More

    ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ

    ಕೂಡ್ಲಿಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಜನತಾದರ್ಶನ ಕಾರ್ಯಕ್ರಮ ನಡೆಯಿತು.

    ಇದನ್ನೂ ಓದಿ: ಸಮಸ್ಯೆಗಳಿಗೆ ಸಮಯೋಚಿತವಾಗಿ ಸ್ಪಂದಿಸಿ

    ಆರಂಭದಲ್ಲಿ ರೈತರಾದ ಗೋವಿಂದ ಗಿರಿ ಗೊಲ್ಲರ ಹಟ್ಟಿ ತಿಪ್ಪೇಸ್ವಾಮಿ ಹಾಗೂ ಕಾಲ್ಚೆಟ್ಟಿ ಈಶಪ್ಪ ಮಾತನಾಡಿ, ಉಪ ನೋಂದಣಿ ಕಚೇರಿಯಲ್ಲಿ ತುಂಡು ಭೂಮಿಗಳನ್ನು ನೋಂದಣಿ ಮಾಡುತ್ತಿಲ್ಲ ಈಗಾದರೆ ಬಡವರ ಗತಿ ಹೇಗೆ ಎಂದು ಡಿಸಿಯನ್ನು ಪ್ರಶ್ನಿಸಿದರು.

    ಇದಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಪ್ರತಿಕ್ರಿಯಿಸಿ, 12 ಸೆಂಟ್ಸ್ ಮೇಲಿರುವ ತುಂಡು ಭೂಮಿಗಳನ್ನು ನೋಂದಣಿ ಮಾಡಿಸಲು ಸರ್ಕಾರದ ಆದೇಶವಿದ್ದು ಕೂಡಲೇ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಉಪ ನೋಂದಣಿ ಅಧಿಕಾರಿಗೆ ಸೂಚನೆ ನೀಡಿದರು.

    ಬ್ಯಾಂಕಿನಲ್ಲಿ ಬೆಳೆಸಾಲ ಪಡೆದಿದ್ದು, ಇನ್ನೂ ಅರ್ಧ ಸಾಲ ತೀರಿಸಬೇಕಿದೆ. ಆದರೆ ಸರ್ಕಾರದ ಮಾಶಸನ, ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕಿನವರು ಸಾಲಕ್ಕೆ ಮುರವಳಿ ಮಾಡುತ್ತಿದ್ದಾರೆ.

    ಬರ ಪರಿಸ್ಥಿತಿಯಲ್ಲಿ ಹೀಗಾದರೆ ಬಡ ರೈತರ ಜೀವನ ಸಾಗಿಸುವುದು ಕಷ್ಟ ಎಂದು ಚಂದ್ರಶೇಖರ ಪುರದ ರೈತರಾದ ಸುಭಾಷಿಣಿ ಹಾಗೂ ಕಟ್ಟೆಬಸಪ್ಪ ಮನವಿ ಮಾಡಿದರು. ಬರ ಹಿನ್ನೆಲೆ ರೈತರ ಖಾತೆಯ ಯಾವುದೇ ಹಣವನ್ನು ಬ್ಯಾಂಕ್ ಅಧಿಕಾರಿಗಳು ರೈತರ ಒಪ್ಪಿಗೆ ಇಲ್ಲದೆ ಮುರಿಯುವಂತಿಲ್ಲ ಈ ಬಗ್ಗೆ ಅರ್ಜಿ ಕೊಡಿ ಹಣವನ್ನು ಮರು ಸಂದಾಯ ಮಾಡಿಸುವೆ ಎಂದರು.

    ಸೀಡ್ ಬ್ಯಾಂಕ್ ಮ್ಯಾನೇಜರ್‌ಗೆ ರೈತರ ಹಣವನ್ನು ಮುರವಳಿ ಮಾಡದಂತೆ ಸೂಚನೆ ನೀಡಿದರು. ವಿಮುಕ್ತ ದೇವದಾಸಿಯರು ಸಂಘದ ಮೂಲಕ ಸ್ವಾಲಂಭಿ ಜೀವನ ನಡೆಸಲು ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಚಿಕ್ಕಿ ಘಟಕದ ಮೂಲಕ ಚಿಕ್ಕಿಗಳನ್ನು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿದ್ದೇವೆ.

    ಕಳೆದ ಮೂರು ತಿಂಗಳಿನಿಂದ ಅನುದಾನ ಇಲ್ಲವೆಂದು ಹಣ ನೀಡುತ್ತಿಲ್ಲ. ಹಣ ಕೇಳಲು ಅಧಿಕಾರಿ ಬಳಿ ಹೋದರೆ ಕ್ಯಾರೆ ಎನ್ನುತ್ತಿಲ್ಲ, ಬಡ್ಡಿಹಣ ಪಡೆದು ಬಂಡವಾಳ ಹಾಕಿ ಘಟಕ ನಡೆಸುತ್ತಿದ್ದೇವೆ, ಕೂಲಿ ಕಾರ್ಮಿಕರಿಗೂ ಸಂಬಳ ನೀಡಿಲ್ಲ ಲಕ್ಷಾಂತರ ರೂ. ನಮ್ಮ ಮೈಮೇಲೆ ಬಿದ್ದಿದೆ ಎಂದು ವಿಮುಕ್ತ ದೇವದಾಸಿ ಗಂಗಮ್ನ ಅಳಲುತೊಡಿಕೊಂಡಳು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿ.ಡಿ ಹಾಗೂ ಸಿಡಿಪಿಒನ್ನು ಕರೆದು ಕೂಡಲೇ ಇವರ ಹಣ ಮಂಜೂರು ಮಾಡುವಂತೆ ನಿರ್ದೇಶನ ನೀಡಿದರು. ಅದರಂತೆ ಸಂಧ್ಯಾಸುರಕ್ಷಾ, ಪಡಿತರ, ಪೋಡಿ ಖಾತೆ, ವಿದ್ಯುತ್ ಸಮಸ್ಯೆ,

    ಗಂಗಾ ಕಲ್ಯಾಣ, ಬ್ಯಾಂಕ್ ಸಾಲ, ವಸತಿ, ಸಾರಿಗೆ ಸೇರಿ ಸಾರ್ವಜನಿಕರ ನೂರಾರು ಅಹವಾಲುಗಳಿಗೆ ಶಾಸಕ ಎನ್.ಟಿ.ಶ್ರೀನಿವಾಸ್ ಹಾಗೂ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಾಳ್ಮೆಯಿಂದ ಆಲಿಸಿ, ಸಂಭಂಧಿಸಿದ ಅಧಿಕಾರಿಗಳಿಗೆ ಅರ್ಜಿ ರವಾನಿಸಿ ಸಮಸ್ಯೆಗಳನ್ನು ಬಗೆಹರಿಸಲು ನಿರ್ದೇಶನ ನೀಡಿದರು. ವಿವಿಧ ಇಲಾಖೆಗಳಿಂದ ಸುಮಾರು 150ಕ್ಕೂ ಹೆಚ್ಚು ಅರ್ಜಿಗಳನ್ನು ಸಾರ್ವಜನಿಕರು ನೀಡಿದರು.

    ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸೌಲಭ್ಯಗಳು ಸಿಗಲು ಸರ್ಕಾರ ಜನತಾದರ್ಶನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಸಾರ್ಥಕದ ಕಾರ್ಯವಾಗಿದೆ. ಜನರ ಅಹವಾಲನ್ನು ಅಧಿಕಾರಿಗಳು ಸ್ವೀಕರಿಸಿ, ಕಾಲಮಿತಿಯೊಳಗೆ ಸಮಸ್ಯೆಗಳನ್ನ ಬಗೆಹರಿಸಲು ಪ್ರಯತ್ನಿಸಬೇಕು. ವಿಳಂಬ ಧೋರಣೆ ಸರಿಯಲ್ಲ, ಆ ನಿಟ್ಟಿನಲ್ಲಿ ಸರ್ಕಾರ ತಾಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಅಧಿಕಾರಿಗಳು ಶ್ರಮವಹಿಸಿ ಕರ್ತವ್ಯ ನಿರ್ವಹಿಸಬೇಕು. ಇದಕ್ಕೆ ಪೂರಕವಾಗಿ ಸದಾ ನಿಮ್ಮೊಂದಿಗೆ ನಾನು ಹಾಗೂ ಜಿಲ್ಲಾಧಿಕಾರಿಗಳು ಇರುತ್ತೆವೆ.
    ಡಾ.ಎನ್.ಟಿ.ಶ್ರೀನಿವಾಸ್, ಶಾಸಕ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts