ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!

ಬೆಂಗಳೂರು: ಗಂಡನನ್ನು ಬಿಟ್ಟಿರಲು ಆಗದ ಯುವತಿಯೊಬ್ಬಳು, ನ್ಯಾಯಾಲಯ ಕಟ್ಟಡದ ಮಹಡಿಯಿಂದ ಕೆಳಕ್ಕೆ ಹಾರಿ, ಸ್ಥಳದಲ್ಲಿದ್ದವರಲ್ಲಿ ಅನೇಕರು ಒಮ್ಮೆ ಹೌಹಾರುವಂತೆ ಮಾಡಿದ್ದಾಳೆ. ಆಕೆ ಕೆಳಕ್ಕೆ ಜಿಗಿದು ಗಂಭೀರ ಗಾಯಗೊಂಡಿದ್ದರೂ ತಕ್ಷಣವೇ ಅವಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರಿಂದ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಷ್ಟಕ್ಕೂ ಈ ಇಬ್ಬರೂ ಪ್ರೀತಿಸುತ್ತಿದ್ದು, ಅಂತರ್ಜಾತಿಯವರಾಗಿದ್ದರಿಂದ ಮದುವೆಗೆ ಯುವತಿಯ ಮನೆಯವರ ವಿರೋಧವಿತ್ತು. ಹೀಗಾಗಿ ಓಡಿ ಹೋಗಿ ಮದುವೆ ಆಗಿದ್ದಲ್ಲದೆ, ಮನೆಯರಿಗೆ ಸಿಗದೆ ತಲೆಮರೆಸಿಕೊಂಡಿದ್ದರು. ಅತ್ತ ಪ್ರೀತಿಯ ಗಂಡನನ್ನು ಬಿಟ್ಟಿರಲಾಗದೆ, ಇತ್ತ ಮನೆಯರಿಂದಲೂ ದೂರವಿರಲಾಗದೆ ಗೊಂದಲಕ್ಕೆ ಸಿಕ್ಕಿದ ಯುವತಿ … Continue reading ಗಂಡನನ್ನು ಬಿಟ್ಟಿರಲಾಗದೆ ಕೋರ್ಟ್ ಮಹಡಿಯಿಂದ ಕೆಳಕ್ಕೆ ಹಾರಿದಳು!