More

    ಜೈಲುಬಂಧಿಗಳ ಸಂದರ್ಶನ ಮತ್ತೆ ಶುರು; ಕಾರಾಗೃಹ ಇಲಾಖೆಯಿಂದ ಅನುಮತಿ..

    ಬೆಂಗಳೂರು: ಕರೊನಾ ಸೋಂಕಿನ ಭೀತಿಯಿಂದ ರಾಜ್ಯದ ಜೈಲುಗಳಲ್ಲಿ 2 ವರ್ಷಗಳಿಂದ ನಿಲ್ಲಿಸಿದ್ದ ಕೈದಿಗಳ ನೇರ ಸಂದರ್ಶನವನ್ನು ಮಾರ್ಚ್ 21ರಿಂದ ಮತ್ತೆ ಆರಂಭಿಸಲು ಕಾರಾಗೃಹ ಇಲಾಖೆ ತಿಳಿಸಿದೆ.

    2019ರಲ್ಲಿ ಎಲ್ಲೆಡೆ ಕರೊನಾ ಸೋಂಕು ವ್ಯಾಪಿಸಿ ಮನುಕುಲವನ್ನೇ ತಲ್ಲಣಗೊಳಿಸಿತ್ತು. ಪರಿಣಾಮ ಕಾರಾಗೃಹಗಳಲ್ಲಿ ಕೈದಿಗಳನ್ನು ಆಪ್ತರು ನೇರ ಸಂದರ್ಶನ ಮಾಡುವುದನ್ನು ನಿಲ್ಲಿಸಲಾಗಿತ್ತು. ಇದೀಗ ಸೋಂಕು ಇಳಿಮುಖವಾದ ಕಾರಣ ಮತ್ತೆ ಶುರು ಮಾಡಲು ಇಲಾಖೆ ಗ್ರೀನ್ ಸಿಗ್ನಲ್ ತೋರಿದೆ.

    ಇದನ್ನೂ ಓದಿ: ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!

    ಬಂಧಿಗಳ ಸಂದರ್ಶನಕ್ಕೆ ಬರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು, ವಕೀಲರು ಮೊದಲೇ ಸಂಬಂಧಪಟ್ಟ ಜೈಲು ಅಧಿಕಾರಿಗಳ ಇ-ಮೇಲ್, ವಾಟ್ಸ್‌ಆ್ಯಪ್, ದೂರವಾಣಿ ಮುಖಾಂತರ ಸಂಪರ್ಕಿಸಿ ವಿವರಗಳೊಂದಿಗೆ ಸಂದರ್ಶನಕ್ಕೆ ನೋಂದಾಯಿಸಿಕೊಳ್ಳಬೇಕು. ಕಾರಾಗೃಹದ ಅಧಿಕಾರಿಗಳು ನಿಗದಿಪಡಿಸಿರುವ ದಿನ ಮತ್ತು ಸಮಯಕ್ಕೆ ಸಂದರ್ಶನಕ್ಕೆ ತೆರಳಬೇಕು. ಈ ವೇಳೆ ಯಾವುದೇ ರೀತಿಯ ಕೋವಿಡ್ ರೋಗ ಲಕ್ಷಣಗಳು ಇರಬಾರದು.

    ಇದನ್ನೂ ಓದಿ: ರಾಜ್ಯದಲ್ಲಿ ಇಂದು ಮತ್ತೊಂದು ಬಸ್​ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ…

    ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆಗಳನ್ನು ಪಡೆದಿರಬೇಕು. ಇದರ ಲಸಿಕಾ ಪ್ರಮಾಣ ಪತ್ರವನ್ನು ಹಾಜರುಪಡಿಸಿ ಸಂದರ್ಶನದ ವೇಳೆ ಕೋವಿಡ್ ಮಾರ್ಗಸೂಚಿ ಮಾರ್ಗಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕಾರಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಸೇತುವೆಯಿಂದ ಕೆಳಕ್ಕೆ ಬಿದ್ದ ಬಸ್​; ಇಬ್ಬರ ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts