸಿದೆ.

    ಹವಳ ಅಥವಾ ಪ್ಯೂಮಿಸ್ ಕಲ್ಲುಗಳನ್ನು ಒಳಗೊಂಡಿದೆ ಯೆನ್ನಲಾದ ರಾಮಸೇತು ಸಂರಚನೆಯ ಕಾಲವನ್ನು ನಿರ್ಧರಿಸಲು ರೇಡಿಯೊಮೆಟ್ರಿಕ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಹವಳಗಳಲ್ಲಿ ಕ್ಯಾಲ್ಷಿಯಂ ಕಾಬೋನೇಟ್ ಇದ್ದು, ಸಂರಚನೆಯ ವಯಸ್ಸು ಹಾಗೂ ರಾಮಾಯಣದ ಕಾಲವನ್ನು ತಿಳಿಯಲು ನೆರವಾಗುತ್ತದೆ. ರೇಡಿಯೊಮೆಟ್ರಿಕ್ ಡೇಟಿಂಗ್ ಒಂದು ವಸ್ತುವಿನ ವಯಸ್ಸನ್ನು ತಿಳಿಯಲು ನೆರವಾಗುತ್ತದೆ. ಒಂದು ವಸ್ತುವನ್ನು ಬಿಸಿ ಮಾಡಿದಾಗ ಸೂಸುವ ಬೆಳಕನ್ನು ಟಿಎಲ್ ಡೇಟಿಂಗ್ ವಿಶ್ಲೇಷಿಸುತ್ತದೆ.

    • ಸೀತೆಯನ್ನು ರಾವಣನಿಂದ ರಕ್ಷಿಸಿ, ಕರೆತರಲು ಲಂಕೆಗೆ ತೆರಳುವ ಉದ್ದೇಶದಿಂದ ಕಪಿ ಸೇನೆಯು ಸಮುದ್ರಕ್ಕೆ ಸೇತುವೆ ನಿರ್ವಿುಸಿತ್ತು ಎಂದು ರಾಮಾ ಯಣದಲ್ಲಿ ಉಲ್ಲೇಖವಿದೆ.
    • ಜಲಮಟ್ಟದಿಂದ 35ರಿಂದ 40 ಕಿಲೋ ಮೀಟರ್ ಆಳದವರೆಗಿನ ಮಣ್ಣಿನ ಮಾದರಿಯನ್ನು ಸಂಗ್ರಹಿಸುವ ಸಾಮರ್ಥ್ಯ ಈ ನೌಕೆಗಳಿಗಿದೆ.
    • ಈ ಯೋಜನೆಯಲ್ಲಿ ಎನ್​ಐಒ ತನ್ನ ಸಂಶೋಧನಾ ನೌಕೆಗಳಾದ ‘ಸಿಂಧು ಸಾಧನಾ’ ಮತ್ತು ‘ಸಿಂಧು ಸಂಕಲ್ಪ’ ಬಳಸಲಿದೆ.

    ಪುರಾತತ್ತ್ವ ವಸ್ತುಗಳು, ರೇಡಿಯೋಮೆಟ್ರಿಕ್ ಮತ್ತು ಜೈವಿಕ ಕಾಲ ನಿರ್ಧಾರಕ್ಕೆ ಥಮೋಲುಮಿನಿಸೆನ್ಸ್ (ಟಿಎಲ್) ಮತ್ತು ಇತರ ದತ್ತಾಂಶಗಳ ಪ್ರಸ್ತಾಪಿತ ಅಧ್ಯಯನ ನಡೆಯಲಿದೆ.

    | ಪ್ರೊ. ಸುನಿಲ್ ಕುಮಾರ್ ಸಿಂಗ್ ಎನ್​ಐಒ ನಿರ್ದೇಶಕ

    ಕೆಲಸ ಕಳೆದುಕೊಂಡ ಅಪ್ಪನಿಗಾಗಿ ಆಟೋ ಡ್ರೈವರ್​ ಆದ ಮಗಳು!

    ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts