More

    ಸಮಸ್ಯೆಗಳಿಗೆ ಸಮಯೋಚಿತವಾಗಿ ಸ್ಪಂದಿಸಿ

    ಯಾದಗಿರಿ: ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಸಕರ್ಾರಿ ಅಧಿಕಾರಿಗಳು ಸಮಯೋಚಿತ ಹಾಗೂ ಸಕಾಲಕ್ಕೆ ಸ್ಪಂದಿಸುವ ಕೆಲಸ ಮಾಡುವಂತೆ ಉಪ ಲೋಕಾಯುಕ್ತ ನ್ಯಾಯಮೂತರ್ಿ ಕೆ.ಎನ್.ಫಣಿಂದ್ರ ಸೂಚಿಸಿದರು.

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶನಿವಾರ ಸಾರ್ವಜನಿಕ ಅಹವಾಲು , ಕುಂದು ಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು, ಸಕರ್ಾರಿ ಅಧಿಕಾರಿಗಳ ನಡುವಿನ ಪವಿತ್ರ ಬಾಂಧವ್ಯ ತಿಳಿಯಲು ಹಾಗೂ ವೃದ್ಧಿಸಲು ಈ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನರ ಉತ್ತಮ ಜೀವನಕ್ಕೆ ಅಡಿಪಾಯ ಹಾಕಲು ಅನುಕೂಲವಾಗುವಂತೆ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳಾದ ಸ್ವತಂತ್ರ ಮತ್ತು ಗೌರವಯುತ ಜೀವನಕ್ಕೆ ಅವರ ಅವಶ್ಯಕತೆಗಳಿಗೆ ಸಕಾಲಕ್ಕೆ ನೆರವಾಗುವಂತೆ ಕರೆ ನೀಡಿದರು.

    ಸರಕಾರ ಜನ ಕಲ್ಯಾಣಕ್ಕಾಗಿ ಹಲವು ಸವಲತ್ತುಗಳು ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ಅನುದಾನ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಫಲಾನುಭವಿಗಳಿಗೆ ಸಿಗಬಹುದಾದ ಸೌಲಭ್ಯಗಳನ್ನು ತಲುಪಿಸಬೇಕು. ಅತ್ಯಂತ ಶ್ರೇಷ್ಠ ಹಾಗೂ ಉತ್ಕೃಷ್ಟ ಜವಾಬ್ದಾರಿ ಹೊಂದಿರುವದನ್ನು ನೀವು ಮನಗಾಣಬೇಕು ಎಂದರು.

    ದೇಶದ ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ಮೂಲಭೂತ ಹಕ್ಕು ಮತ್ತು ಕರ್ತವ್ಯ ಗಳನ್ನು ಒದಗಿಸಿದ್ದಾರೆ. ಮಹಾತ್ಮ ಗಾಂಧೀಜಿ ಕಂಡ ಕನಸಿನಂತೆ ಅಸಮಾನತೆ, ಕೀಳು ಭಾವನೆ ಹೋಗಬೇಕು, ಸಮೃದ್ಧ ಭಾವನೆಗೆ ಅವಕಾಶ ಕಲ್ಪಿಸಿ ಉತ್ತಮ ಜೀವನಕ್ಕೆ ನೆರವಾಗಬೇಕು. ಕಾನೂನಿನ ವಿರುದ್ಧವಾಗಿ ಅಧಿಕಾರಿಗಳು ಕೆಲಸ ನಿರ್ವಹಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಅದರಂತೆ ಸ್ವಜನ ಪಕ್ಷಪಾತ, ಅನ್ಯಾಯ, ಕಾಲವಿಳಂಬ ಕೆಲಸಗಳನ್ನ ಮಾಡದಿರಲು ತಿಳಿಸಿದ ಅವರು, ಸಮಯೋಚಿತ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವಂತೆ ಸಲಹೆ ನೀಡಿದರು.

    ಅಧಿಕಾರಿಗಳ ನಿರ್ಲಕ್ಷ್ಯ, ಸಕಾಲಕ್ಕೆ ಫಲಾನುಭವಿಗಳಿಗೆ ಸೌಲಭ್ಯಗಳು ಕಲ್ಪಿಸದಿದ್ದಲ್ಲಿ ಅವರಿಗೆ ತೊಂದರೆಯಾಗುವ ಹಿನ್ನಲೆಯಲ್ಲಿ ಕಾನೂನಾತ್ಮಕವಾಗಿ ರಚನೆಯಾಗಿರುವ ಲೋಕಾಯುಕ್ತರು ಸಂಸ್ಥೆಯ ಮೂಲಕವೂ ಅವಶ್ಯಕ ಕ್ರಮ ಕೈಗೊಳ್ಳಲಾವುದು ಎಂದ ಅವರು ಕೆಲವು ಪತ್ರಿಕಾ ಮಾಧ್ಯಮದಲ್ಲಿ ಬರುವ ಸಮಸ್ಯೆ ಗಳ ಕುಂದು ಕೊರತೆ ಬಗ್ಗೆಯೂ ಸ್ವಯಂ ಪ್ರೇರಿತವಾಗು ದೂರು ನೋಂದಣಿ ಮಾಡಿಕೊಂಡು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts