More

    ದೇಶದ್ರೋಹಿ ಘೋಷಣೆ ಕೂಗಿದ್ದ ಕನ್ಹಯ್ಯ ಕುಮಾರ್​ ವಿರುದ್ಧ ಕ್ರಮ ಜರುಗಿಸಲು ಪೊಲೀಸರ ಮನವಿಗೆ ಅಸ್ತು ಎಂದ ದೆಹಲಿ ಸರ್ಕಾರ

    ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಕನ್ಹಯ್ಯ ಕುಮಾರ್ 2016ರ ಫೆಬ್ರವರಿಯಲ್ಲಿ ನಡೆದ ಕ್ಯಾಂಪಸ್ ಕಾರ್ಯಕ್ರಮದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿ, ಮೆರವಣಿಗೆ ಮುನ್ನಡೆಸಿದ್ದರ ವಿರುದ್ಧ ಕಾನೂನು ಕ್ರಮ ಜರುಗಿಸಲು ದೆಹಲಿ ಸರ್ಕಾರ ಅನುಮತಿ ನೀಡಿದೆ.

    ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆಗೆ ಅನುಮತಿ ಕೋರಿ ದೆಹಲಿ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರಕ್ಕೆ ಪತ್ರ ಬರೆದಿದ್ದರು, ಇದಕ್ಕೆ ಸಿಎಂ ಅನುಮತಿ ನೀಡಿದ್ದಾರೆ.

    ಫೆಬ್ರವರಿ 9 ರಂದು ನಡೆದ ಕಾರ್ಯಕ್ರಮದಲ್ಲಿ ಕನ್ಹಯ್ಯ ಕುಮಾರ್​ ಮೆರವಣಿಗೆ ಮುನ್ನಡೆಸಿದ್ದರು. ಕ್ಯಾಂಪಸ್‌ನಲ್ಲಿ ಕೂಗಿದ್ದ ದೇಶದ್ರೋಹಿ ಘೋಷಣೆಗಳಿಗೆ ಬೆಂಬಲಿಸಿದ ಆರೋಪಿವಿತ್ತು

    ಈ ಹಿನ್ನೆಲೆಯಲ್ಲಿ ಕನ್ಹಯ್ಯ ಕುಮಾರ್ ಮತ್ತು ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಸೇರಿ ಇತರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.

    ಪ್ರಕರಣ ಕೈಗೆತ್ತಿಕೊಂಡ ಕೋರ್ಟ್​ ಕಾನೂನು ಕ್ರಮ ಜರುಗಿಸಲು ಅಗತ್ಯವಾದ ಅನುಮತಿಯನ್ನು ಸರ್ಕಾರದಿಂದ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದೆಹಲಿ ಸಿಎಂಗೆ ಪತ್ರ ಬರೆದಿದ್ದರು. (ಏಜೇನ್ಸಿಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts