More

    ನೋಟ್​ ಬ್ಯಾನ್​ ಆದಾಗಿನ ಸ್ಥಿತಿ, ಇದೀಗ ಟಿಕ್​ಟಾಕರ್ಸ್​ಗೆ ಬಂದಿದೆ; ನಟಿ, ಸಂಸದೆ ನುಸ್ರತ್​

    ನೋಟ್ ಬ್ಯಾನ್​ ಆದಾಗ ಜನ ಹೇಗೆ ಪರಿತಪಿಸಿದ್ದರೋ, ಅದೇ ಪರಿಸ್ಥಿತಿ ಟಿಕ್​ಟಾಕ್​ ಮಾಡುವವರದ್ದಾಗಿದೆ ಎಂದು ನಟಿ ಮತ್ತು ತೃಣಮೂಲ ಕಾಂಗ್ರೆಸ್​ನ ಸಂಸದೆ ನುಸ್ರತ್ ಜಹಾನ್​ ಹೇಳಿದ್ದಾರೆ. ಕೇಂದ್ರ ಸರ್ಕಾರ ಚೀನಿಸ್ ಆ್ಯಪ್​ ಮಾಡಿದ್ದರ ಪರವಾಗಿರುವ ನುಸ್ರತ್​, ಆದರೂ ಒಂದಷ್ಟು ಜನ ಅದರಿಂದಲೇ ಸಂಪಾದನೆ ಕಂಡುಕೊಂಡಿದ್ದರು. ಇದೀಗ ಅದು ಅವರ ಕೈ ತಪ್ಪಿದೆ ಎಂದಿದ್ದಾರೆ.

    ಇದನ್ನೂ ಓದಿ: ಟಿಕ್​ಟಾಕ್​ ಬ್ಯಾನ್​ ಆದ್ರೇನಂತೆ HiPi ಇದೆಯಲ್ಲ!

    ಸೋಮವಾರವಷ್ಟೇ ಚೀನಾದ 59 ಆ್ಯಪ್​ಗಳನ್ನು ಬ್ಯಾನ್​ ಮಾಡಿ ಆದೇಶ ಹೊರಡಿಸಿತ್ತು. ಕೇಂದ್ರದ ಈ ನಿರ್ಧಾರವನ್ನು ಬಹುತೇಕರೆಲ್ಲರೂ ಸ್ವಾಗತಿಸಿದ್ದರು. ಅದೇ ರೀತಿ ನುಸ್ರತ್​ ಸಹ ಈ ನಡೆಯನ್ನು ಸ್ವಾಗತಿಸಿದ್ದಾರೆ. ‘ಟಿಕ್​ಟಾಕ್​ ಕೇವಲ ಮನರಂಜನಾ ಉದ್ದೇಶದಿಂದ ಅಭಿವೃದ್ಧಿಪಡಿಸಿದ ಆ್ಯಪ್​. ಇದರ ನಿಷೇಧದಿಂದ ಜನ ನಿರೂದ್ಯೋಗಿಗಳಾಗುತ್ತಾರಾ? ನೋಟ್​ ಬ್ಯಾನ್​ ಆದಾಗ ಅನುಭವಿಸಿದ್ದನ್ನೇ ಈಗ ಮತ್ತೆ ಅನುಭವಿಸುತ್ತಾರೆ. ಇದರಿಂದ ಹೆಚ್ಚೇನೂ ಆಗದು. ರಾಷ್ಟ್ರದ ಹಿತದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದು ಎಂದಿದ್ದಾರೆ.

    ಇದನ್ನೂ ಓದಿ: ನನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಿ, ನನ್ನ ಆತ್ಮೀಯರಲ್ಲಿ ಹಾರ್ಟ್​ ಪೇಷೆಂಟ್ಸ್​ ಇದ್ದಾರೆ: ಎಸ್​.ಜಾನಕಿ

    ಇದಷ್ಟೇ ಅಲ್ಲ ಕೇವಲ ಆ್ಯಪ್​ ಬ್ಯಾನ್​ ಜತೆಗೆ ಚೀನಾ ಕಂಪನಿಗಳು ಹೂಡಿಕೆ ಮಾಡಿದ ಕಂಪನಿಗಳು, ಅದರ ಶೇರುಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಒಂದಷ್ಟು ಮಂದಿ ಟಿಕ್​ಟಾಕ್​ ಅನ್ನೇ ಬಂಡವಾಳ ಮಾಡಿಕೊಂಡು ಆದಾಯ ಗಳಿಸುತ್ತಿದ್ದರು. ಇದೀಗ ಅವರ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಈ ರೀತಿ ಉತ್ತರಿಸಲಾಗದ ಪ್ರಶ್ನೆಗಳು ಸಾಕಷ್ಟಿವೆ ಎಂದಿದ್ದಾರೆ ನುಸ್ರತ್​. ಅಂದಹಾಗೆ, ನಟಿ, ಸಂಸದೆ ನುಸ್ರತ್​ ಸಹ ಟಿಕ್​ಟಾಕ್​ನಲ್ಲಿದ್ದರು. ಸಾಕಷ್ಟು ವಿಡಿಯೋ ಮಾಡಿ, ಅಪಾರ ಪ್ರಮಾಣದ ಫಾಲೋವರ್ಸ್​ ಹೊಂದಿದ್ದರು. 

    ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts