More

    ಕಂಬದ ಮೇಲೆ ಸರ್ಕಸ್ ನಡಿಗೆ

    ರಮೇಶ ಹಾರ್ಸಿಮನೆ ಸಿದ್ದಾಪುರ

    ಎಂಟು ವರ್ಷಗಳ ಹಿಂದೆಯೇ ಆರಂಭಗೊಂಡ ಕಾಲುಸಂಕ ನಿರ್ಮಾಣ ಕಾಮಗಾರಿ ಇಂದಿಗೂ ಪೂರ್ಣಗೊಳ್ಳದ ಕಾರಣ ಜನತೆ ನಿತ್ಯ ಸಂಕಟಪಡುವಂತಾಗಿದೆ.

    ತಾಲೂಕಿನ ಹಾರ್ಸಿಕಟ್ಟಾ ಗ್ರಾ.ಪಂ. ವ್ಯಾಪ್ತಿಯ ಸಂಪಗೋಡ-ಭಂಡಾರಿಕೇರಿ ಗ್ರಾಮದ ಸಂಪರ್ಕ ಕೊಂಡಿಯಾಗಿರುವ ಹೊಸಗದ್ದೆ ಊರಿನ ಹಳ್ಳಕ್ಕೆ 2012-13ನೇ ಸಾಲಿನಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಯೋಜನೆಯಡಿ ಕಾಲು ಸಂಕ ನಿರ್ವಣಕ್ಕೆ 5 ಲಕ್ಷ ರೂ. ಬಿಡುಗಡೆಗೊಂಡಿದೆ. ಆದರೆ, ಈ ಹಣದಿಂದ ಹಳ್ಳದಲ್ಲಿ ಕೇವಲ 4 ಸಿಮೆಂಟ್ ಕಂಬಗಳನ್ನು ಮಾತ್ರ ನಿರ್ವಿುಸಲಾಗಿದೆ. ಕಂಬದ ಮೇಲೆ ಸ್ಲಾ್ಯಬ್ ಕಾಮಗಾರಿ ಮಾಡದೇ ಇರುವುದರಿಂದ ಪ್ರಯೋಜನಕ್ಕೆ ಬಾರದಂತಾಗಿದೆ. ಹೀಗಾಗಿ ನಿತ್ಯ ಜನತೆ ಓಡಾಡುವುದಕ್ಕೆ ಸರ್ಕಸ್ ಮಾಡಬೇಕಾದ ದುಸ್ಥಿತಿ ಬಂದೊದಗಿದೆ.

    ಮಾಗಣಿ, ಹೊಸಗದ್ದೆ, ಹೂಕಾರ, ಅರಶಿನಗೋಡ, ಬಾಳೇಜಡ್ಡಿ, ಅಶೀಮನೆ, ಕಂಚೀಮನೆ ಮತ್ತಿತರ ಗ್ರಾಮೀಣ ಪ್ರದೇಶದ ಒಳಹಳ್ಳಿಯ ನೂರಾರು ಮನೆಗಳಿಗೆ ತೆರಳಲು ಸಂಪರ್ಕ ಕೊಂಡಿಯಾಗಿರುವ ಹೊಸಗದ್ದೆ ಹಳ್ಳ ಪ್ರತಿವರ್ಷ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಹಳ್ಳ ದಾಟಲು ಸುತ್ತಲಿನ ಊರಿನವರೇ ಮರದ ಸಂಕವನ್ನು ಹಾಕಿಕೊಳ್ಳುತ್ತಿದ್ದರು. ಹಳ್ಳದಲ್ಲಿ ನಿರ್ವಿುಸಲಾದ 4 ಸಿಮೆಂಟ್ ಕಂಬಗಳ ಮೇಲೆ ಮರದ ಎಳೆಗಳನ್ನು ಹಾಕಿಕೊಂಡು ಓಡಾಡುತ್ತಿದ್ದಾರೆ.

    ಭಯದಲ್ಲೇ ಸಂಚಾರ: ಜನರು ನಿರ್ವಿುಸಿಕೊಂಡಿರುವ ಮರದ ಕಂಬಗಳ ಸಂಕ ಬಲಿ ಪಡೆಯಲು ಕಾಯುತ್ತಿದೆ. ಇದರ ಮೇಲೆ ಓಡಾಡುವ ಜನತೆ ತುಸು ಮೈಮರೆತರೂ ಹಳ್ಳಕ್ಕೆ ಬೀಳುವುದು ನಿಶ್ಚಿತ. ಮಕ್ಕಳು, ಮೃದ್ಧರು, ಮಹಿಳೆಯರು ಆತಂಕದಲ್ಲೇ ಓಡಾಡಬೇಕಾಗಿದೆ. ಜಿ.ಪಂ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಮುಂದಾಗದೇ ಇರವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

    ನಿತ್ಯ ಹೊಲ, ಗದ್ದೆಗಳಿಗೆ ತೆರಳುವ ರೈತರು, ಕೂಲಿಕಾರರು, ಶಾಲೆ-ಕಾಲೇಜ್ ಮಕ್ಕಳಿಗೆ ಇದೇ ಹಳ್ಳದ ಕಾಲು ಸಂಕ ಆಧಾರವಾಗಿದೆ. ಬಹುವರ್ಷಗಳ ನಂತರ ಕಾಲು ಸಂಕ ನಿರ್ವಣವಾಗುತ್ತಿದೆ ಎಂದು ಸಂತಸಪಟ್ಟಿದ್ದೇವು. ಆದರೆ, ಹಳ್ಳದಲ್ಲಿ 4 ಕಂಬ ಮಾತ್ರ ತಲೆ ಎತ್ತಿ ನಿಂತಿದ್ದು, ಇದಕ್ಕೆ ಊರಿನವರೇ ಮರದ ಸಂಕ ಹಾಕಿಕೊಳ್ಳುತ್ತಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು.

    | ಪಿ.ವಿ. ಹೆಗಡೆ ಹೊಸಗದ್ದೆ, ಅನಂತ ಹೆಗಡೆ ಹೊಸಗದ್ದೆ, ಗ್ರಾಮಸ್ಥರು

    ಹೊಸಗದ್ದೆ ಹಳ್ಳದ ಕಾಲು ಸಂಕ ನಿರ್ವಣಕ್ಕೆ ಮಲೆನಾಡು ಅಭಿವೃದ್ಧಿ ಯೋಜನೆಯಡಿ ಐದು ಲಕ್ಷ ರೂ. ಮಂಜೂರಾಗಿದೆ. ಕಾಲು ಸಂಕದ ಎರಡೂ ಕಡೆ ಬರಾವ್ ಮಾಡಿ ಪಿಚ್ಚಿಂಗ್ ಕಟ್ಟುವುದು, ಸ್ಲಾ್ಯಬ್ ಹಾಕುವುದು ಹಾಗೂ ಸೇತುವೆಯ ಎರಡೂ ಕಡೆ ಸರಳನ್ನು ಹಾಕುವ ಕಾಮಗಾರಿ ನಡೆಯಲಿದೆ. ಮಳೆಗಾಲ ಮುಗಿದ ನಂತರ ಕಾಮಗಾರಿ ಆರಂಭಗೊಳ್ಳಲಿದೆ.

    | ಎಂ.ಜಿ. ಹೆಗಡೆ ಗೆಜ್ಜೆ ಕಿಬ್ಬಳ್ಳಿ, ಜಿ.ಪಂ. ಸದಸ್ಯ, ಅಣಲೇಬೈಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts