More

    ಶೇ. 92ರಷ್ಟು ಪಠ್ಯಪುಸ್ತಕ ವಿತರಣೆ

    ಮಾಂಜರಿ: ಕೋವಿಡ್-19 ಸೋಂಕು ಹಿನ್ನೆಲ್ಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನಲ್ಲಿ ತರಗತಿಗಳು ಆರಂಭವಾಗಿಲ್ಲ, ಆದರೂ, ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮ ಜಾರಿ ಮೂಲಕ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ. 92.43ರಷ್ಟು ಉಚಿತ ಪಠ್ಯಪುಸ್ತಕ ಸರಬರಾಜು ಮಾಡಿ ಕಲಿಕೆಗೆ ಪ್ರೇರಣೆ ನೀಡಲು ಆರಂಭಿಸಿದೆ.

    ಶಿಕ್ಷಣ ಇಲಾಖೆ ಪ್ರತಿ ವರ್ಷ ಮೇ 30ರಂದು ಶಾಲಾ ಪ್ರಾರಂಭೋತ್ಸವ ಮಾಡಿಕೊಂಡು ಬರುತ್ತಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಕರೊನಾ ಮಹಾಮಾರಿ ಕಾರಣದಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಆದರೂ, ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂಬುದನ್ನು ಅರಿತ ಶಿಕ್ಷಣ ಇಲಾಖೆಯು ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಿ ಒಂದನೇ ತರಗತಿಯಿಂದ ಹತ್ತನೇ ತರಗತಿ ಮಕ್ಕಳಿಗೆ ಉಚಿತ ಮಠ್ಯಪುಸ್ತಕ ಸರಬರಾಜು ಮಾಡುತ್ತಿದೆ.

    ಕರೊನಾ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಮಕ್ಕಳನ್ನು ಶಾಲೆಗೆ ಸೇರಿಸಬಾರದೆಂದು ಶಿಕ್ಷಣ ಇಲಾಖೆಯು ಆಯಾ ಶಾಲಾ ಮಟ್ಟದಲ್ಲಿ ಇರುವ ವಠಾರ, ದೇವಸ್ಥಾನ ಮತ್ತು ಸಮುದಾಯ ಭವನಗಳಲ್ಲಿ ಅಲ್ಪಸ್ವಲ್ಪ ಮಕ್ಕಳನ್ನು ಸೇರಿಸಿ ಶಿಕ್ಷಕರು ಪಠ್ಯಪುಸ್ತಕ ವಿತರಣೆ ಮಾಡುತ್ತಿದ್ದು, ಪಠ್ಯಪುಸ್ತಕ ಸಹಾಯದಿಂದ ಶಿಕ್ಷಕರು ಅಲ್ಲಲ್ಲಿ ಮಕ್ಕಳಿಗೆ ಪಾಠ ಬೋಧನೆ ಆರಂಭಿಸಿದ್ದಾರೆ.

    ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ, ರಾಯಬಾಗ, ಕಾಗವಾಡ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಗೋಕಾಕ, ಮೂಡಲಗಿ ಎಂಟು ವಲಯಗಳಲ್ಲಿ ಈಗಾಗಲೇ ಶೇ. 92.43ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡಿದೆ. ಪ್ರಸಕ್ತ ವರ್ಷದಲ್ಲಿ 37,26,696 ಪಠ್ಯಪುಸ್ತಕಗಳ ಬೇಡಿಕೆಯಲ್ಲಿ 36,32,180 ಪಠ್ಯಪುಸ್ತಕಗಳು ಪೂರೈಕೆಯಾಗಿದೆ. ಇದರಲ್ಲಿ ಶಿಕ್ಷಣ ಇಲಾಖೆಯು 35,43,669 ಪಠ್ಯಪುಸ್ತಕಗಳನ್ನು ವಿತರಣೆ ಮಾಡಿದೆ. ಸರ್ಕಾರದಿಂದ ಇನ್ನೂ 94,516 ಪಠ್ಯಪುಸ್ತಕ ಗಳು ಪೂರೈಕೆಯಾಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಲಯವಾರು ಪಠ್ಯಪುಸ್ತಕ ಪೂರೈಕೆ: ಅಥಣಿ ವಲಯ- 5,66,236 ಬೇಡಿಕೆಯಲ್ಲಿ 5,39,636 ಪಠ್ಯಪುಸ್ತಕಗಳು ಪೂರೈಕೆಯಾಗಿದೆ. 5,39,636 ವಿತರಣೆಯಾಗಿದೆ. 26,600 ಪುಸ್ತಕಗಳ ಕೊರತೆಯಾಗಿವೆ. ಚಿಕ್ಕೋಡಿ ವಲಯ-4,71,433 ಬೇಡಿಕೆಯಲ್ಲಿ 4,56,190 ಪೂರೈಕೆಯಾಗಿದೆ. 390800 ಪುಸ್ತಕಗಳು ವಿತರಣೆಯಾಗಿದೆ. 15,243 ಪಠ್ಯಪುಸ್ತಕ ಕೊರತೆಯಾಗಿದೆ. ಕಾಗವಾಡ ವಲಯ-1,83,524 ಬೇಡಿಕೆಯಲ್ಲಿ 1,75,000 ಪೂರೈಕೆಯಾಗಿ ವಿತರಣೆಯಾಗಿದೆ. 8524 ಪಠ್ಯಪುಸ್ತಕ ಕೊರತೆಯಾಗಿದೆ. ಗೋಕಾಕ ವಲಯ-3,93,767 ಬೇಡಿಕೆಯಲ್ಲಿ 3,76,850 ಪೂರೈಕೆಯಾಗಿದೆ. ಇದರಲ್ಲಿ 3,71,182 ಪುಸ್ತಕ ವಿತರಣೆ ಮಾಡಲಾಗಿದೆ.

    16,917 ಪಠ್ಯಪುಸ್ತಕ ಕೊರತೆ ಇದೆ. ರಾಯಬಾಗ ವಲಯ-5,61,203 ಬೇಡಿಕೆಯಲ್ಲಿ 5,51,330 ಪೂರೈಕೆಯಾಗಿದೆ. 5,51,330 ವಿತರಣೆ ಮಾಡಿದ್ದು, 9,873 ಕೊರತೆ ಇದೆ. ಹುಕ್ಕೇರಿ ವಲಯ- 6,05,988 ಬೇಡಿಕೆಯಲ್ಲಿ 6,02,135 ಪಠ್ಯಪುಸ್ತಕ ಪೂರೈಕೆಯಾಗಿ ವಿತರಣೆಯಾಗಿದೆ. 3853 ಕೊರತೆ ಇದೆ. ಮೂಡಲಗಿ ವಲಯ- 6,39,118 ಬೇಡಿಕೆಯಲ್ಲಿ 6,29,132 ಪೂರೈಕೆಯಾಗಿ ವಿತರಣೆಯಾಗಿದೆ. 9,986 ಪಠ್ಯಪುಸ್ತಕ ಕೊರತೆಯಾಗಿದೆ. ನಿಪ್ಪಾಣಿ ವಲಯ-3,05,427 ಬೇಡಿಕೆಯಲ್ಲಿ 3,01,907 ಪಠ್ಯಪುಸ್ತಕ ಪೂರೈಕೆಯಾಗಿ ವಿತರಣೆಯಾಗಿದೆ. 3520 ಪಠ್ಯಪುಸ್ತಕ ಕೊರತೆ ಇದೆ. ಸರ್ಕಾರಕ್ಕೆ ಸಲ್ಲಿಸಿದ ಪಠ್ಯಪುಸ್ತಕ ಬೇಡಿಕೆ ಅನುಗುಣವಾಗಿ ಪೂರೈಕೆಯಾಗಿ ವಿತರಣೆಯಾಗಿದೆ. ಉಳಿದ ಪಠ್ಯಪುಸ್ತಕಗಳನ್ನು ಸಹ ಶೀಘ್ರವಾಗಿ ಆಯಾ ಶಾಲೆಗಳಿಗೆ ವಿತರಿಸುವ ಕಾರ್ಯ ಮಾಡಲಾವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕೋವಿಡ್-19ರ ಹಿನ್ನೆಲ್ಲೆಯಲ್ಲಿ ಶಾಲೆಗಳು ಆರಂಭವಾಗದಿದ್ದರೂ ಸರ್ಕಾರದ ಮಾರ್ಗಸೂಚಿ ಅನ್ವಯ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಪಠ್ಯಪುಸ್ತಕ ಪೂರೈಕೆ ಮಾಡಲಾಗಿದೆ. ಸರ್ಕಾರದ ವಿದ್ಯಾಗಮ ಕಾರ್ಯಕ್ರಮದ ಮೂಲಕ ಶಾಲಾ ಮಟ್ಟದಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡುತ್ತಿದ್ದಾರೆ.
    ಗಜಾನನ ಮನ್ನಿಕೇರಿ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts